Thyroid Disease : ನಿಮ್ಮ ದೇಹದ ಈ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆಯೇ? ಈ ಕಾಯಿಲೆ ಲಕ್ಷಣ

ಇಂದಿನ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಲ್ಲಾದ ಬದಲಾವಣೆಗಳು ನಾನಾ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಒಂದು ವೇಳೆ ಥೈರಾಯ್ಡ್ ಬೇಕಾಬಿಟ್ಟಿ ಆಹಾರವನ್ನು ತಿನ್ನುವಂತಿಲ್ಲ. ಪೋಷಕಾಂಶಯುಕ್ತ ಸಮತೋಲಿತ ಆಹಾರವನ್ನು ಸೇವಿಸಿದರೆ ಮಾತ್ರ ಥೈರಾಯ್ಡ್ ಸಮಸ್ಯೆಯಿಂದ ಸ್ವಲ್ಪ ಮಟ್ಟಿಗೆ ಪಾರಾಗಬಹುದು. ಆದರೆ ಕೆಲವರಿಗೆ ಈ ಆರೋಗ್ಯ ಸಮಸ್ಯೆ ಇದೆಯೇ ಎನ್ನುವ ಅನುಮಾನವು ಹುಟ್ಟಿಕೊಳ್ಳಬಹುದು. ದೇಹದ ಈ ಕೆಲವು ಭಾಗಗಳಲ್ಲಿ ನೋವು ಕಾಣಿಸಿಕೊಂಡರೆ ಥೈರಾಯ್ಡ್ ಸಮಸ್ಯೆಯಿದೆ ಎನ್ನುವುದು ಪಕ್ಕಾ ಎಂದರ್ಥ.

Thyroid Disease : ನಿಮ್ಮ ದೇಹದ ಈ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆಯೇ? ಈ ಕಾಯಿಲೆ ಲಕ್ಷಣ
Edited By:

Updated on: May 06, 2024 | 3:48 PM

ಇತ್ತೀಚೆಗಿನ ದಿನಗಳಲ್ಲಿ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆಯೇ ಈ ಥೈರಾಯ್ಡ್. ಇದು, ನಮ್ಮ ಕತ್ತಿನ ಭಾಗದಲ್ಲಿ ಕಂಡುಬರುತ್ತದೆ. ಥೈರಾಯ್ಡ್ ಚಿಟ್ಟೆಯಾಕಾರದಲ್ಲಿದ್ದು, ದೇಹಕ್ಕೆ ಅಗತ್ಯವಿರುವ ಹಾರ್ಮೋನ್ ಗಳನ್ನು ಉತ್ಪಾದಿಸುತ್ತದೆ. ಈ ಹಾರ್ಮೋನ್ ನಲ್ಲಿ ಅಸಮತೋಲವಾದಾಗ ಥೈರಾಯ್ಡ್ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ. ಸರಿಯಾದ ಚಿಕಿತ್ಸೆ ಹಾಗೂ ಆಹಾರ ಪದ್ಧತಿಯಲ್ಲಿನ ಬದಲಾವಣೆಯ ಮೂಲಕ ಹಾರ್ಮೋನನ್ನು ನಿಯಂತ್ರಣದಲ್ಲಿಡಬಹುದು.

* ಕಿವಿ ಮತ್ತು ದವಡೆಯಲ್ಲಿ ನೋವು : ಥೈರಾಯ್ಡ್ ಹಾರ್ಮೋನ್ ನಲ್ಲಿ ಅಸಮತೋಲನ ಉಂಟಾದಾಗ ದವಡೆ ಮತ್ತು ಕಿವಿಗಳಲ್ಲಿ ನೋವು ಕಂಡುಬರುತ್ತದೆ. ನಿಮಗೂ ಈ ರೀತಿ ನೋವು ಕಾಣಿಸಿಕೊಂಡರೆ ಥೈರಾಯ್ಡ್ ಸಮಸ್ಯೆಯಿದೆ ಎನ್ನುವುದನ್ನು ಸೂಚಿಸುತ್ತದೆ.

* ಕುತ್ತಿಗೆ ನೋವು : ಥೈರಾಯ್ಡ್ ಸಮಸ್ಯೆಯಿದ್ದಾಗ ಕುತ್ತಿಗೆ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತವೆ. ಈ ಥೈರಾಯ್ಡ್ ಗ್ರಂಥಿಯಲ್ಲಿ ಊತ ಕಂಡುಬಂದು ನೋವಿಗೆ ಕಾರಣವಾಗುತ್ತದೆ.

* ಕೀಲು ನೋವು : ಥೈರಾಯ್ಡ್ ಸಮಸ್ಯೆಯಿದ್ದವರಲ್ಲಿ ಕೀಲು ನೋವು ಕಾಣಿಸಿಕೊಳ್ಳುವುದು ಸಹಜ. ಹಾರ್ಮೋನ್ ಗಳ ಬದಲಾವಣೆಯಿಂದ ಮಂಡಿ ನೋವಿನ ಸಮಸ್ಯೆ ಉಲ್ಬಣವಾಗಬಹುದು.

ಇದನ್ನೂ ಓದಿ: ಎಳನೀರು ಕುಡಿಯುವವರ ಗಮನಕ್ಕೆ, ಈ ವಿಚಾರ ನಿಮಗೆ ತಿಳಿದಿರಲೇಬೇಕು

* ಪಾದದಲ್ಲಿ ವಿಪರೀತ ನೋವು: ಥೈರಾಯ್ಡ್ ಹಾರ್ಮೋನ್ ನಲ್ಲಿ ಅಸಮತೋಲನದಿಂದಾಗಿ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಹೆಚ್ಚು ಹೊತ್ತು ನಡೆಯಲು ಹಾಗೂ ನಿಲ್ಲಲು ಸಾಧ್ಯವಾಗುವುದಿಲ್ಲ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ