ಹೆಚ್ಚುತ್ತಿರುವ ಮಾಲಿನ್ಯ, ಚರ್ಮದ ಕ್ಯಾನ್ಸರ್​​​ಗೆ ಕಾರಣವಾಗಬಹುದು? ಹೇಗೆ ತಡೆಗಟ್ಟುವುದು ತಿಳಿದುಕೊಳ್ಳಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 31, 2024 | 4:23 PM

ರಾಜ್ಯಗಳಲ್ಲಿ ಮಾಲಿನ್ಯದ ಪ್ರಮಾಣ ಅತ್ಯಂತ ಅಪಾಯಕಾರಿ ಮಟ್ಟಕ್ಕೆ ತಲುಪುತ್ತಿದೆ. ಇಂತಹ ಸಮಯದಲ್ಲಿ ಗಾಳಿಯಲ್ಲಿರುವ ಅತ್ಯಂತ ಅಪಾಯಕಾರಿ ಸಣ್ಣ ಕಣಗಳು ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತವೆ. ಅದರಲ್ಲಿಯೂ ದೆಹಲಿ ಮತ್ತಿತರ ಭಾಗದಲ್ಲಿ ಜನರು ಕೆಮ್ಮು, ತಲೆನೋವು, ಕಣ್ಣುಗಳಲ್ಲಿ ಕಿರಿಕಿರಿ, ಆಯಾಸವಾಗುತ್ತಿರುವ ಬಗ್ಗೆ ಹೆಚ್ಚು ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ಇದು ಮುಂದುವರೆದರೆ ಇದರ ಜೊತೆಗೆ ಮಾಲಿನ್ಯದಿಂದ ಅನೇಕ ದೀರ್ಘಕಾಲೀನ ಕಾಯಿಲೆಗಳನ್ನು ಕೂಡ ಎದುರಿಸಬೇಕಾಗಬಹುದು. ಮುಂದೊಂದು ದಿನ ನಾವು ಕೂಡ ಇಂತಹ ಪರಿಸ್ಥಿತಿ ಬರುವುದನ್ನು ನೋಡುವುದರಲ್ಲಿ ಆಶ್ಚರ್ಯವಿಲ್ಲ. ನಮ್ಮ ಸುತ್ತಮುತ್ತ ಚೆನ್ನಾಗಿದೆ, ಎಂದು ನೆಮ್ಮದಿ ನಿದ್ದೆ ಮಾಡುವವರು ಇಂದೇ ಎಚ್ಛೆತ್ತುಕೊಳ್ಳಿ ಈ ರೀತಿಯ ಸಮಸ್ಯೆಗಳ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳಿ.

ಹೆಚ್ಚುತ್ತಿರುವ ಮಾಲಿನ್ಯ, ಚರ್ಮದ ಕ್ಯಾನ್ಸರ್​​​ಗೆ ಕಾರಣವಾಗಬಹುದು? ಹೇಗೆ ತಡೆಗಟ್ಟುವುದು ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
Follow us on

ನಮ್ಮ ದೇಶದ ಅನೇಕ ರಾಜ್ಯಗಳಲ್ಲಿ ಮಾಲಿನ್ಯದ ಪ್ರಮಾಣ ಅತ್ಯಂತ ಅಪಾಯಕಾರಿ ಮಟ್ಟಕ್ಕೆ ತಲುಪುತ್ತಿದೆ. ಇಂತಹ ಸಮಯದಲ್ಲಿ ಗಾಳಿಯಲ್ಲಿರುವ ಅತ್ಯಂತ ಅಪಾಯಕಾರಿ ಸಣ್ಣ ಕಣಗಳು ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತವೆ. ಅದರಲ್ಲಿಯೂ ದೆಹಲಿ ಮತ್ತಿತರ ಭಾಗದಲ್ಲಿ ಜನರು ಕೆಮ್ಮು, ತಲೆನೋವು, ಕಣ್ಣುಗಳಲ್ಲಿ ಕಿರಿಕಿರಿ, ಆಯಾಸವಾಗುತ್ತಿರುವ ಬಗ್ಗೆ ಹೆಚ್ಚು ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ಇದು ಮುಂದುವರೆದರೆ ಇದರ ಜೊತೆಗೆ ಮಾಲಿನ್ಯದಿಂದ ಅನೇಕ ದೀರ್ಘಕಾಲೀನ ಕಾಯಿಲೆಗಳನ್ನು ಕೂಡ ಎದುರಿಸಬೇಕಾಗಬಹುದು. ಮುಂದೊಂದು ದಿನ ನಾವು ಕೂಡ ಇಂತಹ ಪರಿಸ್ಥಿತಿ ಬರುವುದನ್ನು ನೋಡುವುದರಲ್ಲಿ ಆಶ್ಚರ್ಯವಿಲ್ಲ. ನಮ್ಮ ಸುತ್ತಮುತ್ತ ಚೆನ್ನಾಗಿದೆ, ಎಂದು ನೆಮ್ಮದಿ ನಿದ್ದೆ ಮಾಡುವವರು ಇಂದೇ ಎಚ್ಛೆತ್ತುಕೊಳ್ಳಿ ಈ ರೀತಿಯ ಸಮಸ್ಯೆಗಳ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳಿ.

ನಿಮಗೆ ತಿಳಿದಿದೆಯೇ ವಿಷಕಾರಿ ಗಾಳಿಯನ್ನು ಉಸಿರಾಡುವುದು ದಿನಕ್ಕೆ 12 ಸಿಗರೇಟುಗಳಿಗೆ ಸಮನಾದ ಧೂಮಪಾನ ಮಾಡಿದಂತೆ. ಈಗ ನೀವೇ ಊಹಿಸಿ ನಮ್ಮ ಪ್ರಕೃತಿ ಎಷ್ಟು ಹದಗೆಡುತ್ತಿದೆ ಎಂದು. ಇದು ನಿಮ್ಮ ಜೀವನದ ಆಯಸ್ಸನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮನ್ನು ಅನೇಕ ಅಪಾಯಕಾರಿ ಕಾಯಿಲೆಗಳನ್ನು ಅನುಭವಿಸುವಂತೆ ಮಾಡುತ್ತದೆ.

ಮಾಲಿನ್ಯದಿಂದ ಉಂಟಾಗುವ ರೋಗಗಳು

ತಜ್ಞರ ಪ್ರಕಾರ, ಮಾಲಿನ್ಯವು ನಿಮ್ಮ ಶ್ವಾಸಕೋಶದ ಮೇಲೆ ತುಂಬಾ ಪರಿಣಾಮ ಬೀರುತ್ತದೆ, ಇದು ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ, ಅಲ್ಲದೆ ಮುಂಬರುವ ದಿನಗಳಲ್ಲಿ ಚರ್ಮದ ಕ್ಯಾನ್ಸರ್ ಕೂಡ ಕಂಡು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಲುಷಿತ ಗಾಳಿಯಲ್ಲಿ ಅನೇಕ ರೀತಿಯ ಹಾನಿಕಾರಕ ಕಣಗಳಿವೆ, ಇದು ಚರ್ಮಕ್ಕೆ ತುಂಬಾ ಮಾರಕವಾಗಿವೆ ಅಲ್ಲದೆ ಅವು ನಮ್ಮ ಚರ್ಮ, ಕಣ್ಣುಗಳು ಮತ್ತು ಉಸಿರಾಟದೊಂದಿಗೆ ಒಳಗೆ ಹೋಗುವ ಮೂಲಕ ನಮ್ಮ ದೇಹಕ್ಕೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತವೆ ಎಂದು ತಜ್ಞರು ಹೇಳುತ್ತಾರೆ. ಇಂದು ನಿಮಗೆ ಅದರ ಪರಿಣಾಮಗಳು ತಿಳಿಯದಿರಬಹುದು, ಆದರೆ ಮುಂಬರುವ ಸಮಯದಲ್ಲಿ, ಅನೇಕ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು, ಅದಲ್ಲದೆ ಅವು ನಮ್ಮ ದೇಹದಲ್ಲಿ ದೀರ್ಘಕಾಲ ಉಳಿಯುವುದರಿಂದ ಅದು ಸುಲಭವಾಗಿ ಹೋಗುವದಿಲ್ಲ .

ಚರ್ಮದ ಮೇಲೆ ಮಾಲಿನ್ಯದ ಪರಿಣಾಮಗಳು

ವೈದ್ಯರು ಹೇಳುವ ಪ್ರಕಾರ, ಮಾಲಿನ್ಯದಿಂದಾಗಿ ನಿಮ್ಮ ಚರ್ಮವು ಹದಗೆಡುತ್ತಿದೆ, ಅದಕ್ಕಾಗಿಯೇ ಹೆಚ್ಚು ಸುತ್ತಾಡುವ ಜನರ ಮುಖ ವಯಸ್ಸಾದಂತೆ ಕಾಣುತ್ತದೆ. ಜೊತೆಗೆ ಚರ್ಮದ ಮೇಲೆ ಹೆಚ್ಚುವರಿ ವರ್ಣದ್ರವ್ಯ ಮತ್ತು ಸುಕ್ಕುಗಳು ಬರಲು ಪ್ರಾರಂಭಿಸುತ್ತವೆ. ಇದರಿಂದ ಚರ್ಮದ ಮೇಲೆ ಶುಷ್ಕತೆ ಮತ್ತು ಬಿರುಕುಗಳು ಕಂಡುಬರುತ್ತವೆ ಎಂದು ಹೇಳುತ್ತಾರೆ.

ಇದನ್ನೂ ಓದಿ: ಕಣ್ಣಿನ ಕೆಳಭಾಗದಲ್ಲಿ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿದರೆ ಏನಾಗುತ್ತೆ ನೋಡಿ

ಚರ್ಮದ ಆರೈಕೆ ಮಾಡುವುದು ಹೇಗೆ?

  • ಮಾಲಿನ್ಯದಿಂದ ನಿಮ್ಮ ಚರ್ಮವನ್ನು ಕಾಪಾಡಿಕೊಳ್ಳಲು ಮೊದಲು ನಿಮ್ಮ ತ್ವಚೆಯನ್ನು ತೇವಾಂಶದಿಂದ ಇರಿಸಿಕೊಳ್ಳಿ. ಚರ್ಮಕ್ಕೆ ನಿಯಮಿತವಾಗಿ ತೆಂಗಿನ ಎಣ್ಣೆ ಮತ್ತು ಉತ್ತಮ ಮಾಯಿಶ್ಚರೈಸರ್ ಕ್ರೀಮ್ ಅನ್ನು ಬಳಸಬಹುದು.
  •  ಸ್ನಾನ ಮಾಡುವಾಗ ಹೆಚ್ಚು ಬಿಸಿನೀರನ್ನು ಬಳಸಬೇಡಿ, ಇದು ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ.
  • ಚರ್ಮವನ್ನು ಹೈಡ್ರೇಟ್ ಆಗಿಡಲು ಹೆಚ್ಚು ಹೆಚ್ಚು ನೀರು ಕುಡಿಯಿರಿ.
  • ಹೊರಗೆ ಹೋಗುವಾಗ, ನಿಮ್ಮ ಚರ್ಮವನ್ನು ಸಾಧ್ಯವಾದಷ್ಟು ಮುಚ್ಚಿಕೊಂಡು ತಿರುಗಾಡಿ.
  • ಹೆಚ್ಚಿನ ದಟ್ಟಣೆ ಇರುವಾಗ ವಾಕಿಂಗ್ ಗೆ ಹೋಗಬೇಡಿ.
  • ಆಹಾರದ ಬಗ್ಗೆ ಕಾಳಜಿ ವಹಿಸಿ. ಹಸಿರು ತರಕಾರಿಗಳು, ಧಾನ್ಯಗಳು ಮತ್ತು ಹಣ್ಣುಗಳನ್ನು ಆಹಾರದಲ್ಲಿ ಸೇವಿಸಿ.
  • ಹೆಚ್ಚು ಹೆಚ್ಚು ದ್ರವ ರೂಪದ ಆಹಾರವನ್ನು ಸೇವನೆ ಮಾಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ