ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೊಡೆದು ಹಾಕಲು ‘ABC’ ಜ್ಯೂಸ್​ ಸೇವಿಸಿ

| Updated By: Pavitra Bhat Jigalemane

Updated on: Mar 11, 2022 | 2:12 PM

ದೇಹದಲ್ಲಿ ಉತ್ಪತ್ತಿಯಾಗುವ ನಿರುಪಯುಕ್ತ ವಸ್ತುಗಳು ಎಲ್ಲವ್ನನೂ ಹೊರಹಾಕುವುದು ಅಗತ್ಯವಾಗಿರುತ್ತದೆ. ಇದಕ್ಕಾಗಿ ಕೆಲವು  ಆಹಾರಗಳು ಸಹಾಯ ಮಾಡುತ್ತದೆ. ಅವುಗಳಲ್ಲಿ ಕೆಲವು ಜ್ಯೂಸ್​ಗಳು ಉತ್ತಮ ಡಿಟಾಫ್ಸಿಫಿಕೇಶನ್​ ಗಳಾಗಿ ಕೆಲಸ ಮಾಡುತ್ತವೆ

ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೊಡೆದು ಹಾಕಲು ABC ಜ್ಯೂಸ್​ ಸೇವಿಸಿ
ಪ್ರಾತಿನಿಧಿಕ ಚಿತ್ರ
Follow us on

ಪ್ರತೀ ದೇಹಕ್ಕೆ ಒಂದಷ್ಟು ಸ್ವಚ್ಛಗೊಳಿಸುವ ಕ್ರಿಯೆ ಅಗತ್ಯವಾಗಿರುತ್ತದೆ. ತಿಂದ ಆಹಾರ, ದೇಹದಲ್ಲಿ ಉತ್ಪತ್ತಿಯಾಗುವ ನಿರುಪಯುಕ್ತ ವಸ್ತುಗಳು ಎಲ್ಲವನ್ನೂ ಹೊರಹಾಕುವುದು ಅಗತ್ಯವಾಗಿರುತ್ತದೆ. ಇದಕ್ಕಾಗಿ ಕೆಲವು  ಆಹಾರಗಳು ಸಹಾಯ ಮಾಡುತ್ತದೆ. ಅವುಗಳಲ್ಲಿ ಕೆಲವು ಜ್ಯೂಸ್​ಗಳು ಉತ್ತಮ ಡಿಟಾಫ್ಸಿಫಿಕೇಶನ್​ ಗಳಾಗಿ ಕೆಲಸ ಮಾಡುತ್ತವೆ. ಎಬಿಸಿ ಜ್ಯೂಸ್​ಗಳು ಇದಕ್ಕೆ ಹೆಚ್ಚು ನೆರವಾಗುತ್ತದೆ, ಅರೇ ಏನಿದು ಎಬಿಸಿ ಜ್ಯೂಸ್​ ಅಂತೀರಾ ಇಲ್ಲಿದೆ ನೋಡಿ ಮಾಹಿತಿ

ಎ-ಎಂದರೆ ಆಪಲ್​ ಜ್ಯೂಸ್,​ ಬಿ ಎಂದರೆ ಬಿಟ್ರೂಟ್​ ಜ್ಯೂಸ್​ ಇನ್ನು ಸಿ ಎಂದರೆ ಕ್ಯಾರೇಟ್​ ಜ್ಯೂಸ್​. ಇವೇ ನೋಡಿ ಎಬಿಸಿ ಜ್ಯೂಸ್​ಗಳು. ಈ ಪದಾರ್ಥಗಳ ತಾಜಾ ಜ್ಯೂಸ್​ ತಯಾರಿಸಿ ಸೇವಿಸಿದರೆ ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಬಹುದು.  ಅದರ ಜತೆಗೆ ಈ ಎಬಿಸಿ ಜ್ಯೂಸ್​ನಿಂದ ಆರೋಗ್ಯಕ್ಕೆ ಯಾವೆಲ್ಲಾ ಉಪಯೋಗಗಳಿವೆ ಎನ್ನುವುದನ್ನು ನೀವು ತಿಳಿದುಕೊಳ್ಳಲೇಬೇಕು.

ಆಪಲ್​ ಜ್ಯೂಸ್​:
ಸೇಬುವಿನಲ್ಲಿ ಯಥೇಚ್ಛವಾದ ವಿಟಮಿನ್​ ಸಿ, ಫೈಬರ್​ ಸೇರಿದಂತೆ ಆ್ಯಂಟಿಆಕ್ಸಿಡೆಂಟ್​ ಅಂಶಗಳು ಅಡಕವಾಗಿದೆ. ಇವು ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತವೆ. ಇದರೊಂದಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನೂ ನಿಯಂತ್ರಿಸುತ್ತದೆ. ನಿಮ್ಮ ಡಯೆಟ್​ಗೂ ಈ ಆಪಲ್​ ಜ್ಯೂಸ್​ ಸಹಕಾರಿಯಾಗಿದೆ. ಆದ್ದರಿಂದ ನಿಮ್ಮ ದಿನನಿತ್ಯದ ಜೀವನದಲ್ಲಿ ಆಪಲ್​​ ಜ್ಯೂಸ್​ ಸೇವನೆ ಅಭ್ಯಾಸ ಮಾಡಿಕೊಳ್ಳಿ.

ಬಿಟ್ರೂಟ್​ ಜ್ಯೂಸ್​:
ಹೆಚ್ಚು ಪೋಷಕಾಂಶಗಳಿರುವ ಗಡ್ಡೆಯ ಆಹಾರ ಬಿಟ್ರೂಟ್​. ದೇಹದಲ್ಲಿ ರಕ್ತದ ಉತ್ಪತ್ತಿಯನ್ನು ಹೆಚ್ಚಿಸಿ, ಆರೋಗ್ಯವನ್ನು ಕಾಪಾಡುವಲ್ಲಿ ಬಿಟ್ರೂಟ್​ ಸಹಕಾರಿಯಾಗಿದೆ, ಅಲ್ಲದೆ ಬಿಟ್ರೂಟ್​ ಜ್ಯೂಸ್​ ಸೇವನೆಯಿಂದ ಜೀರ್ಣವ್ಯವಸ್ಥೆಯೂ ಸರಿಯಾದ ಪ್ರಮಾಣದಲ್ಲಿ ಆಗುತ್ತದೆ. ಕ್ಯಾನ್ಸರ್​ನ ಅಪಾಯವನ್ನೂ ಕಡಿಮೆ ಮಾಡುತ್ತದೆ.

ಕ್ಯಾರೇಟ್​ ಜ್ಯೂಸ್​:
ವಿಟಮಿನ್​ ಎ, ಫೈಬರ್​​, ವಿಟಮಿನ್​ ಕೆ ಅಂಶಗಳನ್ನು  ಹೇರಳವಾಗಿ ಹೊಂದಿರುವ ಕ್ಯಾರೆಟ್​ ದೇಹವನ್ನು ಆಂತರಿಕವಾಗಿ ಸ್ವಚ್ಛಗೊಳಿಸುತ್ತದೆ. ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸಿ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.  ಕಿಡ್ನಿಯ ಆರೋಗ್ಯ ಮತ್ತು ಕಣ್ಣಿನ ಆರೋಗ್ಯಕ್ಕೂ ಕ್ಯಾರೇಟ್​ ಒಳ್ಳೆಯದು.

ಇದನ್ನೂ ಓದಿ:

‘ಕೈಯಲ್ಲೇ ಊಟ ಮಾಡಬೇಕು, ಚಪ್ಪಲಿಯನ್ನು ಮನೆಯಿಂದ ಹೊರಗಿಡಬೇಕು’ ಈ ರೀತಿಯ ಆಚರಣೆಗೆ ವೈಜ್ಞಾನಿಕ ಕಾರಣಗಳೇನು? ಇಲ್ಲಿದೆ ಮಾಹಿತಿ

Published On - 1:11 pm, Fri, 11 March 22