Horse Gram health benefits: ಮಧುಮೇಹವನ್ನು ನಿಯಂತ್ರಿಸುವಲ್ಲಿ ಹುರುಳಿ ಕಾಳು ಸಹಾಯಕ! ಹೇಗೆ ಅಂತೀರಾ?
Horse Gram : ಕಡಿಮೆ ವೀರ್ಯಾಣು ಸಂಖ್ಯೆಯಿಂದಾಗಿ ಫಲವತ್ತತೆ ಸಮಸ್ಯೆ ಹೊಂದಿರುವ ಪುರುಷರಿಗೂ ಈ ಹುರುಳಿ ಕಾಳು ಉಪಯುಕ್ತವಾಗಿದೆ. ಆದರೆ ಇದನ್ನು ಸೇವಿಸುವ ಮೊದಲು ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ.
ಆಹಾರ ಆಚಾರ ವಿಚಾರಗಳು ದೇಹ, ಮನಸ್ಸು ಮತ್ತು ಆತ್ಮವನ್ನು ಉನ್ನತೀಕರಿಸಲು ಮಾಡುವ ಚಟುವಟಿಕೆಗಳು. ಆಹಾರಗಳಲ್ಲಿ ಸಾತ್ವಿಕ, ರಾಜಸ ಮತ್ತು ತಾಮಸ ಎಂಬ ಮೂರು ವಿಧಗಳನ್ನು ಕಾಣಬಹುದು. ಸಾತ್ವಿಕ ಆಹಾರದಿಂದ ಸತ್ವ, ಸ್ಥಿರತೆ ಹೆಚ್ಚು. ಅದು ಮನುಷ್ಯನ ಯೋಗ ಕ್ಷೇಮ ನೋಡಿಕೊಳ್ಳುತ್ತದೆ. ಮಾಂಸಕ್ಕಿಂತ ಹೆಚ್ಚು ಪೌಷ್ಟಿಕವಾಗಿರುವ ಹುರುಳಿ ಕಾಳು (horse gram) ಔಷಧೀಯ ಗುಣಗಳಿಂದ ಕೂಡಿದೆ. ಇದರ ಐದು ಪ್ರಮುಖ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ (health benefits).
1. ಹುರುಳಿ ಸೊಪ್ಪಿನಲ್ಲಿ ರಂಜಕ, ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಕಬ್ಬಿಣದ ಗುಣಗಳು ಸಮೃದ್ಧವಾಗಿವೆ. ದೇಹವು ಒಳಗಿನಿಂದ ದುರ್ಬಲವಾಗಿದ್ದು ಸ್ವಲ್ಪ ಕೆಲಸ ಮಾಡಿದ ನಂತರವೇ ದಣಿವು, ದೇಹದಲ್ಲಿ ರಕ್ತದ ಕೊರತೆ ಇರುವವರು ತಮ್ಮ ಆಹಾರದಲ್ಲಿ ಹುರುಳಿ ಅನ್ನು ಸೇರಿಸಿಕೊಳ್ಳಬೇಕು. ಹುರುಳಿ ಸೊಪ್ಪಿನಲ್ಲಿಯೂ ರಂಜಕ, ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಕಬ್ಬಿಣದಂತಹ ಗುಣಗಳು ಸಮೃದ್ಧವಾಗಿವೆ.
2. ಹುರುಳಿ ಕಾಳು ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಹೆಚ್ಚಿನ ಪ್ರೊಟೀನ್ ಹಾಗೂ ಫೈಬರ್ ಅನ್ನು ಹೊಂದಿರುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ತುಂಬಾ ಪರಿಣಾಮಕಾರಿ.
3.ಕಡಿಮೆ ವೀರ್ಯಾಣು ಸಂಖ್ಯೆಯಿಂದಾಗಿ ಫಲವತ್ತತೆ ಸಮಸ್ಯೆ ಹೊಂದಿರುವ ಪುರುಷರಿಗೂ ಈ ಹುರುಳಿ ಕಾಳು ಉಪಯುಕ್ತವಾಗಿದೆ. ಆದರೆ ಇದನ್ನು ಸೇವಿಸುವ ಮೊದಲು ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ.
4. ನಿಮಗೆ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ ಕೆಲವು ದಿನಗಳವರೆಗೆ ಹುರುಳಿ ಕಾಳು ನಿಯಮಿತವಾಗಿ ಸೇವಿಸಿ. ನಿಮ್ಮ ಕಿಡ್ನಿ ಕಲ್ಲನ್ನು ದೇಹದಿಂದ ಹೊರತೆಗೆಯಲು ಇದು ತುಂಬಾ ಸಹಾಯಕವಾಗಿದೆ ಎನ್ನುತ್ತಾರೆ ತಜ್ಞರು.
5.ಮಧುಮೇಹದ (diabetes) ಸಮಸ್ಯೆ ಇತ್ತೀಚಿನ ದಿನಗಳಲ್ಲಿ ತುಂಬಾ ಸಾಮಾನ್ಯವಾಗಿದೆ. ಇದರಿಂದ ಬಳಲುವವರು ಖಂಡಿತವಾಗಿಯೂ ತಮ್ಮ ಆಹಾರದಲ್ಲಿ ಹುರುಳಿ ಕಾಳನ್ನು ಸೇರಿಸಿಕೊಳ್ಳಬಹುದು. ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಹುರುಳಿ ಕಾಳು ಸಹಾಯಕ ಎಂದು ಪರಿಗಣಿಸಲಾಗಿದೆ.
Also Read: Sidlaghatta: ಶಿಡ್ಲಘಟ್ಟದ ಇತಿಹಾಸದಲ್ಲಿಯೇ ದಂಪತಿಯ ಭೀಕರ ಕೊಲೆ, ಗವಾಕ್ಷಿಯಿಂದ ಇಳಿದು ಕುಕೃತ್ಯ, ನಗನಾಣ್ಯ ದರೋಡೆ
Also Read: Crime News: ಪೊಲೀಸ್ ಇನ್ಸ್‌ಪೆಕ್ಟರ್ ಕಾರಿನ ಗಾಜನ್ನೇ ಒಡೆದು ಬೆಲೆ ಬಾಳುವ ವಸ್ತುಗಳನ್ನು ಕದ್ದ ಖದೀಮರು