ಮಕ್ಕಳ ಆರೋಗ್ಯ ಸುರಕ್ಷತೆಗೆ ಆಹಾರದಲ್ಲಿ ಸೇವಿಸಬಹುದಾದ ಪೋಷಕಾಂಶಗಳು

| Updated By: preethi shettigar

Updated on: Sep 06, 2021 | 7:31 AM

ಮಳೆಗಾಲದ ಸಮಯದಲ್ಲಿ ದೇಹದ ಉಷ್ಣಾಂಶವು ಏರಿಳಿತಗೊಳ್ಳುತ್ತದೆ. ಈ ಸಮಯದಲ್ಲಿ ಸೋಂಕು ಹರಡುವುದು ಹೆಚ್ಚು. ಅದರಲ್ಲಿಯೂ ಮುಖ್ಯವಾಗಿ ಕಲುಷಿತಗೊಳ್ಳುವ ನೀರಿನಿಂದ ರೋಗಗಳು ಹರಡುವುದು ಹೆಚ್ಚು.

ಮಕ್ಕಳ ಆರೋಗ್ಯ ಸುರಕ್ಷತೆಗೆ ಆಹಾರದಲ್ಲಿ ಸೇವಿಸಬಹುದಾದ ಪೋಷಕಾಂಶಗಳು
ಸಾಂದರ್ಭಿಕ ಚಿತ್ರ
Follow us on

ವಾತಾವರಣದ ಏರುಪೇರು- ಧೂಳಿನಿಂದಾಗಿ ಮಕ್ಕಳಿಗೆ ಹೆಚ್ಚು ಅಲರ್ಜಿಯ ಸಮಸ್ಯೆ ಕಾಡಬಹುದು. ವೈರಸ್ ಹಾವಳಿಯಿಂದ ರಕ್ಷಿಸಿಕೊಳ್ಳಲು ಪೌಷ್ಟಿಕಾಂಶಯುಕ್ತ ಆಹಾರದ ಜತೆಗೆ ಆರೋಗ್ಯ ಕಾಳಜಿ ತುಂಬಾ ಮುಖ್ಯ. ಮಕ್ಕಳು ವೈರಸ್ ವಿರುದ್ಧ ಹೋರಾಡಲು ಸಾಕಷ್ಟು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಬೇಕು. ಇದು ಪೌಷ್ಟಿಕಾಂಶಯುಕ್ತ ಆಹಾರದಿಂದ ಸಿಗುತ್ತದೆ. ಅದರಲ್ಲಿಯೂ ಮುಖ್ಯವಾಗಿ ಮಳೆಗಾಲದ ಸಮಯದಲ್ಲಿ ದೇಹದ ಉಷ್ಣಾಂಶವು ಏರಿಳಿತಗೊಳ್ಳುತ್ತದೆ. ಈ ಸಮಯದಲ್ಲಿ ಸೋಂಕು ಹರಡುವುದು ಹೆಚ್ಚು. ಅದರಲ್ಲಿಯೂ ಮುಖ್ಯವಾಗಿ ಕಲುಷಿತಗೊಳ್ಳುವ ನೀರಿನಿಂದ ರೋಗಗಳು ಹರಡುವುದು ಹೆಚ್ಚು. ಈ ಸಮಯದಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು, ಕಬ್ಬಿಣ ಮತ್ತು ವಿಟಮಿನ್​ಗಳನ್ನು ಸೇವಿಸುವುದು ಅಗತ್ಯವಾಗಿರುತ್ತದೆ.

ಮಕ್ಕಳು ಸೇವಿಸುವ ಆಹಾರದಲ್ಲಿಇರಬಹುದಾದ ಪೋಷಕಾಂಶಗಳು
ಪ್ರೋಟೀನ್
ಮೀನು, ಚಿಕನ್, ತೆಳ್ಳಗಿನ ಮಾಂಶ, ಮೊಟ್ಡೆ, ಜತೆಗೆ ಹಾಲು, ಮೊಸರು, ಪನೀರ್, ಸೋಯಾದಂಥಹ ಆಹಾರ ಪದಾರ್ಥಗಳು ಪ್ರೋಟೀನ್​ ಸಮೃದ್ಧ ಮೂಲವಾಗಿದೆ. ಇದು ಸ್ನಾಯುವನ್ನು ಬಲಿಷ್ಠಗೊಳಿಸುವುದರ ಜತೆಗೆ ಆರೋಗ್ಯವನ್ನು ಸುಧಾರಿಸುತ್ತದೆ. ಜತೆಗೆ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.

ಕಬ್ಬಿಣ
ಕಬ್ಬಿಣದಿಂದ ಸಮೃದ್ಧವಾಗಿರುವ ಆಹಾರವೆಂದರೆ ಬೀನ್ಸ್, ಹಸಿರು ಸೊಪ್ಪು, ತರಕಾರಿಗಳು, ಮೊಟ್ಟೆ. ಇದು ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ಇದು ಆಮ್ಲಜನಕವನ್ನು ಸಾಗಿಸಲು ಸಹಾಯ ಮಾಡುತ್ತದೆ. ಕಬ್ಬಿಣದ ಕೊರತೆಯು ರಕ್ತಹೀನತೆಗೆ ಕಾರಣವಾಗಬಹುದು.

ವಿಟಮಿನ್ ಸಿ
ಸೋಂಕು ತಡೆಗಟ್ಟಲು ವಿಟಮಿನ್ ಸಿ ಸಹಾಯಕವಾಗಿದೆ. ಸಿಟ್ರಸ್ ಹಣ್ಣುಗಳ ಸೇವನೆಯು ಮಕ್ಕಳಲ್ಲಿ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಕೊತ್ತಳೆ, ನಿಂಬೆ, ದ್ರಾಕ್ಷಿಯಂಥಹ ವಿಟಮಿನ್ ಸಿ ಅಂಶವುಳ್ಳ ಆಹಾರ ಪದಾರ್ಥಗಳು ಉಪಯೋಗಕಾರಿ. ಜತೆಗೆ ಪೇರಳೆ, ಪಪ್ಪಾಯಿ, ಟೊಮ್ಯಾಟೊ ಕೂಡಾ ವಿಟಮಿನ್ ಸಿ ಮೂಲವಾಗಿದೆ.

ಇದನ್ನೂ ಓದಿ:

Health Tips: ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ ಸರಳ ವಿಧಾನವನ್ನು ಅನುಸರಿಸಿ

Health Tips: ಉತ್ತಮ ಆರೋಗ್ಯಕ್ಕಾಗಿ ಈ ಸಲಹೆಗಳು; ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸುಲಭ ಮಾರ್ಗಗಳು

(These 5 nutrition tips for children check in kannada)