AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Kindness Day 2024: ವಿಶ್ವ ದಯೆ ದಿನವನ್ನು ನ. 13 ರಂದು ಆಚರಿಸಲು ಕಾರಣವೇನು?

ವ್ಯಕ್ತಿಯಲ್ಲಿ ಕಿಂಚಿತ್ತು ದಯೆ ಇಲ್ಲದಿದ್ದರೆ ಆತ ಪ್ರಾಣಿಗೆ ಸಮ ಎಂದು ನಮ್ಮ ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ದಯೆ ಇರಬೇಕು ಸಕಲ ಪ್ರಾಣಿಗಳಲ್ಲಿ, ದಯೆಯೇ ಧರ್ಮದ ಮೂಲವಯ್ಯ ಎಂದು ಹೇಳಿದ್ದ ಬಸವಣ್ಣರ ನುಡಿ ಮಾತುಗಳು ಇಂದಿಗೂ ಪ್ರಸ್ತುತವಾಗಿದೆ. ಜಗತ್ತು ಎಷ್ಟೇ ಮುಂದುವರಿದಿದ್ದರೂ ದಯಾಗುಣವೇ ಮನುಷ್ಯ ಸಂಬಂಧಗಳನ್ನು ಪರಸ್ಪರ ಬೆಸೆಯುತ್ತದೆ. ಇದರ ಮಹತ್ವವನ್ನು ಅರಿತು ವಿಶ್ವದೆಲ್ಲೆಡೆ ವಿಶ್ವ ದಯೆ ದಿನ ಅಥವಾ ವರ್ಲ್ಡ್‌ ಕೈಂಡ್‌ನೆಸ್‌ ಡೇ ಎಂಬ ದಿನವನ್ನು ಪ್ರತಿವರ್ಷ ನವೆಂಬರ್‌ 13 ರಂದು ಆಚರಣೆ ಮಾಡಲಾಗುತ್ತದೆ.

World Kindness Day 2024: ವಿಶ್ವ ದಯೆ ದಿನವನ್ನು ನ. 13 ರಂದು ಆಚರಿಸಲು ಕಾರಣವೇನು?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Nov 13, 2024 | 9:59 AM

Share

ಮಾನವನ ಬಳಿ ಎಷ್ಟೇ ಹಣವಿದ್ದರೂ, ಆತನಲ್ಲಿ ಎಷ್ಟೇ ವಿದ್ಯೆ, ಬುದ್ಧಿ, ಸಂಪತ್ತುಗಳಿರಲಿ ಆದರೆ ಆ ವ್ಯಕ್ತಿಯಲ್ಲಿ ಕಿಂಚಿತ್ತು ದಯೆ ಇಲ್ಲದಿದ್ದರೆ ಆತ ಪ್ರಾಣಿಗೆ ಸಮ ಎಂದು ನಮ್ಮ ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ದಯೆ ಇರಬೇಕು ಸಕಲ ಪ್ರಾಣಿಗಳಲ್ಲಿ, ದಯೆಯೇ ಧರ್ಮದ ಮೂಲವಯ್ಯ ಎಂದು ಹೇಳಿದ್ದ ಬಸವಣ್ಣರ ನುಡಿ ಮಾತುಗಳು ಇಂದಿಗೂ ಪ್ರಸ್ತುತವಾಗಿದೆ. ಜಗತ್ತು ಎಷ್ಟೇ ಮುಂದುವರಿದಿದ್ದರೂ ದಯಾಗುಣವೇ ಮನುಷ್ಯ ಸಂಬಂಧಗಳನ್ನು ಪರಸ್ಪರ ಬೆಸೆಯುತ್ತದೆ. ಇದರ ಮಹತ್ವವನ್ನು ಅರಿತು ವಿಶ್ವದೆಲ್ಲೆಡೆ ವಿಶ್ವ ದಯೆ ದಿನ ಅಥವಾ ವರ್ಲ್ಡ್‌ ಕೈಂಡ್‌ನೆಸ್‌ ಡೇ ಎಂಬ ದಿನವನ್ನು ಪ್ರತಿವರ್ಷ ನವೆಂಬರ್‌ 13 ರಂದು ಆಚರಣೆ ಮಾಡಲಾಗುತ್ತದೆ.

ಈ ದಿನದ ಇತಿಹಾಸ?

1997 ರಲ್ಲಿ ಕೆಲವು ಮಾನವ ದಯಾ ಸಂಘಟನೆಗಳು ಸೇರಿಕೊಂಡು ಈ ದಿನವನ್ನು ಆಚರಿಸುವ ನಿರ್ಧಾರ ಮಾಡಿದರು. ಜೊತೆಗೆ ಮಾನವರಲ್ಲಿ ಈ ದಯಾ ಗುಣವನ್ನು ಬೆಳೆಸಿಕೊಳ್ಳುವ ಕರೆ ನೀಡಲು ನಿರ್ಧರಿಸಿದರು. ಬಳಿಕ ವಿಶ್ವ ದಯೆ ಚಳುವಳಿಯು 1998 ರಲ್ಲಿ ವಿಶ್ವ ಸಾಮರಸ್ಯವನ್ನು ಬೆಳೆಸುವಲ್ಲಿ ದಯೆಯು ವಹಿಸುವ ಪ್ರಮುಖ ಪಾತ್ರವನ್ನು ನೆನಪಿಸುವ ಗುರಿಯೊಂದಿಗೆ ಆಚರಣೆಯನ್ನು ಮುನ್ನಡೆಸಿತು. ಇದರಂತೆ ಪ್ರತಿವರ್ಷ ನವೆಂಬರ್ 13 ರಂದು ವಿಶ್ವ ದಯೆ ದಿನವನ್ನು ಆಚರಿಸಲಾಗುತ್ತಿದೆ. ದಯೆ ಎಂದರೆ ಇತರರಿಗೆ ಎಲ್ಲಾ ರೀತಿಯಲ್ಲಿಯೂ ಮಾನವೀಯ ನೆರವು ನೀಡುವುದು, ಯಾರಿಗೂ ಕೆಡುಕು ಉಂಟು ಮಾಡದಿರುವುದೇ ಈ ದಿನದ ಉದ್ದೇಶವಾಗಿದೆ.

ಈ ದಿನ ಅನೇಕ ಸಂಘ -ಸಂಸ್ಥೆಗಳು ಇತರರಿಗೆ ಊಟ, ಮಕ್ಕಳಿಗೆ ಅಗತ್ಯವಿರುವ ಪುಸ್ತಕ, ಬಟ್ಟೆ ಅಥವಾ ಆಹಾರ ದಾನ ಮಾಡುವುದು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಆದರೆ ಈ ದಿನದ ಉದ್ದೇಶ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆಯೇ ಪ್ರತಿಯೊಬ್ಬರಿಗೂ ಈ ಮನೋಭಾವ ಬೆಳೆಯಬೇಕು. ಬಡ ಮಕ್ಕಳಿಗೆ ಊಟ ವಸತಿ ನೀಡುವುದು ಮಾತ್ರವಲ್ಲ ಬದಲಾಗಿ ಪ್ರತಿಯೊಂದು ವಿಷಯದಲ್ಲಿಯೂ ಆ ಗುಣ ಅಡಕವಾಗಬೇಕು.

ಇದನ್ನೂ ಓದಿ: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದೆಯೇ, ಇಲ್ಲವೇ? ನಿಮ್ಮ ಪಾದಗಳನ್ನು ನೋಡಿ ಹೇಳಬಹುದು

ವಿಶ್ವ ದಯೆ ದಿನದಂದು ಈ ರೀತಿ ಸಂದೇಶ ಹಂಚಿಕೊಳ್ಳಿ;

“ದಯೆ ಎಷ್ಟೇ ಸಣ್ಣದಾಗಿರಲಿ, ಎಂದಿಗೂ ವ್ಯರ್ಥವಾಗುವುದಿಲ್ಲ.”

“ದಯೆಯು ಕಿವುಡರು ಕೇಳಬಲ್ಲ ಮತ್ತು ಕುರುಡರು ನೋಡಬಹುದಾದ ಭಾಷೆಯಾಗಿದೆ.”

“ನಿಮ್ಮನ್ನು ಕಂಡುಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ ಇತರರ ಸೇವೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು.”

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ