AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ದೇಹದಲ್ಲಿ ಆಗಾಗ ಕಾಣಿಸಿಕೊಳ್ಳುವ ನೋವನ್ನು ದೂರ ಮಾಡಲು ಈ ಕ್ರಮಗಳನ್ನು ಅನುಸರಿಸಿ

ಪದೇ ಪದೇ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವುದು ಉತ್ತಮವಲ್ಲ. ಇದು ಹೆಚ್ಚು ಕಿರಿಕಿರಿ ಉಂಟು ಮಾಡುವ ಸಾಧ್ಯತೆ ಇದೆ. ಆದರೆ ಈ ಸಮಸ್ಯೆಯನ್ನು ಮನೆಯಲ್ಲಿಯೇ ಸಿಗುವ ಹಲವು ಪದಾರ್ಥಗಳಿಂದ ದೂರ ಮಾಡಿಕೊಳ್ಳಬಹುದು.

Health Tips: ದೇಹದಲ್ಲಿ ಆಗಾಗ ಕಾಣಿಸಿಕೊಳ್ಳುವ ನೋವನ್ನು ದೂರ ಮಾಡಲು ಈ ಕ್ರಮಗಳನ್ನು ಅನುಸರಿಸಿ
ಪ್ರಾತಿನಿಧಿಕ ಚಿತ್ರ
TV9 Web
| Updated By: preethi shettigar|

Updated on: Sep 01, 2021 | 7:49 AM

Share

ಹೆಚ್ಚಿನ ಮಹಿಳೆಯರಿಗೆ ಕುಟುಂಬದ ನಿರ್ವಹಣೆಯ ಜತೆಗೆ ಹೊರಗಿನ ಕೆಲಸವನ್ನು ನಿರ್ವಹಿಸುವ ಜವಾಬ್ದಾರಿಗಳಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಆಫೀಸ್ ಕೆಲಸವನ್ನು ಮುಗಿಸಿದ ನಂತರ, ಅವಳು ಮನೆಗೆಲಸವನ್ನೂ ಮಾಡಬೇಕಾಗುತ್ತದೆ. ಇದರಿಂದಾಗಿ ತುಂಬಾ ದಣಿವಾಗುತ್ತದೆ. ಅಲ್ಲದೆ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ನೋವು ನಿವಾರಕಗಳನ್ನು ಬಳಸುತ್ತಾರೆ. ಆದರೆ ಪದೇ ಪದೇ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವುದು ಉತ್ತಮವಲ್ಲ. ಇದು ಹೆಚ್ಚು ಕಿರಿಕಿರಿ ಉಂಟು ಮಾಡುವ ಸಾಧ್ಯತೆ ಇದೆ. ಆದರೆ ಈ ಸಮಸ್ಯೆಯನ್ನು ಮನೆಯಲ್ಲಿಯೇ ಸಿಗುವ ಹಲವು ಪದಾರ್ಥಗಳಿಂದ ದೂರ ಮಾಡಿಕೊಳ್ಳಬಹುದು.

ಶುಂಠಿಯನ್ನು ಬಳಸಿ ಶುಂಠಿಯ ಸೇವನೆಯು ದೇಹಕ್ಕೆ ತುಂಬಾ ಒಳ್ಳೆಯದು. ಏಕೆಂದರೆ ಇದು ಸಾಕಷ್ಟು ಉರಿಯೂತದ ಅಂಶಗಳನ್ನು ದೂರ ಮಾಡುವ ಶಕ್ತಿ ಹೊಂದಿದೆ. ಶುಂಠಿ ದೇಹದ ನೋವು, ಉರಿಯೂತ ಇತ್ಯಾದಿಗಳನ್ನು ಸಹ ಕಡಿಮೆ ಮಾಡುತ್ತದೆ.  ಶುಂಠಿಯ ತುಂಡನ್ನು ನೀರಿನಲ್ಲಿ ಕುದಿಸಿ, ಅದನ್ನು ಶೋಧಿಸಿ ಕುಡಿಯಿರಿ. ಇದು ನೋವಿನಿಂದ ಉತ್ತಮ ಪರಿಹಾರವನ್ನು ನೀಡುತ್ತದೆ.

ಹಾಲಿಗೆ ಅರಿಶಿಣ ಬೆರೆಸಿ ಹೆಚ್ಚು ಆಯಾಸವಾದಾಗ ಅದನ್ನು ನಿವಾರಿಸಲು ಹಾಲಿಗೆ ಅರಿಶಿಣ ಬೆರೆಸಿ ಕುಡಿಯಿರಿ. ಇದು ತುಂಬಾ ಪ್ರಯೋಜನಕಾರಿ. ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲನ್ನು ಬಿಸಿ ಮಾಡಿ ಮತ್ತು ಒಂದು ಚಮಚ ಅರಿಶಿಣದೊಂದಿಗೆ ಕುಡಿಯಿರಿ. ಇದು ದೇಹದ ನೋವಿನಿಂದ ನಿಮಗೆ ಸಾಕಷ್ಟು ಪರಿಹಾರ ನೀಡುತ್ತದೆ.

ಬೆಲ್ಲ  ಬೆಲ್ಲದ ಸೇವನೆಯು ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಪ್ರತಿ ರಾತ್ರಿ ಊಟದ ನಂತರ ನೀವು ಒಂದು ಸಣ್ಣ ತುಂಡು ಬೆಲ್ಲವನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದು ದೇಹದ ಆಯಾಸವನ್ನು ನಿವಾರಿಸುತ್ತದೆ ಮತ್ತು ನಿಮಗೆ  ಹೆಚ್ಚು ವಿಶ್ರಾಂತಿ ನೀಡುತ್ತದೆ.

ಆ್ಯಪಲ್​ ಸೈಡರ್ ವಿನೆಗರ್  ದೇಹದ ನೋವನ್ನು ತೊಡೆದುಹಾಕಲು ನೀವು ಆ್ಯಪಲ್ ಸೈಡರ್ ವಿನೆಗರ್ ಅನ್ನು ಬಳಸಬಹುದು. ಇದು ಸಾಕಷ್ಟು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದು ನೋವನ್ನು ಕೂಡ ಕಡಿಮೆ ಮಾಡುತ್ತದೆ. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಆ್ಯಪಲ್ ಸೈಡರ್ ವಿನೆಗರ್ ಅನ್ನು ಮಿಶ್ರಣ ಮಾಡಿ ಮತ್ತು ರುಚಿಗೆ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ಇದು ನೋವಿನಿಂದ ಪರಿಹಾರ ನೀಡುತ್ತದೆ.

ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಿ ದೇಹವು ತುಂಬಾ ನೋವಿನಿಂದ ಬಳಲುತ್ತಿದೆ. ಅದೇ ರೀತಿ ದೇಹದಲ್ಲಿ ಊತವಿದೆ ಎಂದರೆ, ಅಂತಹ ಸಂದರ್ಭಗಳಲ್ಲಿ ನೀವು ಸಾಸಿವೆ ಎಣ್ಣೆಯನ್ನು ಬಳಸಬಹುದು. ನೀವು ಒಂದು ಕಪ್ ಸಾಸಿವೆ ಎಣ್ಣೆಯಲ್ಲಿ ನಾಲ್ಕು ಲವಂಗ, ಬೆಳ್ಳುಳ್ಳಿ ಸೇರಿಸಿ ಚೆನ್ನಾಗಿ ಬಿಸಿ ಮಾಡಬೇಕು. ನಂತರ ಅದು ಬೆಚ್ಚಗಿರುವಾಗಲೇ  ನೋವಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಬೇಕು.

ಇದನ್ನೂ ಓದಿ: Walking After Dinner: ರಾತ್ರಿ ಊಟದ ನಂತರ ವಾಕಿಂಗ್ ಮಾಡುವ ಅಭ್ಯಾಸ ಇರುವವರು ಈ ಬಗ್ಗೆ ಗಮನಹರಿಸಿ

Pista Benefits: ಪ್ರತಿದಿನ ಪಿಸ್ತಾ ಸೇವಿಸುವುದರಿಂದ ಅನೇಕ ಆರೋಗ್ಯಕರ ಬದಲಾವಣೆಗಳನ್ನು ನಾವು ಕಾಣಬಹುದು