ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದೆಯೇ, ಇಲ್ಲವೇ? ನಿಮ್ಮ ಪಾದಗಳನ್ನು ನೋಡಿ ಹೇಳಬಹುದು

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 12, 2024 | 5:39 PM

ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚಾಗಿ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಇಂದಿನ ದಿನಗಳಲ್ಲಿ ಹೃದಯಾಘಾತ 40 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಲ್ಲಿ ಕಂಡು ಬರುತ್ತಿದೆ. ಇದು ಅಧ್ಯಯನಗಳಿಂದಲೂ ಸಾಬೀತಾಗಿದೆ. ಇದಕ್ಕೆಲ್ಲಾ ಕಾರಣ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದು. ಆದರೆ ಸಮಸ್ಯೆ ಏನೆಂದರೆ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಏರುತ್ತಿದ್ದರೂ, ರಕ್ತ ಪರೀಕ್ಷೆ ಮಾಡುವವರೆಗೆ ನಮಗೆ ತಿಳಿಯುವುದಿಲ್ಲ. ಕೊಲೆಸ್ಟ್ರಾಲ್ ಹೆಚ್ಚಾದಾಗ ಕೆಲವು ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ಅನೇಕರಿಗೆ ತಿಳಿದಿಲ್ಲ. ಹಾಗಾದರೆ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದೆಯೋ? ಇಲ್ಲವೋ? ಎಂಬುದನ್ನು ತಿಳಿಯುವುದು ಹೇಗೆ? ಇಲ್ಲಿದೆ ಮಾಹಿತಿ.

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದೆಯೇ, ಇಲ್ಲವೇ? ನಿಮ್ಮ ಪಾದಗಳನ್ನು ನೋಡಿ ಹೇಳಬಹುದು
ಸಾಂದರ್ಭಿಕ ಚಿತ್ರ
Follow us on

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭವಲ್ಲ. ಅನಿಯಮಿತ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ನಮಗೆ ಆರೋಗ್ಯವಾಗಿ ಇರಲು ಬಿಡುವುದಿಲ್ಲ ಈ ಎಲ್ಲಾ ಕಾರಣಗಳಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಾಗುತ್ತದೆ. ದೇಹದಲ್ಲಿ ಬೆಳೆಯುವ ಕೆಟ್ಟ ಕೊಲೆಸ್ಟ್ರಾಲ್ ಸದ್ದಿಲ್ಲದೆ ಅನೇಕ ರೋಗಗಳನ್ನು ಆಹ್ವಾನಿಸುತ್ತದೆ. ಇದರ ರೋಗಲಕ್ಷಣಗಳನ್ನು ಅನೇಕರು ಗುರುತಿಸುವುದಿಲ್ಲ. ಇಂದಿನ ಯುವ ಜನತೆಯಲ್ಲಿ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿದೆ. ಅದರಲ್ಲಿಯೂ ಯುವಕರು ಹೆಚ್ಚಾಗಿ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಇಂದಿನ ದಿನಗಳಲ್ಲಿ ಹೃದಯಾಘಾತ 40 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಲ್ಲಿ ಕಂಡು ಬರುತ್ತಿದೆ. ಇದು ಅಧ್ಯಯನಗಳಿಂದಲೂ ಸಾಬೀತಾಗಿದೆ. ಇದಕ್ಕೆಲ್ಲಾ ಕಾರಣ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದು. ಆದರೆ ಸಮಸ್ಯೆ ಏನೆಂದರೆ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಏರುತ್ತಿದ್ದರೂ, ರಕ್ತ ಪರೀಕ್ಷೆ ಮಾಡುವವರೆಗೆ ನಮಗೆ ತಿಳಿಯುವುದಿಲ್ಲ. ಕೊಲೆಸ್ಟ್ರಾಲ್ ಹೆಚ್ಚಾದಾಗ ಕೆಲವು ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ಅನೇಕರಿಗೆ ತಿಳಿದಿಲ್ಲ. ಹಾಗಾದರೆ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದೆಯೋ? ಇಲ್ಲವೋ? ಎಂಬುದನ್ನು ತಿಳಿಯುವುದು ಹೇಗೆ? ಇಲ್ಲಿದೆ ಮಾಹಿತಿ.

ನಿಮಗೆ ಗೊತ್ತಾ? ನಿಮ್ಮ ಪಾದಗಳು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟದ ಬಗ್ಗೆ ಸೂಚನೆ ನೀಡುತ್ತವೆ. ಪಾದಗಳನ್ನು ನೋಡುವ ಮೂಲಕಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಕಂಡುಹಿಡಿಯಬಹುದು. ಬೆಳಿಗ್ಗೆ ಎದ್ದ ತಕ್ಷಣ ಅಸಹಜವಾಗಿ ಪಾದಗಳು ಊದಿಕೊಳ್ಳುತ್ತಿದ್ದರೆ, ಅದನ್ನು ನೀವು ಗಮನಿಸಿದರೆ ತಕ್ಷಣ ಜಾಗರೂಕರಾಗಿರಿ. ಯೂರಿಕ್ ಆಮ್ಲದ ಹೆಚ್ಚಳವು ಕಾಲುಗಳ ಊತಕ್ಕೆ ಕಾರಣವಾಗಬಹುದು ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ ಪಾದಗಳ ಉರಿಯೂತಕ್ಕೆ ಕಾರಣವೆಂದರೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳ. ಹಾಗಾಗಿ ಈ ರೀತಿಯ ಲಕ್ಷಣ ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ.

ಇದನ್ನೂ ಓದಿ: ಬೆಳಗಿನ ಉಪಾಹಾರ ಸೇವಿಸದವರಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚು!

ಪಾದಗಳಲ್ಲಿ ನೋವು

ಕೆಲವೊಮ್ಮೆ ಕಾಲುಗಳಲ್ಲಿ ನೋವು ಹೆಚ್ಚಾಗಿರುತ್ತದೆ. ಕಾಲುಗಳು ಪಾರ್ಶ್ವವಾಯುವಿಗೆ ಒಳಗಾಗಿರುವಂತೆ ತೋರುತ್ತದೆ. ಕಾಲುಗಳ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದು ಇದಕ್ಕೆ ಕಾರಣವಾಗಿದೆ. ಪರಿಣಾಮವಾಗಿ, ಕಾಲುಗಳಿಗೆ ಸರಿಯಾದ ರಕ್ತದ ಹರಿವು ಇರುವುದಿಲ್ಲ ಬಳಿಕ ಇದು ನಿಲ್ಲುತ್ತದೆ. ಹಾಗಾಗಿ ಪಾದಗಳಲ್ಲಿ ನೋವು ಪ್ರಾರಂಭವಾಗುತ್ತದೆ. ರಾತ್ರಿ ಮಲಗುವಾಗಲೂ ಈ ರೀತಿಯ ಸಮಸ್ಯೆ ಕಂಡು ಬರಬಹುದು.

ಸಾಮನ್ಯವಾಗಿ ಕೆಲವರಿಗೆ ಕಾಲಿನ ಸ್ನಾಯುಗಳು ಯಾವಾಗಲೂ ಒತ್ತಡದಲ್ಲಿರುವಂತೆ ಭಾಸವಾಗುತ್ತದೆ. ಇದು ಪಾದಗಳ ಕೆಳಗೆ ಬೆಂಕಿಯನ್ನು ಉಂಟುಮಾಡಿದಂತೆ ಅನಿಸುತ್ತದೆ. ಅದಲ್ಲದೆ ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ, ಕಾಲುಗಳ ನರಗಳು ಹಾನಿಗೊಳಗಾಗುತ್ತವೆ. ಇದು ಕಾಲುಗಳಲ್ಲಿ ಸೆಳೆತ ಮತ್ತು ಕಾಲ್ಬೆರಳುಗಳ ಊತದಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಅಲ್ಲದೆ, ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ, ರಾತ್ರಿಯಲ್ಲಿ ಪಾದಗಳು ತಣ್ಣಗಾಗುತ್ತವೆ. ಯಾವುದೇ ಋತುವಾಗಿರಲಿ ರಾತ್ರಿಯಲ್ಲಿ ನಿಮ್ಮ ಪಾದಗಳು ತಣ್ಣಗಾದರೆ, ತಕ್ಷಣ ವೈದ್ಯರ ಬಳಿಗೆ ಹೋಗಿ. ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನ ಸಂಕೇತವಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ