Health Tips: ಆರೋಗ್ಯಕರ ಹೃದಯಕ್ಕಾಗಿ ಈ ಆಹಾರಗಳು ನಿಮ್ಮದಾಗಿರಲಿ

TV9 Digital Desk

| Edited By: shruti hegde

Updated on:Sep 23, 2021 | 3:18 PM

ವ್ಯಾಯಾಮದ ಜತೆಗೆ ಹೃದಯವನ್ನು ಆರೋಗ್ಯವಾಗಿಡಲು ಆಹಾರವೂ ಮುಖ್ಯ. ನಿಯಮಿತವಾಗಿ ಆರೋಗ್ಯಕರ ಆಹಾರವನ್ನು ಸೇವಿಸುವ ಜನರು ಹೃದಯ ಸಂಬಂಧಿ ಖಾಯಿಲೆಗಳಿಗೆ ತುತ್ತಾಗುವುದು ಕಡಿಮೆ.

Health Tips: ಆರೋಗ್ಯಕರ ಹೃದಯಕ್ಕಾಗಿ ಈ ಆಹಾರಗಳು ನಿಮ್ಮದಾಗಿರಲಿ
ಸಾಂದರ್ಭಿಕ ಚಿತ್ರ

Follow us on

ಬದಲಾಗುತ್ತಿರುವ ಜೀವನ ಶೈಲಿ, ಒತ್ತಡ ಹಾಗೂ ಆಹಾರ ಪದ್ದತಿಯ ಬದಲಾವಣೆಯ ಕಾರಣದಿಂದ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವರಲ್ಲಿ ಹೃದಯಾಘಾತವು ಚಿಕ್ಕ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತಿದೆ. ಇದಕ್ಕೆಲ್ಲಾ ಪರಿಹಾರ ಪಡೆಯ ಬೇಕಾದರೆ ಪೌಷ್ಟಿಕಾಂಶಯುಕ್ತ ಆಹಾರ ಮತ್ತು ಜೀವನ ಶೈಲಿಯಲ್ಲಿನ ಒಳ್ಳೆಯ ಬದಲಾವಣೆಯಿಂದ ಮಾತ್ರ ಸಾಧ್ಯ. ಹಾಗಿರುವಾಗಿ ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸಲು ಈ ಕೆಲವು ಸಲಹೆಗಳನ್ನು ತಿಳಿಯಿರಿ.

ವ್ಯಾಯಾಮದ ಜತೆಗೆ ಹೃದಯವನ್ನು ಆರೋಗ್ಯವಾಗಿಡಲು ಆಹಾರವೂ ಮುಖ್ಯ. ನಿಯಮಿತವಾಗಿ ಆರೋಗ್ಯಕರ ಆಹಾರವನ್ನು ಸೇವಿಸುವ ಜನರು ಹೃದಯ ಸಂಬಂಧಿ ಖಾಯಿಲೆಗಳಿಗೆ ತುತ್ತಾಗುವುದು ಕಡಿಮೆ.

ಹೃದಯ ಆರೋಗ್ಯಕ್ಕಾಗಿ ಕೆಲವು ಸಲಹೆಗಳು ಕುಂಬಳಕಾಯಿ, ಅಗಸೆ ಬೀಜದಂತಹ ಒಮೆಗಾ 3 ಹಾಗೂ ಫೈಬರ್ ಸಮೃದ್ಧವಾಗಿರುವ ಪದಾರ್ಥಗಳನ್ನು ಸೇವಿಸಿ. ಇದು ನಿಮ್ಮ ಹೃದಯದ ಆರೋಗ್ಯಕ್ಕೆ ಉತ್ತಮ. ಜತೆಗೆ ಬಾದಮಿ, ದ್ರಾಕ್ಷಿಯು ನಿಮ್ಮ ಆಹಾರದಲ್ಲಿರಲಿ. ಬಾದಾಮಿ ನಿಮ್ಮ ದೇಹಕ್ಕೆ ಬೇಕಾದ ಅಗತ್ಯ ಕೊಬ್ಬನ್ನು ನೀಡುತ್ತದೆ. ಜತೆಗೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಅರಿಶಿಣ, ಕೊತ್ತಂಬರಿ, ಜೀರಿಗೆ ಮತ್ತು ದಾಲ್ಚಿನ್ನಿ ಹೃದಯವನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಅಡುಗೆ ಮಾಡುವಾಗ ಈ ಮಸಾಲೆಗಳನ್ನು ಬಳಸಿ.

ಬೆಳ್ಳುಳ್ಳಿ ದೇಹದಲ್ಲಿ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯದ ಆರೋಗ್ಯಕರ ಕಾರ್ಯನಿರ್ವಹಣೆಗೆ ಸಹಾಯಕ. ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿಯನ್ನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಆದರೆ ಅತಿಯಾದ ಬೆಳ್ಳುಳ್ಳಿ ಸೇವನೆ ಅನಾರೋಗ್ಯವನ್ನುಂಟು ಮಾಡುತ್ತವೆ. ಹಾಗಾಗಿ ಹಿತಮಿತವಾಗಿ ಬೆಳ್ಳುಳ್ಳಿ ಸೇವಿಸಿ.

ಹಸಿರು ಎಲೆಗಳ ತರಕಾರಿಗಳು ನಿಮ್ಮ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತವೆ. ಅವು ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ. ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ಪಾಲಾಕ್ ಸೊಪ್ಪು ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂ ಉತ್ತಮ ಮೂಲವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:

Health Tips: ನಿಮ್ಮ ದೇಹದ ತೂಕ ಹೆಚ್ಚಳಕ್ಕೆ ಈ ಕೆಲವು ಅಂಶಗಳೇ ಕಾರಣ!

Health Tips: ಆಹಾರದಲ್ಲಿನ ಈ ಕೆಲವು ಮಸಾಲೆ ಪದಾರ್ಥಗಳು ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್​ ಮಟ್ಟವನ್ನು ನಿಯಂತ್ರಿಸುತ್ತದೆ

(These food for good healthy heart check in Kannada)

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada