AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಡ ಅಥವಾ ಬಲ… ಯಾವ ಕಡೆ ಮಲಗುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿಯಿರಿ

ನಾವು ಮಲಗುವ ರೀತಿ ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಹಲವರಿಗೆ ಇದರ ಬಗ್ಗೆ ತಿಳಿದಿಲ್ಲ. ಸರಿಯಾದ ರೀತಿಯಲ್ಲಿ ಮಲಗುವುದರಿಂದ ಜೀರ್ಣಕಾರಿ ಸಮಸ್ಯೆಗಳು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಆದರೆ ಮಲಗುವ ಭಂಗಿ ಸರಿಯಾಗಿ ಇಲ್ಲದಿದ್ದರೆ ಆರೋಗ್ಯ ನಮಗರಿವಿಲ್ಲದಂತೆಯೇ ಹಾಳಾಗುತ್ತದೆ ಹಾಗಾದರೆ, ನಾವು ಮಲಗುವ ರೀತಿ ಹೇಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ ಮತ್ತು ಅವುಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಎಡ ಅಥವಾ ಬಲ... ಯಾವ ಕಡೆ ಮಲಗುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿಯಿರಿ
The Best Sleeping Position
ಪ್ರೀತಿ ಭಟ್​, ಗುಣವಂತೆ
|

Updated on: Oct 09, 2025 | 4:30 PM

Share

ನಾವು ಮಲಗುವ ರೀತಿ ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಅದಕ್ಕಾಗಿಯೇ ಅವರು ತಮಗೆ ಇಷ್ಟ ಬಂದಂತೆ ಮಲಗುತ್ತಾರೆ. ಕೆಲವರು ಎಡಕ್ಕೆ ತಿರುಗಿ ಮಲಗಿದರೆ ಇನ್ನು ಕೆಲವರು ಬಲ ಮಗ್ಗುಲಿನಲ್ಲಿ ಮಲಗುತ್ತಾರೆ. ಮತ್ತೆ ಕೆಲವರು ಅಂಗಾತವಾಗಿ ನಿದ್ರೆ (Sleep) ಮಾಡುತ್ತಾರೆ. ಹೀಗೆ ಪ್ರತಿಯೊಬ್ಬರೂ ಕೂಡ ಅವರವರಿಗೆ ಯಾವ ಭಂಗಿಯಲ್ಲಿ ಮಲಗುವುದು ನೆಮ್ಮದಿ ಕೊಡುತ್ತದೆಯೋ ಅವುಗಳನ್ನು ಆಯ್ಕೆ ಮಾಡಿ ಮಲಗುತ್ತಾರೆ. ಆದರೆ ನೀವು ಮಲಗುವ ಭಂಗಿ ಸರಿಯಾಗಿ ಇರದಿದ್ದರೆ ಅನೇಕ ರೀತಿಯ ಆರೋಗ್ಯ (Health) ಸಮಸ್ಯೆಗಳು ಕಂಡು ಬರುತ್ತದೆ. ಅದೇ ಸರಿಯಾದ ರೀತಿಯಲ್ಲಿ ಮಲಗಿದರೆ ಜೀರ್ಣಕಾರಿ ಸಮಸ್ಯೆಗಳು ಸೇರಿದಂತೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಹಾಗಾದರೆ, ನಾವು ಮಲಗುವ ರೀತಿ ಹೇಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ ಮತ್ತು ಅವುಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಮ್ಮ ದೇಹಕ್ಕೆ ಆಹಾರ ಎಷ್ಟು ಮುಖ್ಯವೋ, ನಿದ್ರೆಯೂ ಅಷ್ಟೇ ಮುಖ್ಯ ಎಂಬುದು ನಿಮಗೆ ತಿಳಿದಿರಬಹುದು. ದಿನವಿಡೀ ಸಕ್ರಿಯರಾಗಿ ಎಲ್ಲಾ ರೀತಿಯ ಕೆಲಸಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸಲು ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕು. ಆದರೆ ಮಲಗುವಾಗ ಪ್ರತಿಯೊಬ್ಬರೂ ಕೂಡ ವಿಭಿನ್ನ ಭಂಗಿಗಳಲ್ಲಿ ನಿದ್ರಿಸುತ್ತಾರೆ. ಆದರೆ ಈ ಅಭ್ಯಾಸಗಳು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದರೆ ಮಲಗುವ ಭಂಗಿ ಹೇಗಿದ್ದರೆ ಒಳ್ಳೆಯದು, ಯಾವ ಪೊಸಿಷನ್ ನಮ್ಮ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ ಎಂಬುದನ್ನು ತಿಳಿದುಕೊಂಡು ಅದನ್ನು ಅನುಸರಿಸುವುದು ಬಹಳ ಮುಖ್ಯ, ಹೆಚ್ಚುತ್ತಿರುವ ಒತ್ತಡ, ಆಹಾರದಲ್ಲಿ ಮಾಡಿಕೊಂಡಂತಹ ಬದಲಾವಣೆಗಳೆಲ್ಲವೂ ನಮ್ಮ ನಿದ್ರೆಯ ಮೇಲೆ ಪರಿಣಾಮ ಬಿರುವುದರಿಂದ ನಾವು ಸಾಧ್ಯವಾದಷ್ಟು ಆರೋಗ್ಯ ಕಾಪಾಡಿಕೊಳ್ಳಲು ನೋಡಬೇಕು.

ಎಡಭಾಗಕ್ಕೆ ತಿರುಗಿ ಮಲಗುವುದರಿಂದ ಸಿಗುವ ಪ್ರಯೋಜನ:

ಸಾಮಾನ್ಯವಾಗಿ ಮಲಗುವಾಗ ಕೆಲವರು ಎಡಭಾಗಕ್ಕೆ ತಿರುಗಿ ಮಲಗುವುದಕ್ಕೆ ಬಯಸುತ್ತಾರೆ, ಇನ್ನು ಕೆಲವರು ಬಲಭಾಗಕ್ಕೆ ತಿರುಗಿ ಮಲಗುತ್ತಾರೆ. ರೀತಿ ನಾವು ಆಯ್ಕೆ ಮಾಡಿಕೊಳ್ಳುವಂತಹ ರೀತಿ ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಎಡಭಾಗಕ್ಕೆ ತಿರುಗಿ ಮಲಗುವುದರಿಂದ ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳಿವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ, ಹೃದಯಕ್ಕೆ ಸಂಬಂಧಿಸಿದ ಅಪಾಯಗಳು ಬರುವುದನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ ಇಂದಿನ ಆಧುನಿಕ ಯುಗದಲ್ಲಿ, ಅನೇಕರು ದೀರ್ಘಕಾಲ ಒಂದೇ ಜಾಗದಲ್ಲಿ ಕುಳಿತುಕೊಂಡು ಕೆಲಸಗಳನ್ನು ಮಾಡುತ್ತಿರುತ್ತಾರೆ. ಇದರ ಪರಿಣಾಮ ಹಲವರು ಬೆನ್ನು ನೋವಿನಂತಹ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಅಂತಹ ಸಂದರ್ಭಗಳಲ್ಲಿ, ಅವರಿಗೆ ಸರಿಯಾಗಿ ನಿದ್ರೆ ಬರದಿದ್ದರೆ, ಆ ನೋವು ಇನ್ನಷ್ಟು ತೀವ್ರಗೊಳ್ಳುತ್ತದೆ. ಆದ್ದರಿಂದ, ನಿಮ್ಮ ಎಡಭಾಗದಲ್ಲಿ ಮಲಗುವುದರಿಂದ, ನೀವು ನೋವಿನಿಂದ ಪರಿಹಾರ ಪಡೆಯಬಹುದು.

ಇದನ್ನೂ ಓದಿ: ದಿನಕ್ಕೆ 7 ಗಂಟೆಗಿಂತಲೂ ಕಡಿಮೆ ನಿದ್ರೆ ಮಾಡುತ್ತಿದ್ದೀರಾ? ಹಾಗಿದ್ದರೆ ನಿಮಗೆ ಅಪಾಯ ತಪ್ಪಿದ್ದಲ್ಲ

ನಿಮ್ಮ ಬಲಭಾಗದಲ್ಲಿ ಅಥವಾ ಹೊಟ್ಟೆಯ ಮೇಲೆ ಮಲಗುವ ಅಭ್ಯಾಸ ನಿಮಗಿದ್ದರೆ, ಅದನ್ನು ತಕ್ಷಣ ಬದಲಾಯಿಸಿಕೊಳ್ಳಿ. ಏಕೆಂದರೆ ಈ ರೀತಿ ಮಲಗುವುದು ನಿಮ್ಮ ನಿದ್ರೆಯ ಜೊತೆಗೆ ನಿಮ್ಮ ದೇಹದ ಅಂಗಗಳ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ನಿಮ್ಮ ಎಡಭಾಗದಲ್ಲಿ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ನಿಮ್ಮ ಕರುಳು ಮತ್ತು ಕರುಳಿನ ಚಲನೆಗೆ ಪ್ರಯೋಜನಕಾರಿಯಾಗಿದೆ. ಎಡಭಾಗಕ್ಕೆ ಮಗ್ಗುಲಾಗಿ ಮಲಗುವುದು ನಮ್ಮ ಹೃದಯಕ್ಕೆ ಪ್ರಯೋಜನಕಾರಿ. ಹೃದಯವು ನಮ್ಮ ದೇಹದ ಎಡಭಾಗದಲ್ಲಿದೆ. ಎಡಭಾಗಕ್ಕೆ ಮಗ್ಗುಲಾಗಿ ಮಲಗುವುದರಿಂದ ಹೃದಯಕ್ಕೆ ರಕ್ತ ಪರಿಚಲನೆ ಸುಧಾರಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ