ಕೊರೊನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ: ಡಾ.ರಣದೀಪ್​ ಗುಲೇರಿಯಾ

|

Updated on: May 21, 2021 | 1:12 PM

ಕೊರೊನಾ ವೈರಸ್​ ಮೂರನೇ ತರಂಗ ಮಕ್ಕಳ ಮೇಲೆ ಹೆಚ್ಚು ಕಾಣಿಸಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ ಡಾ. ರಣದೀಪ್​, ವೈರಸ್​ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕೊರೊನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ: ಡಾ.ರಣದೀಪ್​ ಗುಲೇರಿಯಾ
ಡಾ. ರಣದೀಪ್ ಗುಲೇರಿಯಾ
Follow us on

ಕೊವಿಡ್-19 ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿದ್ದಂತೆಯೇ ಬ್ಲ್ಯಾಕ್​ಫಂಗಸ್​ (ಮ್ಯೂಕೋರ್ಮೈಕೋಸಿಸ್​) ಕಾಣಿಸಿಕೊಳ್ಳುತ್ತಿದೆ. ಇದನ್ನು ತಡೆಗಟ್ಟಲು ನಿರಂತರ ಶ್ರಮವಹಿಸಬೇಕು. ಕೊರೊನಾ ಸೋಂಕು ಹರಡುವಿಕೆ ಕಡಿಮೆಯಾಗುತ್ತಿದ್ದಂತೆಯೇ ಬ್ಲ್ಯಾಕ್​ ಫಂಗಸ್​ ಶಿಲೀಂಧ್ರಗಳ ಸೋಂಕು ಬಹುಶಃ ಕಡಿಮೆಯಾಗುತ್ತಾ ಬರುತ್ತದೆ ಎಂದು ಏಮ್ಸ್​ ನಿರ್ದೇಶಕ ಡಾ.ರಣದೀಪ್​ ಗುಲೇರಿಯಾ ಹೇಳಿದ್ದಾರೆ.

ಪಾಟ್ನಾ ಮೆಡಿಕಲ್​ ಕಾಲೇಜು ಆಸ್ಪತ್ರೆಯಲ್ಲಿ ಗುರುವಾರ ನಾಲ್ಕು ಬಿಳಿ ಶಿಲೀಂಧ್ರ(ವೈಟ್​ ಫಂಗಸ್​) ಸೋಂಕು ಪ್ರಕರಣ ಪತ್ತೆಯಾಗಿವೆ ಎಂಬ ವರದಿಯ ಕುರಿತಾಗಿ ಮಾತನಾಡಿದ ಏಮ್ಸ್​ ನಿರ್ದೇಶಕರು, ‘ಒಂದು ಮುಖ್ಯವಾದ ವಿಷಯವೆಂದರೆ, ಮ್ಯೂಕೋರ್ಮೈಕೋಸಿಸ್​ ಕಪ್ಪು ಶಿಲೀಂಧ್ರವಲ್ಲ. ಇದು ತಪ್ಪಾದ ಹೆಸರು. ಏಕೆಂದರೆ, ರಕ್ತ ಪೂರೈಕೆಯು ಕಡಿಮೆ ಆಗುವುದರಿಂದ ಚರ್ಮದಲ್ಲಿ ಬಣ್ಣ ವ್ಯತ್ಯಾಸವಾಗುತ್ತದೆ. ಚರ್ಮವು ಕೊಂಚ ಕಪ್ಪು ಬಣ್ಣದಿಂದ ಕೂಡಿರುವಂತೆ ಅನಿಸುವುದರಿಂದ ಈ ಹೆಸರು ಬಂದಿದೆ’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮ್ಯುಕೋರ್ಮೈಕೋಸಿಸ್​ ಹಿಂದಿನ ಕಾರಣ ಮತ್ತು ಅದನ್ನು ತಡೆಗಟ್ಟಲು ಏನು ಮಾಡಬೇಕು ಎಂಬುದರ ಕುರಿತಾಗಿ ವಿವರಿಸಿದ ಡಾ.ರಣದೀಪ್​, ‘ಸ್ಟೀರಾಯ್ಡ್​​ ಬಳಕೆ ಹೊಂದಿದ್ದವರು, ಈ ಮೊದಲಿನಿಂದ ಮಧುಮೇಹದಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಶೀಲಿಂಧ್ರ ಸೋಂಕಿಗೆ ತುತ್ತಾದರೆ ಆಶ್ಚರ್ಯವೇನಿಲ್ಲ. ಹೆಚ್ಚಿನ ಅಪಾಯಕ್ಕೆ ಸಿಲುಕಿರುವವರೂ ಇದ್ದಾರೆ ಹಾಗಾಗಿ, ದೇಹದಲ್ಲಿನ ಶುಗರ್​ ಅಂಶದ ಪ್ರಮಾಣದ ಕುರಿತಾಗಿ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.

ವೈರಸ್​ ಹೆಚ್ಚು ರೂಪಾಂತರಗೊಳ್ಳುತ್ತಿದ್ದಂತೆಯೇ ಲಸಿಕೆ ಎಷ್ಟು ಪರಿಣಾಮಕಾರಿ ಎಂದು ನಾವು ಅಧ್ಯಯನ ನಡೆಸಬೇಕು. ಏಕೆಂದರೆ ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ವೈರಸ್​ ವಿರುದ್ಧ ಹೋರಾಡಲು ಲಸಿಕೆ ಬೇಕು. ಲಸಿಕೆಯಿಂದ ಪರಿಣಾಮ ಬೀರುತ್ತಿರುವುದರಿಂದ ನಿಯಮಿತವಾಗಿ ಲಸಿಕೆ ಪಡೆಯುವುದು ಅವಶ್ಯಕವಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಸ್ತುತ ಭಾರತದಲ್ಲಿನ ಲಸಿಕೆಗಳಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಸಾಕಷ್ಟು ದತ್ತಾಂಶಗಳಿಲ್ಲ. ಕೊವಿಡ್​ ಸೋಂಕಿಗೆ ಸಂಬಂಧಿಸಿದ ಔಷಧ -2ಡಿಜಿಯ ಮೊದಲ ಬ್ಯಾಚ್​ ಅನ್ನು ರಕ್ಷಾಣಾ ಸಚಿವ ರಾಜನಾಥ್​ ಸಿಂಗ್​ ಮತ್ತು ಆರೋಗ್ಯ ಸಚಿವ ಹರ್ಷವರ್ಧನ್​ ಸೋಮವಾರ ಬಿಡುಗಡೆ ಮಾಡಿದ್ದಾರೆ. ಡ್ರಗ್ಸ್​ ಕಂಟ್ರೋಲರ್​ ಜನರಲ್​ ಆಫ್​ ಇಂಡಿಯಾ(ಡಿಜಿಸಿಐ) 2-ಡಿಯೋಕ್ಸಿ-ಡಿ-ಗ್ಲೂಕೋಸ್​(2-ಡಿಜಿ)ಯನ್ನು ತುರ್ತು ಬಳಕೆಗಾಗಿ ಈ ತಿಂಗಳ ಆರಂಭದಲ್ಲಿ ಚಿಕಿತ್ಸೆಗೆ ಬಳಸುವಂತೆ ಅನುಮೋದಿಸಿದೆ.

ಕೊರೊನಾ ವೈರಸ್​ ಮೂರನೇ ತರಂಗ ಮಕ್ಕಳ ಮೇಲೆ ಹೆಚ್ಚು ಕಾಣಿಸಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ ಡಾ. ರಣದೀಪ್​, ವೈರಸ್​ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ. ಮಕ್ಕಳಲ್ಲಿ ಕಡಿಮೆ ಸೋಂಕು ಉಂಟು ಮಾಡುವ ವೈರಸ್​ನ ಸ್ವಭಾವದಿಂದಾಗಿ ಮೂರನೇ ತರಂಗದಲ್ಲಿಯೂ ಮಕ್ಕಳಲ್ಲಿ ಅಷ್ಟಾಗಿ ಹರಡುವುದಿಲ್ಲವೆಂದು ನಾನು ಭಾವಿಸುತ್ತೇನೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಆದರೆ ಮಕ್ಕಳನ್ನು ವೈರಸ್​ನಿಂದ ರಕ್ಷಿಸಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ 3-4 ತಿಂಗಳಲ್ಲಿ ಮಕ್ಕಳಿಗೂ ನಾವು ಲಸಿಕೆ ನೀಡುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ. ಇಡೀ ಕುಟುಂಬವೂ ಸೋಂಕಿಗೆ ಒಳಗಾಗಿದ್ದರೂ ಸಹ ಇದು ಮಕ್ಕಳಲ್ಲಿ ಹೆಚ್ಚು ಕಾಣಿಸುತ್ತಿಲ್ಲ ಎಂದು ಸೂಚಿಸಲು ಅನೇಕ ಪುರಾವೆಗಳಿವೆ. ಹೊಸ ಅಲೆಗಳು ಬಂದರೂ ಇದು ಮುಂದುವರೆಯುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಿಟಿ ಸ್ಕ್ಯಾನ್, ರಕ್ತ ತಪಾಸಣೆ, ಸ್ಟೀರಾಯ್ಡ್ ಯಾವಾಗ ಅಗತ್ಯ?-ಅಪಾಯದ ಮುನ್ನೆಚ್ಚರಿಕೆ ಕೊಟ್ಟಿದ್ದಾರೆ ಏಮ್ಸ್​ ನಿರ್ದೇಶಕ