Moringa Leaves Benefits: ನುಗ್ಗೆ ಸೊಪ್ಪಿನಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತೇ?

| Updated By: ನಯನಾ ರಾಜೀವ್

Updated on: Aug 19, 2022 | 10:28 AM

ನುಗ್ಗೆಸೊಪ್ಪಿನಲ್ಲಿ ಪೌಷ್ಟಿಕಾಂಶ ಬಹಳ ಸಮೃದ್ಧವಾಗಿವೆ, ಅವುಗಳ ನೈಸರ್ಗಿಕ ರೂಪದಲ್ಲಿ ಸೇವಿಸಿದಾಗ, ಯಾವುದೇ ಅಡ್ಡಪರಿಣಾಮಗಳನ್ನು ಬೀರುವುದಿಲ್ಲ.

Moringa Leaves Benefits: ನುಗ್ಗೆ ಸೊಪ್ಪಿನಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತೇ?
Moringa Leaves
Follow us on

ನುಗ್ಗೆಸೊಪ್ಪಿನಲ್ಲಿ ಪೌಷ್ಟಿಕಾಂಶ ಬಹಳ ಸಮೃದ್ಧವಾಗಿವೆ, ಅವುಗಳ ನೈಸರ್ಗಿಕ ರೂಪದಲ್ಲಿ ಸೇವಿಸಿದಾಗ, ಯಾವುದೇ ಅಡ್ಡಪರಿಣಾಮಗಳನ್ನು ಬೀರುವುದಿಲ್ಲ. ಭಾರತದಲ್ಲಿ ಅನೇಕ ವಿಧದ ಹಣ್ಣುಗಳು ಮತ್ತು ತರಕಾರಿಗಳು ಲಭ್ಯವಿವೆ, ಅವುಗಳು ತುಂಬಾ ಪೌಷ್ಟಿಕವಾಗಿರುತ್ತವೆ ಮತ್ತು ಅವುಗಳನ್ನು ಔಷಧವಾಗಿಯೂ ಬಳಸಲಾಗುತ್ತದೆ, ಅಂತಹ ತರಕಾರಿಗಳಲ್ಲಿ ಮೊರಿಂಗಾ ಎಲೆಗಳು ಅಂದರೆ ನುಗ್ಗೆ ಸೊಪ್ಪು ಕೂಡ ಒಂದು.

ಹೆಚ್ಚಿನ ಜನರು ಇದನ್ನು ಡ್ರಮ್ ಸ್ಟಿಕ್ ಎಲೆಗಳು ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಅಲ್ಲದೆ, ಇದು ಅನೇಕ ರೋಗಗಳನ್ನು ತೊಡೆದುಹಾಕುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದಾಗಿ ದೇಹವು ಫಿಟ್ ಮತ್ತು ಆರೋಗ್ಯಕರವಾಗಿರುತ್ತದೆ.

ನುಗ್ಗೆ ಸೊಪ್ಪಿನಲ್ಲಿ ಪೌಷ್ಟಿಕಾಂಶದ ಅಂಶಗಳಲ್ಲಿ ಸಮೃದ್ಧವಾಗಿದೆ, ಈ ಕಾರಣದಿಂದಾಗಿ ಇದನ್ನು ಸೂಪರ್ಫುಡ್ ಎಂದು ಕರೆಯಲಾಗುತ್ತದೆಇಂದು ಈ ಲೇಖನದಲ್ಲಿ ಮೊರಿಂಗಾ ಅಂದರೆ ಡ್ರಮ್ ಸ್ಟಿಕ್ ಎಲೆಗಳ ಪ್ರಯೋಜನಗಳ ಬಗ್ಗೆ ತಿಳಿಯೋಣ…

ನುಗ್ಗೆ ಸೊಪ್ಪಿನ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ :

ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯಕ:
ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ನಿಮ್ಮನ್ನು ಆರೋಗ್ಯಕರವಾಗಿಸುತ್ತದೆ. ಇದು ನಿಮ್ಮ ದೇಹವನ್ನು ಆರೋಗ್ಯಕರವಾಗಿಸಲು ಮತ್ತು ದೇಹವನ್ನು ರೋಗ ಮುಕ್ತವಾಗಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತದೆ.

ತೂಕ ನಿಯಂತ್ರಣ:
ಡ್ರಮ್ ಸ್ಟಿಕ್ ರಸವು ಪ್ರಯೋಜನಕಾರಿಯಾಗಿದೆ. ನುಗ್ಗೆ ಸೊಪ್ಪು ದೇಹದ ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ತೂಕವನ್ನು ನಿಯಂತ್ರಣದಲ್ಲಿಡಲು ಸಹಕಾರಿ ಆಗಿದೆ. ತೂಕ ಹೆಚ್ಚಾಗುವುದರಿಂದ ತೊಂದರೆ ಇರುವವರು ಇದರ ರಸವನ್ನು ದಿನನಿತ್ಯ ಸೇವಿಸಬೇಕು, ಜೊತೆಗೆ ಇದನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ ಬಹಳಷ್ಟು ಪ್ರಯೋಜನವನ್ನು ಪಡೆಯಬಹುದಾಗಿದೆ.

ಹೃದಯಾಘಾತದ ಅಪಾಯದಿಂದ ರಕ್ಷಣೆ:
ಬಹಳಷ್ಟು ಮಂದಿ ಹೃದಯ ಸಂಬಂಧಿತ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಮೊರಿಂಗಾ ಎಲೆಗಳನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ, ಇದು ಹೃದಯವನ್ನು ಸದೃಢವಾಗಿರಿಸುತ್ತದೆ.

ವಿಟಮಿನ್ ಹಾಗೂ ಮಿನರಲ್ಸ್​ಗಳು ಹೇರಳವಾಗಿವೆ
ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಹಾಗೂ ಮಿನರಲ್ಸ್​ಗಳು ಹೇರಳವಾಗಿವೆ. ಅದರಲ್ಲಿ ವಿಟಮಿನ್ ಎ, ಸಿ ಹಾಗೂ ಬಿ1 ಇವೆ. ಹಾಗೆಯೇ ಬಿ2, ಬಿ3, ಫೋಲೇಟ್ ಕೂಡ ಇವೆ.

ಅಮಿನೋ ಆ್ಯಸಿಡ್​ಗಳಿವೆ
ನುಗ್ಗೆ ಸೊಪ್ಪಿನಲ್ಲಿ 18 ರೀತಿಯ ಅಮಿನೋ ಆ್ಯಸಿಡ್​ಗಳಿವೆ, ಇವು ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸುವಲ್ಲಿ ಸಹಾಯ ಮಾಡುತ್ತವೆ.

ಹೊಟ್ಟೆಗೂ ಉತ್ತಮ
ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರು ನುಗ್ಗೆ ಸೊಪ್ಪನ್ನು ಸೇವಿಸಬಹುದು, ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ.

ಮೂಳೆಗಳ ಆರೋಗ್ಯಕ್ಕೂ ಉತ್ತಮ
ನುಗ್ಗೆ ಎಲೆಗಳು ಕ್ಯಾಲ್ಸಿಯಂ ಮತ್ತು ರಂಜಕದ ಸಮೃದ್ಧ ಮೂಲಗಳಾಗಿವೆ. ಈ ಎರಡೂ ಅಂಶಗಳು ಮೂಳೆ ಆರೋಗ್ಯಕ್ಕೆ ಉತ್ತಮವಾದದ್ದು. ಅವು ಸಂಧಿವಾತವನ್ನು ಎದುರಿಸಲು ಸಹಾಯ ಮಾಡುತ್ತವೆ ಮತ್ತು ಹಾನಿಗೊಳಗಾದ ಮೂಳೆಗಳನ್ನು ಸಹ ಸರಿಪಡಿಸುತ್ತವೆ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ