Health Tips: ಇವುಗಳನ್ನು ಹಾಲಿನೊಂದಿಗೆ ಎಂದೂ ಸೇವಿಸಬೇಡಿ! ಆರೋಗ್ಯಕ್ಕೆ ತುಂಬಾ ಹಾನಿಕಾರಕ

| Updated By: ಆಯೇಷಾ ಬಾನು

Updated on: Jul 12, 2021 | 6:58 AM

ಸಿಹಿ ತಿಂಡಿಗಳನ್ನು ತಯಾರಿಸಲು ಅನೇಕರು ಹಾಲನ್ನು ಉಪಯೋಗಿಸುತ್ತಾರೆ. ಹಾಲಿನ ಜತೆಗೆ ಇನ್ನಿತರ ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡುತ್ತಾರೆ. ಯಾವ ವಸ್ತುಗಳನ್ನು ಹಾಲಿ ಜತೆ ಬೆರೆಸಿ ತಿನ್ನಬಾರದು ಎಂಬುದು ನಿಮಗೆ ತಿಳಿದಿದೆಯೇ? ಇಲ್ಲಿದೆ ಮಾಹಿತಿ.

Health Tips: ಇವುಗಳನ್ನು ಹಾಲಿನೊಂದಿಗೆ ಎಂದೂ ಸೇವಿಸಬೇಡಿ! ಆರೋಗ್ಯಕ್ಕೆ ತುಂಬಾ ಹಾನಿಕಾರಕ
ಹಾಲು
Follow us on

ಹಾಲು ಪೌಷ್ಠಿಕಾಂಶಯುಕ್ತ ಆಹಾರ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಸಂಗತಿ. ಇದರಲ್ಲಿ ಪ್ರೋಟೀನ್​, ಕ್ಯಾಲ್ಸಿಯಂ, ಖನಿಜಗಳು ಮತ್ತು ವಿಟಮಿನ್​ ಡಿ ಸೇರಿರುತ್ತವೆ. ಹಾಲು ಸೇವಿಸುವುದರಿಂದ ಮೂಳೆಗಳು ಬಲಿಷ್ಠಗೊಳ್ಳುತ್ತವೆ. ಹಾಗೆಯೇ ಆರೋಗ್ಯಕ್ಕೂ ಬಹಳ ಮುಖ್ಯ. ಸಾಮಾನ್ಯವಾಗಿ ಜನರು ಸರಳ ಹಾಲನ್ನು ಕುಡಿಯಲು ಅಷ್ಟು ಇಷ್ಟಪಡುವುದಿಲ್ಲ. ಜತೆಗೆ ಚಾಕಲೇಟ್​​, ಜೇನುತುಪ್ಪ, ಬಾದಾಮಿಗಳನ್ನು ಮಿಶ್ರಣ ಮಾಡಿ ಸೇವಿಸುವ ರೂಢಿಯನ್ನು ಇಟ್ಟುಕೊಂಡಿರುತ್ತಾರೆ.

ಸಿಹಿ ತಿಂಡಿಗಳನ್ನು ತಯಾರಿಸಲು ಅನೇಕರು ಹಾಲನ್ನು ಉಪಯೋಗಿಸುತ್ತಾರೆ. ಹಾಲಿನ ಜತೆಗೆ ಇನ್ನಿತರ ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡುತ್ತಾರೆ. ಆದರೆ ಕೆಲವು ಆಹಾರ ಪದಾರ್ಥಗಳನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ ಸೇವಿಸುವುದರಿಂದ ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಜತೆಗೆ ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದ ಅಲರ್ಜಿ ಮತ್ತು ಆಮ್ಲೀಯತೆಯ ಸಮಸ್ಯೆಗಳು ಕಂಡು ಬರುತ್ತದೆ. ಯಾವ ವಸ್ತುಗಳನ್ನು ಹಾಲಿ ಜತೆ ಬೆರೆಸಿ ತಿನ್ನಬಾರದು ಎಂಬುದು ನಿಮಗೆ ತಿಳಿದಿದೆಯೇ? ಇಲ್ಲಿದೆ ಮಾಹಿತಿ.

ಹಾಲಿನೊಂದಿಗೆ ಹಣ್ಣುಗಳ ಬಳಕೆ ಮಾಡದಿರಿ
ನಮ್ಮಲ್ಲಿ ಸಾಮಾನ್ಯವಾಗಿ ಹಣ್ಣುಗಳಾದ ಸ್ಟ್ರಾಬೆರಿ, ಚೆರ್ರಿ ಇತ್ಯಾದಿಗಳನ್ನು ಮಿಲ್ಕ್​ಶೇಕ್​ ತಯಾರಿಸುವಲ್ಲಿ ಬಳಸುತ್ತಾರೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾನಿ ಮಾಡುತ್ತದೆ. ಕೆಲವೊಮ್ಮೆ ಈ ಆಹಾರವು ಅಲರ್ಜಿಯನ್ನು ಉಂಟು ಮಾಡುತ್ತವೆ. ಹಾಲು ಕುಡಿದ ಎರಡು ಗಂಟೆಯ ನಂತರ ಹಣ್ಣುಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

ಹಾಲಿನ ಜತೆ ಮೊಸರು ಸೇವಿಸಬೇಡಿ
ಹಾಲು ಮತ್ತು ಮೊಸರನ್ನು ಒಂದೂ ಒಟ್ಟಿಗೆ ಸೇವಿಸಬಾರದು. ಇದು ಜೀರ್ಣಾಂಗ ವ್ಯವಸ್ಥೆಗೆ ತೊಂದರೆಯನ್ನು ಉಂಟು ಮಾಡುತ್ತದೆ. ಇದರಿಂದಾಗಿ ಗ್ಯಾಸ್​, ಹೊಟ್ಟೆನೋವಿನಂತಹ ಸಮಸ್ಯೆಗಳು ಕಂಡು ಬರುತ್ತವೆ.

ಸಿಟ್ರಸ್​ ಹಣ್ಣುಗಳ ಸೇವನೆ ಬೇಡ
ಹಾಲಿನ ಜತೆಗೆ ಹುಳಿ ಅಂಶವಿರುವ ಹಣ್ಣುಗಳನ್ನು ಸೇವಿಸಲೇಬೇಡಿ. ಕಿತ್ತಳೆ, ನಿಂಬೆ, ಅನಾನಸ್​ ಇತ್ಯಾದಿಗಳನ್ನು ಸೇವಿಸುವುದು ಹಾನಿಕರವಾಗಿದೆ. ಸಿಟ್ರಸ್​ ಹಣ್ಣುಗಳಲ್ಲಿ ವಿಟಮಿನ್​ ಸಿ ಮತ್ತು ಸಿಟ್ರಿಕ್​ ಆಮ್ಲ ಇರುತ್ತದೆ.ಇವುಗಳನ್ನು ಹಾಲಿನೊಂದಿಗೆ ಸೇವಿಸುವುದು ಅನಾರೋಗ್ಯವನ್ನು ತಂದೊಡ್ಡುತ್ತದೆ.

ಹಾಲಿನೊಂದಿಗೆ ಉಪ್ಪು ಸೇರಿಸಬೇಡಿ
ಹಾಲು ಕುಡಿದ ತಕ್ಷಣವೇ ಉಪ್ಪಿನಾಂಶದ ತಿಂಡಿಗಳನ್ನು ಸೇವಿಸುವುದನ್ನು ತಪ್ಪಿಸಿ. ಇವುಗಳನ್ನು ಒಟ್ಟಿಗೆ ಸೇವಿಸುವುದು ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವಾಗುತ್ತದೆ. ಇದಲ್ಲದೆ ಹೊಟ್ಟೆ ನೋವು, ಹೊಟ್ಟೆ ಉಬ್ಬರ ಸಮಸ್ಯೆಯನ್ನುಂಟು ಮಾಡುತ್ತದೆ.

ಹಾಲಿನೊಂದಿಗೆ ಮಾಂಸ ಸೇವಿಸಬೇಡಿ
ಅನೇಕರು ಮಾಂಸ ಊಟ ಮಾಡಿದ ಬಳಿಕ ರಾತ್ರಿ ಹಾಲನ್ನು ಸೇವಿಸುತ್ತಾರೆ. ಇದರಿಂದ ಆಮ್ಲೀಯತೆಯ ಸಮಸ್ಯೆ ಕಾಡುತ್ತದೆ. ಜತೆಗೆ ಜೀರ್ಣಾಂಗ ವ್ಯವಸ್ಥೆಗೆ ಹಾನಿಯುಂಟು ಮಾಡುತ್ತವೆ.

ಇದನ್ನೂ ಓದಿ:

Health Benefits: ಹಾಲು ಕುಡಿಯುವ ಅಭ್ಯಾಸ ಇದೆಯೇ? ಹಾಗಿದ್ದರೆ ಬಿಸಿ ಅಥವಾ ತಣ್ಣಗಿನ ಹಾಲಿನಲ್ಲಿ ಯಾವುದು ಒಳ್ಳೆಯದು ಎಂದು ತಿಳಿಯಿರಿ

Health Tips: ಹಾಲು ಕುಡಿಯುವ ಅಭ್ಯಾಸ ಒಳ್ಳೆಯದು, ಆದರೆ ಹಾಲಿನೊಂದಿಗೆ ಈ ಐದು ಪದಾರ್ಥಗಳನ್ನು ಸೇವಿಸುವುದು ಅಪಾಯಕಾರಿ