ಹೊಟ್ಟೆಯ ಬೊಜ್ಜನ್ನು ಕರಗಿಸಬೇಕೆ? ಈ ಕೆಲವು ಯೋಗ ಭಂಗಿಗಳ ಅಭ್ಯಾಸ ಒಳ್ಳೆಯದು

| Updated By: ಆಯೇಷಾ ಬಾನು

Updated on: Jul 23, 2021 | 7:40 AM

ಹೊಟ್ಟೆಯ ಬೊಜ್ಜು ಕರಗಿಸಬೇಕಾದರೆ ಯೋಗಾಸನ ಅತ್ಯವಶ್ಯಕ. ಪ್ರತಿನಿತ್ಯ ಯೋಗಗಳನ್ನು ಮಾಡುವುದರ ಮೂಲಕ ಬೊಜ್ಜು ಕರಗಿಸಬಹುದು. ಹಾಗಿರುವಾಗ ಯಾವ ಯೋಗ ಭಂಗಿಗಳು ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಹಾಯಕವಾಗಿದೆ ಎಂಬುದನ್ನು ತಿಳಿಯಿರಿ.

ಹೊಟ್ಟೆಯ ಬೊಜ್ಜನ್ನು ಕರಗಿಸಬೇಕೆ? ಈ ಕೆಲವು ಯೋಗ ಭಂಗಿಗಳ ಅಭ್ಯಾಸ ಒಳ್ಳೆಯದು
ಸಾಂದರ್ಭಿಕ ಚಿತ್ರ
Follow us on

ಸ್ಲಿಮ್​ ಆಗಿರಲು ಯಾರು ಇಷ್ಟಪಡುವುದಿಲ್ಲ ಹೇಳಿ? ಎಲ್ಲರಿಗೂ ಫಿಟ್ನೆಸ್​ ಮೆಂಟೇನ್​ ಮಾಡಬೇಕೆಂಬ ಅಸೆ ಇದ್ದೇ ಇರುತ್ತದೆ. ತುಂಬಾ ದಪ್ಪಗಾಗಿದ್ದೀನಿ ಅಥವಾ ತೆಳ್ಳಗಿದ್ದೀನಿ ಎಂಬ ಚಿಂತೆ ಕಾಡುತ್ತದೆ. ಆದರೆ ಕೆಲವರಿಗೆ ಹೊಟ್ಟೆಯ ಭಾಗ ಮಾತ್ರ ದಪ್ಪಗಾಗಿ ಕಾಣಿಸುತ್ತದೆ. ಇದನ್ನು ಹೊಟ್ಟೆಯ ಬೊಜ್ಜು ಎಂದೂ ಕರೆಯುತ್ತಾರೆ. ಇದನ್ನು ಕರಗಿಸುವುದು ಹೇಗೆ? ಕೆಲವು ಯೋಗ ಭಂಗಿಗಳನ್ನು ಮಾಡುವ ಮೂಲಕ ಹೊಟ್ಟೆಯನ್ನು ಕರಗಿಸಬಹುದು.

ತೂಕ ನಷ್ಟವಾಗಬೇಕು ಎಂಬ ಆಸೆ ಇದ್ದರೆ ಪ್ರತಿನಿತ್ಯವೂ ಯೋಗಾಭ್ಯಾಸ ಮಾಡುವುದು ಬಹಳ ಮುಖ್ಯ. ಅದರಲ್ಲಿಯೂ ಮುಖ್ಯವಾಗಿ ಯುವತಿಯರಲ್ಲಿ ಹೊಟ್ಟೆ ಭಾಗ ಹೆಚ್ಚು ದಪ್ಪಗಾಗುತ್ತದೆ. ದೇಹಕ್ಕೆ ಬೇಕಾಗುವ ಕೊಲೆಸ್ಟ್ರಾಲ್​ ಮಟ್ಟದ ಜತೆಗೆ ಹೆಚ್ಚುವರು ಕೊಲೆಸ್ಟ್ರಾಲ್​ ದೇಹಕ್ಕೆ ಸೇರಿದಾಗ ಬೊಜ್ಜು ಕಾಣಿಸಿಕೊಳ್ಳುತ್ತದೆ. ಇದರಿಂದ ಹೆಚ್ಚು ಸುಸ್ತು ಜತೆಗೆ ಆರೋಗ್ಯ ಸಮಸ್ಯೆಗಳು ಕಾಡಬಹುದು. ನಿಯಮಿತವಾಗಿ ಪೌಷ್ಟಿಕ ಆಹಾರ ಸೇವಿಸುವುದರ ಜತೆಗೆ ಬೊಜ್ಜು ಕರಗಿಸಿಕೊಳ್ಳಲು ವ್ಯಾಯಾಮ ಸಹಾಯಾಕ. ಈ ಕೆಳಗಿನ ಕೆಲವು ಯೋಗ ಭಂಗಿಗಳು ನಿಮ್ಮ ಬೊಜ್ಜು ನಿವಾರಣೆಗೆ ಸಹಾಯ ಮಾಡುತ್ತದೆ. ಜತೆಗೆ ಹೊಟ್ಟೆಯ ಬೊಜ್ಜನ್ನು ಸುಲಭದಲ್ಲಿ ಕರಗಿಸಿಕೊಳ್ಳಬಹುದು.

*ತಾಡಾಸನ
*ವಕ್ರಾಸನ
*ಭುಜಂಗಾಸನ
*ಸೂರ್ಯ ನಮಸ್ಕಾರ
*ಪ್ರಾಣಾಯಾಮ

ವ್ಯಾಯಾಮ, ಧ್ಯಾನ ಆರೋಗ್ಯ ಕಾಳಜಿಗೆ ತುಂಬಾ ಒಳ್ಳೆಯದು. ಪ್ರತಿನಿತ್ಯವೂ ಸಹ ಯೋಗ ಭಂಗಿಗಳನ್ನು ಮಾಡುವ ಮೂಲಕ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದಾಗಿದೆ. ಪ್ರತಿನಿತ್ಯ ಬೆಳಗ್ಗೆಯ ಸಮಯದಲ್ಲಿ ಮತ್ತು ಸಾಯಂಕಾಲದಲ್ಲಿ ಯೋಗ ಅಭ್ಯಾಸದಲ್ಲಿ ತೊಡಗಿಕೊಳ್ಳುವುದು ಉತ್ತಮ. ಯೋಗಾಭ್ಯಾಸವು ದೇಹದ ಫಿಟ್ನೆಸ್​ಗಾಗಿ ಮಾತ್ರವಲ್ಲದೇ ಆರೋಗ್ಯವನ್ನು ಸುಧಾರಿಸುತ್ತದೆ. ವೈರಸ್​ಗಳ ಹಾನಿಯಿಂದ ದೇಹ ದುರ್ಬಲಗೊಳ್ಳುವುದನ್ನು ತಡೆಗಟ್ಟಬಹುದಾಗಿದೆ. ಪ್ರತಿನಿತ್ಯವೂ ಆರೋಗ್ಯ ಸುರಕ್ಷತೆಗಾಗಿ ಯೋಗಾಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ.

ಇದನ್ನೂ ಓದಿ:

Weight Reduce Yoga: ತೂಕ ಇಳಿಸಲು ಈ ಐದು ಯೋಗಾಸನ ಮಾಡಿ

Women Health: ತೂಕ ಕಡಿಮೆಯಾಗಿದೆ ಎಂದು ಅತಿಯಾಗಿ ತಿಂದರೆ ಏನಾಗಬಹುದು? ತಜ್ಞರ ಸಲಹೆಗಳು ಇಲ್ಲಿದೆ