ಪಾಲಿಶ್ ಆಗಿ, ಪ್ಯಾಕಿಂಗ್ ಎಂಬ ಮೇಕಪ್ಪಿನಿಂದ ಕಂಗೊಳಿಸುವ ಈ ಕಾಲದಲ್ಲಿ ನಾವೆಷ್ಟು ಗಟ್ಟಿ ಕಾಳು ಉಪಯೋಗಿಸುತ್ತಿದ್ದೇವೆ?

ಊಟ ಬಲ್ಲವನಿಗೆ ರೋಗವಿಲ್ಲ ಮಾತು ಎಲ್ಲರಿಗೂ ಗೊತ್ತು. ಆದರೆ ಇಂದಿನ ನಮ್ಮ ಆಹಾರ ಪದ್ಧತಿ ಹೇಗಿದೆ ಎಂದು ನಾವೇ ಅವಲೋಕನ ಮಾಡಿಕೊಳ್ಳಬೇಕು. ಅಂದರೆ ಅಕ್ಕಿ ಬೇಳೆಗಳೆಲ್ಲ ಪಾಲಿಶ್ ಆಗಿ, ಪ್ಯಾಕಿಂಗ್ ಎಂಬ ಮೇಕಪ್ಪಿನಿಂದ ಕಂಗೊಳಿಸುವ ಈ ಕಾಲದಲ್ಲಿ ಗಟ್ಟಿಯಾದ ಕಾಳುಗಳನ್ನು ನಾವು ಎಷ್ಟು ಉಪಯೋಗಿಸುತ್ತಿದ್ದೇವೆ?

ಪಾಲಿಶ್ ಆಗಿ, ಪ್ಯಾಕಿಂಗ್ ಎಂಬ ಮೇಕಪ್ಪಿನಿಂದ ಕಂಗೊಳಿಸುವ ಈ ಕಾಲದಲ್ಲಿ ನಾವೆಷ್ಟು ಗಟ್ಟಿ ಕಾಳು ಉಪಯೋಗಿಸುತ್ತಿದ್ದೇವೆ?
ಪಾಲಿಶ್ ಆಗಿ, ಪ್ಯಾಕಿಂಗ್ ಎಂಬ ಮೇಕಪ್ಪಿನಿಂದ ಕಂಗೊಳಿಸುವ ಈ ಕಾಲದಲ್ಲಿ ನಾವೆಷ್ಟು ಗಟ್ಟಿ ಕಾಳು ಉಪಯೋಗಿಸುತ್ತಿದ್ದೇವೆ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 19, 2022 | 6:06 AM

ಊಟ ಬಲ್ಲವನಿಗೆ ರೋಗವಿಲ್ಲ ಮಾತು ಎಲ್ಲರಿಗೂ ಗೊತ್ತು. ಆದರೆ ಇಂದಿನ ನಮ್ಮ ಆಹಾರ ಪದ್ಧತಿ ಹೇಗಿದೆ ಎಂದು ನಾವೇ ಅವಲೋಕನ ಮಾಡಿಕೊಳ್ಳಬೇಕು. ಅಂದರೆ ಅಕ್ಕಿ ಬೇಳೆಗಳೆಲ್ಲ ಪಾಲಿಶ್ ಆಗಿ, ಪ್ಯಾಕಿಂಗ್ ಎಂಬ ಮೇಕಪ್ಪಿನಿಂದ ಕಂಗೊಳಿಸುವ ಈ ಕಾಲದಲ್ಲಿ ಗಟ್ಟಿಯಾದ ಕಾಳುಗಳನ್ನು ನಾವು ಎಷ್ಟು ಉಪಯೋಗಿಸುತ್ತಿದ್ದೇವೆ?

ಇಂಥ ಗಟ್ಟಿ ಕಾಳುಗಳಲ್ಲಿ ಕಬ್ಬಿಣ, ಪ್ರೋಟಿನ್, ಹಾಗೂ ಅತ್ಯಧಿಕ ಕ್ಯಾಲ್ಸಿಯಂ ಹೊಂದಿರುವ ವಿಶೇಷ ಕಾಳುಗಳಿಗೆ… ಅದುವೇ ಹುಳ್ಳಿ ಕಾಳು, ಹುರುಳಿ ಕಾಳು ಅಥವಾ ಜುರಳಿ ಕಾಳು. ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಕುಲತಿ, ಕುಲತ್ಥಿ ಎಂದೂ ಆಂಗ್ಲ ಭಾಷೆಯಲ್ಲಿ Horse gram, Madras gram ಮತ್ತು ಸಂಸ್ಕೃತ ಭಾಷೆಯಲ್ಲಿ ಕುಲತ್ಥಿಕಾ, ಕುಲತ್ಥ ಎಂದು ಕರೆಯುತ್ತಾರೆ.

ಹುರುಳಿ ಕಾಳು ಉತ್ತರ ಕರ್ನಾಟಕದ ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಒಂದು ಪ್ರಮುಖ ಬೆಳೆ. ಕೆಲವು ವರ್ಷಗಳ ಹಿಂದಿನವರೆಗೂ ಹುರುಳಿ ಕಾಳು ನೆನೆಸಿ ರೈತರು ಎತ್ತುಗಳಿಗೆ ತಿನ್ನಿಸುತ್ತಿದ್ದರು. ಇನ್ನು, ಜಟಕಾ ಬಂಡಿಯವರು ಕುದುರೆಗಳಿಗೆ ತಿನ್ನಿಸುತ್ತಿದ್ದರು. ಇದು ಕುದುರೆಗಳಿಗೆ ಅತ್ಯಂತ ಪ್ರಿಯವಾದ ಆಹಾರ. ಕುದರೆಗಳಿಗೇ ಶಕ್ತಿ ಕೊಡುವ ಈ ಹುರುಳಿ ಕಾಳು ಮನುಷ್ಯನಿಗೆ ಇನ್ನೆಷ್ಟು ಶಕ್ತಿ ಕೊಡಬಹುದು, ಅಲ್ಲವಾ? ಹೌದು ಇದರಲ್ಲಿ ಅಷ್ಟು ಅಗಾಧವಾದ ಶಕ್ತಿ ಇದೆ.

ಅನೇಕ ಕಾಯಿಲೆಗಳಿಗೆ ಮನೆ ಮದ್ದಾಗಿದೆ ಈ ಹುರುಳಿ ಕಾಳು. ಈ ಹಿಂದೆ, ಹುರುಳಿ ಕಾಳು ಹುರಿದು ತಿನ್ನಲು ಕೊಡುತ್ತಿದ್ದರು. ಹುರುಳಿ ಕಾಳನ್ನು ಮೊಳಕೆ ಬರಿಸಿ, ಹಸಿಯಾಗಿ ಅಥವಾ ಪಲ್ಯ ಮಾಡಿ ತಿನ್ನಬಹುದು. ಹುರುಳಿ ಕಾಳಿನ ಹೋಳಿಗೆ (ಒಬ್ಬಟ್ಟು) ಹುರುಳಿ ಕಟ್ಟು, ರೈತಾಪಿ ಜನರ ಹಾಗೂ ಬಡವರ ಪ್ರಿಯವಾದ ಆಹಾರ. ಎಷ್ಟೋ ಜನರಿಗೆ ಹುರುಳಿ ಕಾಳಿನ ಪರಿಚಯವಿಲ್ಲ. ಈ ಹುರುಳಿ ಕಾಳು ರೋಗನಿರೋಧಕ ಶಕ್ತಿ ಹೆಚ್ಚಿಸಲು ಅತ್ಯಂತ ಸಹಕಾರಿಯಾಗಿದೆ.

ಇದನ್ನೂ ಓದಿ:

Horse Gram health benefits: ಮಧುಮೇಹವನ್ನು ನಿಯಂತ್ರಿಸುವಲ್ಲಿ ಹುರುಳಿ ಕಾಳು ಸಹಾಯಕ! ಹೇಗೆ ಅಂತೀರಾ?

* ಮಾನವನ ಕಿಡ್ನಿ ಕೂಡ ಹುರುಳಿ ಆಕಾರದಲ್ಲಿದೆ. ಕಿಡ್ನಿ ಸಮಸ್ಯೆ, ಕಿಡ್ನಿಯಲ್ಲಿರುವ ಹರಳುಗಳನ್ನು ಕರಗಿಸುವ ಶಕ್ತಿ ಹುರುಳಿ ಕಾಳಿಗಿದೆ. ಇದರ ಕಟ್ಟು (ಹುರುಳಿ ಕುದಿಸಿದ ನೀರು) ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ.

* ಬೊಜ್ಜು ಕರಗಿಸಲು ಹುರುಳಿ ಕಾಳು ಉತ್ತಮ ಆಹಾರ.

* ಮಧುಮೇಹಿಗಳಿಗೆ ಕೂಡ ಇದರ ಸೇವನೆ ಸೂಕ್ತವಾಗಿದೆ.

* ಮಹಿಳೆಯರ ಋತುಚಕ್ರದ ಸಮಸ್ಯೆಗಳಿಗೆ ಅತ್ಯುಪಯುಕ್ತ ಈ ಹುರುಳಿ ಕಟ್ಟಿನ ಸೇವನೆ.

* ಹುರುಳಿಕಾಳುಗಳನ್ನು ಹದವಾಗಿ ಹುರಿದು ಪುಡಿ ಮಾಡಿ, ನೀರಿನಲ್ಲಿ ಕುದಿಸಿ “ಹುಳ್ಳಿ ಸಂಗಟಿ” ತಯಾರಿಸುತ್ತಾರೆ. ಇದರಲ್ಲಿ ಬೆಲ್ಲ, ಶುಂಠಿ, ತುಪ್ಪ ಸೇರಿಸಿ ಬಿಸಿ ಬಿಸಿಯಾಗಿ ಕುಡಿದರೆ, ಜ್ವರ, ನೆಗಡಿ,ಕಫ, ಮೈ ಕೈ ನೋವು ಪರಿಹಾರ ವಾಗುತ್ತದೆ.

* ಕಾಮಾಲೆ ಗೆ ಹುರುಳಿ ಕಷಾಯದಲ್ಲಿ, ದಾಳಿಂಬೆ ಹಣ್ಣಿನ ರಸ ಬೆರೆಸಿ ಸೇವಿಸಬೇಕು.

* ಹೊಟ್ಟೆಯ ಹುಳುಗಳ ನಿವಾರಣೆಗೆ ಇದರ ಕಟ್ಟು ಸೇವನೆ ಒಳ್ಳೆಯದು. (ಮಾಹಿತಿ: ಎಸ್​ ಹೆಚ್​ ನದಾಫ್)

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್