AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐ ಡ್ರಾಪ್ ಹಾಕಿಕೊಳ್ಳುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ

99% ಜನರು ಕಣ್ಣಿಗೆ ಹನಿ ಅಥವಾ ಐ ಡ್ರಾಪ್ ಹಾಕಿಕೊಳ್ಳುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಆದರೆ ಯಾರಿಗೂ ಇದು ಸರಿಯಲ್ಲ ಎಂಬುದೇ ತಿಳಿದಿಲ್ಲ. ಹಾಗಾಗಿ ಇದನ್ನು ಬದಲಿಸಿಕೊಳ್ಳಲು ಯಾರು ಕೂಡ ಪ್ರಯತ್ನವೇ ಮಾಡುವುದಿಲ್ಲ. ಆದರೆ ಹೆಚ್ಚಿನ ಜನರಿಗೆ ಕಣ್ಣಿಗೆ ಬಿಡುವಂತಹ ಈ ಹನಿಗಳನ್ನು ಎಷ್ಟು ಹಾಕಬೇಕು, ಯಾವ ರೀತಿ ಉಪಯೋಗ ಮಾಡಬೇಕು ಎಂಬುದೇ ತಿಳಿದಿರುವುದಿಲ್ಲ. ಆದರೆ ನಾವು ಮಾಡುವ ಇಂತಹ ಸಾಮಾನ್ಯ ತಪ್ಪುಗಳು ಔಷಧದ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ ಮತ್ತು ಕಣ್ಣಿನ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಈ ರೀತಿ ಆಗುವುದನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ತಿಳಿಯಲು ಈ ಸ್ಟೋರಿ ಓದಿ.

ಐ ಡ್ರಾಪ್ ಹಾಕಿಕೊಳ್ಳುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ
Eye Drop
ಪ್ರೀತಿ ಭಟ್​, ಗುಣವಂತೆ
|

Updated on: Oct 09, 2025 | 8:47 PM

Share

ಸಾಮಾನ್ಯವಾಗಿ ಐ ಡ್ರಾಪ್ (Eye Drop) ಬಗ್ಗೆ ನೀವು ಕೇಳಿರಬಹುದು. ಕಣ್ಣಿನಲ್ಲಿ (Eye) ಕಂಡು ಬರುವ ಅನೇಕ ರೀತಿಯ ಸಮಸ್ಯೆಗಳನ್ನು ನಿವಾರಿಸಲು ಇದನ್ನು ಉಪಯೋಗ ಮಾಡಲಾಗುತ್ತದೆ. ಆದರೆ ಅನೇಕ ಬಾರಿ, ವೈದ್ಯರು ನೀಡುವ ಕಣ್ಣಿಗೆ ಬಿಡುವ ಹನಿ ಅಥವಾ ಐ ಡ್ರಾಪ್ ಗಳನ್ನು ಯಾವ ರೀತಿ ಉಪಯೋಗ ಮಾಡಬೇಕು ಎಂಬುದನ್ನು ತಿಳಿದುಕೊಂಡಿರುವುದಿಲ್ಲ. ಜೊತೆಗೆ ಅವುಗಳನ್ನು ಹೇಗೆ ಹಾಕಬೇಕೆಂದು ಕೂಡ ಯೋಚಿಸುವುದಿಲ್ಲ. ಕಣ್ಣುಗಳಿಗೆ ಎರಡು ಹನಿ ಹಾಕಿದರೆ ಸಾಕು ಎಂದು ನಮಗೆ ನಾವೇ ಅಂದುಕೊಂಡಿರುತ್ತೇವೆ. ಇದು ನಾವು ಮಾಡುವ ದೊಡ್ಡ ತಪ್ಪು ಎಂದರೆ ನೀವು ನಂಬುತ್ತೀರಾ? ಹೌದು. ಹೆಚ್ಚಿನ ಜನರಿಗೆ ಕಣ್ಣಿಗೆ ಬಿಡುವಂತಹ ಈ ಹನಿಗಳನ್ನು ಎಷ್ಟು ಹಾಕಬೇಕು, ಯಾವ ರೀತಿ ಉಪಯೋಗ ಮಾಡಬೇಕು ಎಂಬುದೇ ತಿಳಿದಿರುವುದಿಲ್ಲ. ಆದರೆ ಕಣ್ಣಿನ ಶಸ್ತ್ರಚಿಕಿತ್ಸಕ ಡಾ. ಭಾನು ಹಂತ ಹಂತದ ವಿಧಾನವನ್ನು ವಿವರಿಸಿದ್ದು ಮತ್ತಷ್ಟು ಮಾಹಿತಿ ಈ ಸ್ಟೋರಿಯಲ್ಲಿದೆ.

ಕೈ ತೊಳೆದು ಐ ಡ್ರಾಪ್ ಹಾಕಿ: ಹೆಚ್ಚಿನ ಜನರು ಕೈ ತೊಳೆಯದೆಯೇ ಐ ಡ್ರಾಪ್ ಹಾಕಲು ಹೋಗುತ್ತಾರೆ. ಆದರೆ ಇದು ಸರಿಯಲ್ಲ. ಐ ಡ್ರಾಪ್ ಹಾಕುವಾಗ ನಮ್ಮ ಕೈಗಳು ಕಣ್ಣುಗಳನ್ನು ಸ್ಪರ್ಶಿಸಬೇಕಾಗುತ್ತದೆ ಆ ಸಮಯದಲ್ಲಿ ಕೈಗಳಲ್ಲಿರುವ ಸೋಂಕು ಕಣ್ಣುಗಳಿಗೆ ಹೋಗುವ ಅಪಾಯವಿದೆ ಮಾತ್ರವಲ್ಲ ಕೆಲವರಲ್ಲಿ ಇದು, ಕಣ್ಣುಗಳ ಉರಿಗೂ ಕಾರಣವಾಗಬಹುದು ಜೊತೆಗೆ ಕಣ್ಣುಗಳಿಗೆ ಹಾನಿಯಾಗುವಂತಹ ಅಪಾಯ ಹೆಚ್ಚಾಗಿರಬಹುದು. ನಮ್ಮ ಕಣ್ಣುಗಳು ತುಂಬಾ ಸೂಕ್ಷ್ಮವಾಗಿರುವುದರಿಂದ ಐ ಡ್ರಾಪ್ ಹಾಕುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆಯುವುದು ಬಹಳ ಅವಶ್ಯಕ.

ಒಂದಕ್ಕಿಂತ ಹೆಚ್ಚು ಹನಿ ಹಾಕಬೇಡಿ: ಡಾ. ಭಾನು ಅವರು ಹೇಳುವ ಪ್ರಕಾರ, ಯಾವಾಗಲೂ ಕಣ್ಣಿಗೆ ಐ ಡ್ರಾಪ್ ಹಾಕುವಾಗ ಒಂದೇ ಹನಿ ಹಾಕಬೇಕು. ನೀವು ಒಂದಕ್ಕಿಂತ ಹೆಚ್ಚು ಹನಿ ಹಾಕಿದರೆ, ಅದು ಪ್ರಯೋಜನಕಾರಿಯಾಗಿರುವುದಿಲ್ಲ. ಜೊತೆಗೆ ನಿಮ್ಮ ವೈದ್ಯರು ಎರಡೂ ಕಣ್ಣುಗಳಿಗೆ ಐ ಡ್ರಾಪ್ ಹಾಕಲು ಹೇಳಿದ್ದರೆ ನೀವು ಒಂದು ಕಣ್ಣಿಗೆ ಹಾಕಿದ ನಂತರ ಮತ್ತೊಂದು ಕಣ್ಣಿಗೆ ಹಾಕಬೇಕು. ಯಾವುದೇ ಕಾರಣಕ್ಕೂ ಒಟ್ಟಿಗೆ ಎರಡು ಕಣ್ಣುಗಳಿಗೆ ಒಮ್ಮೆಲೇ ಹಾಕಬಾರದು. ಇದು ಒಳ್ಳೆಯದಲ್ಲ.

ಇದನ್ನೂ ಓದಿ: ಕಣ್ಣಿಗೆ ಧೂಳು, ಕಸ ಬಿದ್ದರೆ ಉಜ್ಜಲು ಹೋಗಬೇಡಿ, ಅದರ ಬದಲು ಹೀಗೆ ಮಾಡಿ

ಕಣ್ಣಿಗೆ ಐ ಡ್ರಾಪ್ ಹಾಕಿ ಒಂದು ನಿಮಿಷ ಕಣ್ಣು ಮುಚ್ಚಿ: ಸಾಮಾನ್ಯವಾಗಿ ಕಣ್ಣಿಗೆ ಐ ಡ್ರಾಪ್ ಹಾಕುವಾಗ ಮೊದಲು ಮೇಲಕ್ಕೆ ನೋಡಿ ಕೈಯಿಂದ ಕೆಳಗಿನ ಕಣ್ಣುರೆಪ್ಪೆಯನ್ನು ಕೆಳಗೆ ಎಳೆದು ನಂತರ ನಿಧಾನವಾಗಿ ಐ ಡ್ರಾಪ್ ಗಳನ್ನು ನಿಮ್ಮ ಕಣ್ಣಿಗೆ ಹಾಕಿ. ಬಳಿಕ ಡಾ. ಭಾನು ಅವರು ಹೇಳುವಂತೆ ಕನಿಷ್ಠ ಒಂದು ನಿಮಿಷ ಕಣ್ಣು ಮುಚ್ಚಿಡಿ. ಈ ಔಷಧವು ಪರಿಣಾಮಕಾರಿಯಾಗಿ ಕೆಲಸ ಮಾಡಲು ಈ ವಿಧಾನಗಳು ನಿಮಗೆ ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ