Coconut Water : ಎಳನೀರು ಕುಡಿಯುವವರ ಗಮನಕ್ಕೆ, ಈ ವಿಚಾರ ನಿಮಗೆ ತಿಳಿದಿರಲೇಬೇಕು
ಬೇಸಿಗೆಯ ಧಗೆ ಹೆಚ್ಚುತ್ತಿದೆ. ಸುಡುವ ಬಿಸಿಲಿನ ತಾಪಕ್ಕೆ ಎಷ್ಟು ನೀರು ಹಾಗೂ ಜ್ಯೂಸ್ ಕುಡಿದರೂ ದಾಹವಂತೂ ತೀರುವುದೇ ಇಲ್ಲ. ಹೀಗಾದಾಗ ಹೆಚ್ಚಿನವರು ದಾಹವನ್ನು ನೀಗಿಸಲು ಎಳನೀರನ್ನು ಕುಡಿಯುತ್ತಾರೆ. ರಸ್ತೆ ಬದಿಯಲ್ಲಿ ಮಾರಾಟ ಮಾಡಲಾಗುವ ಈ ಎಳನೀರನ್ನು ನೇರವಾಗಿ ಕುಡಿಯುವುದರಿಂದ ಆರೋಗ್ಯಕ್ಕೆ ತೊಂದರೆಯಾಗುವ ಸಾಧ್ಯತೆಗಳು ಅಧಿಕವಾಗಿವೆ. ನೀವೇನಾದರೂ ಎಳನೀರು ಕಂಡೊಡನೆ ಕುಡಿಯಲು ಮುಂದಾಗುವಿರಿಯಾದರೆ ಈ ಕೆಲವು ಅಡ್ಡಪರಿಣಾಮಗಳ ಬಗ್ಗೆ ತಿಳಿದಿರುವುದು ಒಳ್ಳೆಯದು.
ಬಿಸಿಲಿನ ತಾಪಕ್ಕೆ ಎಷ್ಟೇ ನೀರು ಕುಡಿದರೂ ದಾಹ ಮಾತ್ರ ನೀಗುವುದಿಲ್ಲ. ಹೀಗಾಗಿ ಹೆಚ್ಚಿನವರು ಏಳನೀರನ್ನು ಕುಡಿಯಲು ಇಷ್ಟ ಪಡುತ್ತಾರೆ. ಎಳನೀರಲ್ಲಿ ಕಾರ್ಬೋಹೈಡ್ರೇಟ್ಸ್ ಮತ್ತು ಪೊಟ್ಯಾಷಿಯಮ್, ಸೋಡಿಯಂ ಮತ್ತು ಮೆಗ್ನೀಷಿಯಮ್‌ನಂಥ ಎಲೆಕ್ಟ್ರೋಲೈಟ್ ನಂತಹ ಅಂಶಗಳು ಹೇರಳವಾಗಿದ್ದು, ದೇಹವನ್ನು ಹೈಡ್ರೇಟ್ ಮಾಡುತ್ತದೆ. ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಈ ನೀರು ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಿ ದೇಹದ ಪೊಟ್ಯಾಷಿಯಮ್ ಅಂಶವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ನೈಸರ್ಗಿಕವಾಗಿಯೂ ಕಡಿಮೆ ಕ್ಯಾಲರಿ ಹೊಂದಿದ್ದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಖನಿಜ ಮತ್ತು ಪೊಟ್ಯಾಸಿಯಮ್ ಹೇರಳವಾಗಿದೆ. ಮೂತ್ರಪಿಂಡ ಮತ್ತು ಹೊಟ್ಟೆ ಉರಿ ಸಮಸ್ಯೆ ಹಾಗೂ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಆದರೆ ಎಲ್ಲರ ನೆಚ್ಚಿನ ಪಾನೀಯವಾಗಿರುವ ಈ ಎಳನೀರನ್ನು ನೇರವಾಗಿ ಕುಡಿಯಬೇಡಿ.
ಇದನ್ನೂ ಓದಿ:ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಬಾರಿ ಮುಖ ತೊಳೆಯಬೇಕು?
ಹಿಂದೊಮ್ಮೆ ಡೆನ್ಮಾರ್ಕ್‌ನ 69 ವರ್ಷದ ವ್ಯಕ್ತಿಯೊಬ್ಬರು ಹಾಳಾದ ತೆಂಗಿನ ನೀರನ್ನು ಸೇವಿಸಿ ಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದರು. ಆ ಬಳಿಕ ಎಳನೀರಿನ ಒಳಭಾಗವು ಕೊಳೆತಿದೆ ಎನ್ನುವುದು ತಿಳಿಯಿತು. ಎಳನೀರು ಒಳ್ಳೆದಿದೆಯೇ ಎಂದು ತಿಳಿಯಲು ನೀರನ್ನು ಪಾರದರ್ಶಕ ಗಾಜಿನೊಳಗೆ ಸುರಿದು ನೋಡಿದರೆ ಎಳನೀರು ಒಳ್ಳೆದಿದೆಯೇ ಎಂದು ತಿಳಿಯುತ್ತದೆ. ಕುಡಿಯುವ ಮೊದಲು ತೆಂಗಿನಕಾಯಿಯ ಒಳಭಾಗವನ್ನು ಪರೀಕ್ಷಿಸಬೇಕು. ನೀವು ಕುಡಿಯುವ ಎಳನೀರು ಕೆಟ್ಟು ಹೋಗಿದ್ದರೆ ಆರೋಗ್ಯ ಸಮಸ್ಯೆಗೆ ದಾರಿ ಮಾಡಿಕೊಡುವ ಸಾಧ್ಯತೆ ಅಧಿಕವಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ