ದೇಶ ಒಂದೇಯಾದರೂ ನಮ್ಮ ಆಹಾರ ಪದ್ದತಿಗಳು ಬೇರೆ ಬೇರೆಯಾಗಿರುತ್ತದೆ. ಅವುಗಳಲ್ಲಿ ಮಾಂಸಾಹಾರವು ತರಕಾರಿಗಳಿಗಿಂತ ಹೆಚ್ಚು ರುಚಿಕರವಾಗಿರುತ್ತದೆ. ಆದರೆ ಇದು ತ್ವರಿತವಾಗಿ ಆರೋಗ್ಯವನ್ನು ಹಾಳು ಮಾಡುತ್ತದೆ. ಅದಕ್ಕಾಗಿಯೇ ಮಾಂಸಾಹಾರಿಗಳ ಜೀವಿತಾವಧಿ ಸಸ್ಯಾಹಾರಿಗಳಿಗಿಂತ ಕಡಿಮೆ ಎಂದು ಅನೇಕ ಅಧ್ಯಯನಗಳು ತೋರಿಸಿ ಕೊಟ್ಟಿವೆ. ಒಂದು ಸಂಶೋಧನೆಯಲ್ಲಿ, ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ ಸಲಹೆಗಾರ ವಾಲ್ಟರ್ ವಿಲ್ಲೆಟ್ ಹೇಳಿರುವ ಪ್ರಕಾರ, “ಮಾಂಸ ಆಹಾರ ಸೇವನೆ ಒಳ್ಳೆಯದಲ್ಲ. ಅದಲ್ಲದೆ ಸಸ್ಯಾಹಾರಿಗಳು ಮಾಂಸಾಹಾರಿಗಳಿಗಿಂತ ಎಂಟು ವರ್ಷ ಹೆಚ್ಚು ಬದುಕುತ್ತಾರೆ” ಎಂದಿದ್ದಾರೆ. ಇದಲ್ಲದೆ, ದೀರ್ಘಕಾಲದ ವರೆಗೆ ಆರೋಗ್ಯಕರ ಜೀವನ ನಡೆಸಲು ಈ ಕೆಳಗೆ ಹೇಳಿರುವ ತರಕಾರಿಗಳನ್ನು ತಿನ್ನಬೇಕು ಎಂದು ತಜ್ಞರು ಹೇಳುತ್ತಾರೆ. ಅವು ಯಾವುವು ? ಇಲ್ಲಿದೆ ಮಾಹಿತಿ.
ನಿಮ್ಮ ಆಹಾರದಲ್ಲಿ ಈ ಕೆಳಗೆ ಹೇಳಿರುವ ತರಕಾರಿಗಳನ್ನು ಸೇರಿಸಿಕೊಂಡರೆ ನೀವು ದೀರ್ಘಾಯುಷ್ಯ ಪಡೆಯಬಹುದು ಎಂದು ಹೇಳಲಾಗುತ್ತದೆ. ಏಕೆಂದರೆ ಇವು ಅತ್ಯುತ್ತಮ ಆಹಾರಗಳಲ್ಲಿ ಅಗ್ರಸ್ಥಾನದಲ್ಲಿದೆ ಎಂದು ತಜ್ಞರು ಹೇಳಿದ್ದಾರೆ. ಇವುಗಳಲ್ಲಿ ಮೊದಲನೇಯದು ಪಾಲಕ್, ನಂತರ ಎಲೆಕೋಸು, ಟರ್ನಿಪ್ ಎಲೆ, ಗೆಡ್ಡೆ- ಗೆಣೆಸು ಇನ್ನಿತರ ಹಸಿರು ತರಕಾರಿಗಳು. ಇವು ನಮ್ಮ ದೇಹವನ್ನು ಆರೋಗ್ಯವಾಗಿ ಇಡಲು ಸಹಾಯ ಮಾಡುವುದಲ್ಲದೆ ಮಧುಮೇಹ ಮತ್ತು ಕೊಲೆಸ್ಟ್ರಾಲ್ ನಂತಹ ಸಮಸ್ಯೆಗಳಿಂದ ರಕ್ಷಿಸುತ್ತವೆ. ಅವು ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಕೂಡ ಕಡಿಮೆ ಮಾಡುತ್ತವೆ. ಅದಲ್ಲದೆ ಇವುಗಳಲ್ಲಿ ಕ್ಯಾನ್ಸರ್ ನಿಂದ ರಕ್ಷಿಸುವ ಉತ್ಕರ್ಷಣ ನಿರೋಧಕಗಳಿವೆ.
ಇದನ್ನೂ ಓದಿ: ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚಳ; ಆರೋಗ್ಯ ಕಾಪಾಡಿಕೊಳ್ಳುವಂತೆ ತಜ್ಞರಿಂದ ಎಚ್ಚರಿಕೆ
ಪಾಲಕ್ ಸೊಪ್ಪಿನಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ 1, ಫೋಲಿಕ್ ಆಮ್ಲ, ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಪ್ರಮುಖ ಪೋಷಕಾಂಶಗಳಿವೆ. ಇದು ಆಕ್ಸಿಡೇಟಿವ್ ಒತ್ತಡದಿಂದ ನಮ್ಮನ್ನು ರಕ್ಷಿಸುತ್ತದೆ. ಇದು ಜೀವಕೋಶಗಳ ಹಾನಿಯಿಂದ ರಕ್ಷಿಸುತ್ತದೆ. ಟರ್ನಿಪ್ ಎಲೆಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ ಮತ್ತು ಸತುವನ್ನು ಹೊಂದಿದ್ದು, ಇದು ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿರಿಸುತ್ತದೆ. ರಕ್ತಹೀನತೆ ಮತ್ತು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ. ಗೆಡ್ಡೆಗಳನ್ನು ತಿನ್ನುವುದು ರಕ್ತನಾಳಗಳಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇವುಗಳು ನೈಟ್ರೇಟ್ ಅನ್ನು ಹೊಂದಿರುತ್ತದೆ, ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದು ನಿಮ್ಮ ತ್ರಾಣವನ್ನು ಸುಧಾರಿಸುತ್ತದೆ. ಉತ್ತಮ ಜೀರ್ಣಕ್ರಿಯೆಗೆ ಅವು ಉಪಯುಕ್ತವಾಗಿವೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ