AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೊಜ್ಜಿನ ಸಮಸ್ಯೆ ಎಗ್ ಕ್ವಾಲಿಟಿ ಮೇಲೆ ಪರಿಣಾಮ ಬೀರುತ್ತದೆಯೋ, ಇಲ್ಲವೋ ತಿಳಿದುಕೊಳ್ಳಿ

ತೂಕ ಹೆಚ್ಚಾಗುವುದರಿಂದ ಮಹಿಳೆಯರಲ್ಲಿ ಅನೇಕ ರೀತಿಯ ಸಮಸ್ಯೆಗಳು ಕಂಡುಬರುತ್ತದೆ. ಜೀವನಶೈಲಿ, ಆಹಾರ ಪದ್ಧತಿ, ಒತ್ತಡ ಇತ್ಯಾದಿ ಅಂಶಗಳು ಈ ಸಮಸ್ಯೆಗೆ ಮುಖ್ಯ ಕಾರಣ ಎಂದು ಹೇಳಬಹುದು. ಆದರೆ ಈ ಬೊಜ್ಜು ಅಥವಾ ದೇಹದ ತೂಕ ಹೆಚ್ಚಳವು ಎಗ್ ಕ್ವಾಲಿಟಿ ಅಥವಾ ಫಲವತ್ತತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆಯೇ ಎಂಬ ಅನುಮಾನ ಹಲವರನ್ನು ಕಾಡುತ್ತದೆ. ಈ ರೀತಿಯ ಗೊಂದಲಗಳಿಗೆ ಮತ್ತು ಬೊಜ್ಜು ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆಯೋ, ಇಲ್ಲವೋ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ.

ಬೊಜ್ಜಿನ ಸಮಸ್ಯೆ ಎಗ್ ಕ್ವಾಲಿಟಿ ಮೇಲೆ ಪರಿಣಾಮ ಬೀರುತ್ತದೆಯೋ, ಇಲ್ಲವೋ ತಿಳಿದುಕೊಳ್ಳಿ
The Impact Of Obesity On Egg Quality
ಪ್ರೀತಿ ಭಟ್​, ಗುಣವಂತೆ
|

Updated on: Oct 09, 2025 | 5:56 PM

Share

ಇತ್ತೀಚಿನ ದಿನಗಳಲ್ಲಿ ಬೊಜ್ಜಿನ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ, ಜೀವನಶೈಲಿ (Lifestyle), ಆಹಾರ ಪದ್ಧತಿ, ಒತ್ತಡ ಇತ್ಯಾದಿ ಅಂಶಗಳು ಈ ಸಮಸ್ಯೆಗೆ ಮುಖ್ಯ ಕಾರಣ ಎಂದು ಹೇಳಬಹುದು. ಒಮ್ಮೆ ಈ ರೀತಿಯ ಸಮಸ್ಯೆ ಆರಂಭವಾದರೆ ಅದರಿಂದ ಹೊರಬರುವುದು ಬಹಳ ಕಷ್ಟವಾಗುತ್ತದೆ. ಮಾತ್ರವಲ್ಲ ಮಧುಮೇಹ, ಹೃದಯಾಘಾತಕ್ಕೆ ಸಂಬಂಧಿಸಿದ ಸಮಸ್ಯೆಗಳು, ಕೊಬ್ಬಿನ ಪಿತ್ತಜನಕಾಂಗ ಮತ್ತು ಒತ್ತಡದಿಂದ ಉಂಟಾಗುವ ಹಾರ್ಮೋನ್ ಅಸಮತೋಲನದಂತಹ ವಿವಿಧ ರೀತಿಯ ಆರೋಗ್ಯ (Health) ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲಿಯೂ ಮಹಿಳೆಯರಲ್ಲಾಗುವ ತೂಕ ಹೆಚ್ಚಳದಿಂದ ಅನೇಕ ರೀತಿಯ ತೊಂದರೆಗಳಾಗಬಹುದು. ಆದರೆ ಈ ಬೊಜ್ಜು (Obesity) ಅಥವಾ ದೇಹದ ತೂಕ ಹೆಚ್ಚಳವು ಎಗ್ ಕ್ವಾಲಿಟಿ (Egg Quality) ಅಥವಾ ಫಲವತ್ತತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆಯೇ, ಎಂಬ ಅನುಮಾನ ಹಲವರನ್ನು ಕಾಡುತ್ತದೆ. ಈ ರೀತಿಯ ಗೊಂದಲಗಳಿಗೆ ಮತ್ತು ಬೊಜ್ಜು ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆಯೋ, ಇಲ್ಲವೋ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ.

ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ಮತ್ತು ಫಲವತ್ತತೆ ಸಮಸ್ಯೆಗಳಿಂದ ದೂರವಿರಲು ಮಹಿಳೆಯರು ಯಾವಾಗಲೂ ತೂಕವನ್ನು ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ಒಳ್ಳೆಯ ಜೀವನಶೈಲಿಯನ್ನು ಅನುಸರಿಸುವುದು ಬಹಳ ಉತ್ತಮ. ಬೊಜ್ಜು ಹೆಚ್ಚಾಗುವುದರಿಂದ ಹಾರ್ಮೋನುಗಳ ಅಸಮತೋಲನ, ಇನ್ಸುಲಿನ್ ಪ್ರತಿರೋಧ ಉಂಟಾಗಬಹುದು ಮತ್ತು ದೇಹದಲ್ಲಿ ಅಂಡಾಣುಗಳ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಇದರಿಂದ ಅಂಡೋತ್ಪತ್ತಿ ಮತ್ತು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಕಾರಣವಾಗಬಹುದು, ಜೊತೆಗೆ ಇವೆಲ್ಲವೂ ಅಂಡಾಣು ಬೆಳವಣಿಗೆಯ ಮೇಲೂ ಪರಿಣಾಮ ಬೀರಬಹುದು.

ಇದನ್ನೂ ಓದಿ: ಬೊಜ್ಜಿಗೆ ಕಾರಣವೇನು? ಯೋಗಾಸನದ ಮೂಲಕ ಈ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು ಎನ್ನುತ್ತಾರೆ ಡಾ. ವಂದನಾ

ನೈಸರ್ಗಿಕವಾಗಿ ಗರ್ಭಧರಿಸುವುದು ಕಷ್ಟ

ತೂಕ ಹೆಚ್ಚಾಗುವುದರಿಂದ ಮಹಿಳೆಯರು ಫಲವತ್ತತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಇನ್ನು ಬೊಜ್ಜು ಹೆಚ್ಚಿರುವ ಮಹಿಳೆಯರಲ್ಲಿ ಗರ್ಭಪಾತದಂತಹ ಅಪಾಯ ಬೇರೆಯವರಿಗೆ ಹೋಲಿಕೆ ಮಾಡಿದರೆ ಹೆಚ್ಚಾಗಿರುತ್ತದೆ. ಹೆಚ್ಚುವರಿಯಾಗಿ, ಗರ್ಭಾವಸ್ಥೆಯಲ್ಲಿ ಮಧುಮೇಹದಂತಹ ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳು ಸಹ ಉಂಟಾಗಬಹುದು. ಬೊಜ್ಜಿನ ಸಮಸ್ಯೆಯಿಂದಾಗಿ, ಮಹಿಳೆಯರ ಅಂಡಾಣುಗಳ ಗುಣಮಟ್ಟ ಕಡಿಮೆಯಾಗುತ್ತದೆ. ಮಾತ್ರವಲ್ಲ ತೂಕ ಹೆಚ್ಚಾಗಿದ್ದು ಗರ್ಭಧಾರಣೆಯ ಬಗ್ಗೆ ಯೋಜಿಸುತ್ತಿದ್ದರೆ, ನೈಸರ್ಗಿಕವಾಗಿ ಗರ್ಭಧರಿಸುವುದು ಕಷ್ಟಕರವಾಗಬಹುದು. ನಿಮ್ಮ ಅಂಡಾಶಯಗಳು ಉತ್ತಮ ಗುಣಮಟ್ಟದ ಅಂಡಾಣುಗಳನ್ನು ಉತ್ಪಾದಿಸದಿದ್ದರೆ, ಅದಕ್ಕೆ ಬೊಜ್ಜು ಕಾರಣವಾಗಿರಬಹುದು. ಹಾಗಾಗಿ ಫಲವತ್ತತೆಗೆ ಸಂಬಂಧಿಸಿದ ಸಮಸ್ಯೆ ಮತ್ತು ಅಂಡಾಣುಗಳ ಗುಣಮಟ್ಟ ಕಡಿಮೆಯಾಗಬಾರದು ಎಂದರೆ ನಿಮ್ಮ ದೇಹಕ್ಕೆ ಅನುಗುಣವಾಗಿ ತೂಕ ಇರುವಂತೆ ಕಾಯ್ದುಕೊಳ್ಳಬೇಕು. ಸಾಧ್ಯವಾದಷ್ಟು ಆರೋಗ್ಯಕರ ಆಹಾರಗಳನ್ನೇ ಸೇವನೆ ಮಾಡಬೇಕು. ಈ ರೀತಿ ಸಲಹೆಗಳನ್ನು ಪಾಲಿಸಿದಲ್ಲಿ ನಿಮ್ಮ ಆರೋಗ್ಯ ಯಾವಾಗಲು ಚೆನ್ನಾಗಿರುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ