ದೇಶದಾದ್ಯಂತ ಒಮಿಕ್ರಾನ್ (Omicron) ಪ್ರಕರಣ ಮತ್ತು ಮೂರನೇ ಅಲೆಯ ತೀವ್ರ ಏರಿಕೆಯ ಮಧ್ಯೆ, ಕೊರೊನಾ ಲಸಿಕೆಯನ್ನು ಪಡೆಯುವುದು ಮತ್ತು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸುವುದು ಬಹಳ ಮುಖ್ಯ. ಆಗ ಮಾತ್ರ ವೈರಸ್‌ಗಳ ವಿರುದ್ಧ ನಾವು ಹೋರಾಡಲು ಸಾಧ್ಯ. ಕೊವಿಡ್-19 ಸೋಂಕಿನಿಂದ ದೂರ ಇರಲು ಆಹಾರ, ವ್ಯಾಯಾಮ, ನಿದ್ರೆ ಮತ್ತು ಹೆಚ್ಚು ಸಕ್ರಿಯ ಜೀವನಶೈಲಿಯೊಂದಿಗೆ (Lifestyle) ಕಾಲ ಕಳೆಯುವುದು ಬಹಳ ಮುಖ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಟಿ-ಕೋಶಗಳು (T-cells) ಸೋಂಕಿನಿಂದ ದೂರ ಇರಲು ಸಹಾಯ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಕೊವಿಡ್- 19ನ ಹೊಸ ತಳಿಗಳಿಂದ ದೂರ ಇರಲು ಟಿ- ಕೋಶಗಳು ಪ್ರಮುಖ ಪಾತ್ರವಾಹಿಸುತ್ತದೆ. ಸರಳ ಸಲಹೆಗಳೊಂದಿಗೆ ಟಿ-ಕೋಶಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ಆ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾರ್ಗಗಳನ್ನು ಕಂಡುಕೊಳ್ಳಲು ಈ ಕ್ರಮ ಅನುಸರಿಸಿ ಎಂದು ಲ್ಯೂಕ್ ಕೌಟಿನ್ಹೋ ಹೇಳಿದ್ದಾರೆ.
ವಿಟಮಿನ್ ಡಿಗೆ ಪ್ರಾಮುಖ್ಯತೆ ನೀಡಿ
ಪ್ರತಿರಕ್ಷಣಾ ವ್ಯವಸ್ಥೆ, ಸೋಂಕು ತಡೆಗಟ್ಟುವಿಕೆ ಮತ್ತು ಚೇತರಿಕೆಗೆ ವಿಟಮಿನ್ ಡಿ ಅತ್ಯಗತ್ಯ. ವಿಟಮಿನ್ ಡಿ ಹೆಚ್ಚಳಕ್ಕೆ ಸಾಕಷ್ಟು ಸೂರ್ಯನ ಬೆಳಕನ್ನು ಪಡೆಯಿರಿ ಎಂದು ಕುಟಿನ್ಹೋ ಹೇಳಿದ್ದಾರೆ.
ಚೆನ್ನಾಗಿ ನಿದ್ರೆ ಮಾಡಿ
ನಿದ್ರೆ ಪಡೆಯುವುದು ಬಹಳ ಮುಖ್ಯ. ಏಕೆಂದರೆ ಇದು ಮರುದಿನ ಹೆಚ್ಚು ಶಕ್ತಿ ಮತ್ತು ಚೈತನ್ಯದಿಂದ ಇರಲು ಸಹಾಯ ಮಾಡುತ್ತದೆ. ಜತೆಗೆ ರೋಗನಿರೋಧಕ ಶಕ್ತಿ ನಮ್ಮಲ್ಲಿ ಹೆಚ್ಚಾಗಲು ನಿದ್ರೆ ಬಹಳ ಮುಖ್ಯ. ಒಟ್ಟಾರೆ ದೇಹ ಮತ್ತು ಮನಸ್ಸನ್ನು ಪುನರ್ಯೌವನಗೊಳಿಸುತ್ತದೆ. ನಿದ್ರೆಯ ಅಭಾವವು ನಿಮ್ಮ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೇಗೆ ಕಡಿಮೆ ಮಾಡುತ್ತದೆ. ಉರಿಯೂತವನ್ನು ಹೇಗೆ ಹೆಚ್ಚಿಸುತ್ತದೆ, ವೈರಸ್ಗಳು ಇತ್ಯಾದಿಗಳನ್ನು ಹೇಗೆ ಆಹ್ವಾನಿಸುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಮಿತವಾಗಿ ವ್ಯಾಯಾಮ ಮಾಡಿ, ಚೆನ್ನಾಗಿ ಆಹಾರ ಸೇವಿಸಿ
ಮಿತವಾಗಿ ವ್ಯಾಯಾಮ ಮಾಡುವುದು, ಆಹಾರ ಸೇವನೆ ಮತ್ತು ಸಕ್ರಿಯವಾಗಿರುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿ, ಶುಂಠಿ, ಗರಂ ಮಸಾಲಾ, ಅರಿಶಿಣ, ಜೇನುತುಪ್ಪ, ತುಳಸಿ, ನೆಲ್ಲಿಕಾಯಿ, ಅಮೃತಬಳ್ಳಿ, ಜೊತೆಗೆ ಉತ್ತಮ ಆರೋಗ್ಯಕ್ಕಾಗಿ ವಿಟಮಿನ್ ಸಿ ಭರಿತ ಆಹಾರಗಳು ಮತ್ತು ಸತುಭರಿತ ಆಹಾರಗಳನ್ನು ತಿನ್ನಿ ಎಂದು ತಜ್ಞರು ಶಿಫಾರಸು ಮಾಡುತ್ತಾರೆ.
ಪ್ರಾಣಾಯಾಮ ಮಾಡಿ
ಶಾಂತವಾಗಿರಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ಪ್ರಾಣಾಯಾಮ ವ್ಯಾಯಾಮಗಳನ್ನು ಮಾಡುವುದು. ಉಸಿರಾಟದ ವ್ಯಾಯಾಮಗಳು ನಿಮ್ಮ ಜೀವಕೋಶಗಳಿಗೆ ಆಮ್ಲಜನಕವನ್ನು ನೀಡುತ್ತದೆ ಮತ್ತು ನಿಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ.
ಚೆನ್ನಾಗಿ ನೀರು ಕುಡಿಯಿರಿ
ಕಾಫಿ ಮತ್ತು ಚಹಾ ಮಾತ್ರವಲ್ಲದೆ ಸಾಕಷ್ಟು ನೀರು ಕುಡಿಯಿರಿ. ಜತೆಗೆ ಆರೋಗ್ಯಯುತವಾದ ಆಹಾರ ಸೇವಿಸಿ. ಆದಷ್ಟು ಜಂಕ್ ಫುಡ್ಗಳಿಂದ ದೂರ ಇರಿ.
ಜೀವನಶೈಲಿ
ಉತ್ತಮ ಜೀವನಶೈಲಿಯು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ಆದಷ್ಟು ಧೂಮಪಾನ, ಮದ್ಯಪಾಲದಿಂದ ದೂರ ಇರಿ. ಉತ್ತಮ ಜೀವನಶೈಲಿಯನ್ನು ಮೈಗೂಡಿಸಿಕೊಳ್ಳಿ.
ಇದನ್ನೂ ಓದಿ:
ಅಸಮಾನತೆಯನ್ನು ಕೊನೆಗೊಳಿಸಿದರೆ ಕೊವಿಡ್-19 ಸಾಂಕ್ರಾಮಿಕ 2022ರಲ್ಲಿ ಕೊನೆಗೊಳ್ಳಬಹುದು: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ
ಕೊರೊನಾ ಹೆಚ್ಚಾದರೆ, ಜನರು ಸಹಕಾರ ಕೊಡದಿದ್ದರೆ ಲಾಕ್ಡೌನ್ ಅನಿವಾರ್ಯ -ಗೃಹ ಸಚಿವ ಆರಗ ಜ್ಞಾನೇಂದ್ರ
Published On - 11:36 am, Tue, 4 January 22