Skin Care Tips: ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಬಾರಿ ಮುಖ ತೊಳೆಯಬೇಕು?
ಸುಡು ಬಿಸಿಲು ಬೆವರಿನಿಂದಾಗಿ ಸಾಕಷ್ಟು ಜನರು ದಿನಕ್ಕೆ ಏಳೆಂಟು ಬಾರಿ ಮುಖ ತೊಳೆಯುತ್ತಾರೆ. ಆದರೆ ದಿನಕ್ಕೆ ಹಲವು ಬಾರಿ ಮುಖ ತೊಳೆದರೆ ತ್ವಚೆ ಹಾಳಾಗುತ್ತದೆ ಎಂದು ಎಚ್ಚರಿಸುತ್ತಾರೆ ಆರೋಗ್ಯ ತಜ್ಞರು. ಆದರಿಂದ ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಬಾರಿ ಮುಖ ತೊಳೆಯಬೇಕು ಎಂಬ ಪ್ರಶ್ನೆಗೆ ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ.
ತ್ವಚೆ ಸುಂದರವಾಗಿರಲು ಮತ್ತು ತ್ವಚೆಯ ಎಣ್ಣೆಯನ್ನು ಹೋಗಲಾಡಿಸಲು ಅನೇಕ ಜನರು ದಿನಕ್ಕೆ ಏಳೆಂಟು ಬಾರಿ ಸೋಪ್, ಫೇಸ್ವಾಶ್ ಬಳಸಿ ಮುಖವನ್ನು ತೊಳೆಯುತ್ತಾರೆ. ಆದರೆ ಈ ರೀತಿ ತೊಳೆಯುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದಲ್ಲ. ತಜ್ಞರ ಪ್ರಕಾರ ಚರ್ಮದ ಪ್ರಕಾರ ಮತ್ತು ಜೀವನಶೈಲಿಯನ್ನು ಅವಲಂಬಿಸಿ ದಿನಕ್ಕೆ ಎರಡು ಅಥವಾ ಮೂರು ಬಾರಿ ಫೇಸ್ ವಾಶ್ ಮೂಲಕ ತೊಳೆಯಿರಿ. ಹಾಗೆಯೇ ಬೆಚ್ಚಗಿನ ನೀರಿನಿಂದ ಒಮ್ಮೆ ಮುಖ ತೊಳೆಯಿರಿ ಎಂದು ಹೇಳುತ್ತಾರೆ.
ಬೆಳಗ್ಗೆ ಎದ್ದ ತಕ್ಷಣ:
ತಜ್ಞರ ಪ್ರಕಾರ, ಎದ್ದ ನಂತರ ನಿಮ್ಮ ಮುಖವನ್ನು ಫೇಸ್ ವಾಶ್ ನಿಂದ ತೊಳೆಯಿರಿ. ಇದು ರಾತ್ರಿಯಲ್ಲಿ ನಿಮ್ಮ ತ್ವಚೆಯಿಂದ ಹೊರಸೂಸುವ ಎಣ್ಣೆಯನ್ನು, ನಿಮ್ಮ ಮುಖದ ಮೇಲಿರುವ ವಿಷಕಾರಿ ಅಂಶಗಳನ್ನು, ದಿಂಬಿನಲ್ಲಿ ಅಂಟಿಕೊಂಡಿರುವ ಧೂಳನ್ನು ತೆಗೆದುಹಾಕುತ್ತದೆ.
ಎರಡನೇ ಬಾರಿಗೆ – ಮೇಕ್ಅಪ್ ಹಚ್ಚುವ ಮೊದಲು:
ಮಾಯಿಶ್ಚರೈಸರ್, ಸನ್ ಸ್ಕ್ರೀನ್, ಮೇಕಪ್ ಹಾಕುವ ಮೊದಲು ನಿಮ್ಮ ಮುಖವನ್ನು ಮತ್ತೊಮ್ಮೆ ತೊಳೆಯಿರಿ. ಹಾಗೆಯೇ ನೀವು ಜಿಮ್‌ಗೆ ಹೋದರೆ ಅಥವಾ ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ಅದನ್ನು ಫೇಸ್ ವಾಶ್‌ನಿಂದ ಸ್ವಚ್ಛಗೊಳಿಸಿ. ಅಥವಾ ನೀವು ಸಾಮಾನ್ಯ, ಶುಷ್ಕ, ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ ಸಾಮಾನ್ಯ ನೀರಿನಿಂದ ತೊಳೆಯಿರಿ.
ಇದನ್ನೂ ಓದಿ: Beauty Tips: ಕೂದಲಿನಿಂದ ಉಗುರುಗಳವರೆಗೆ ಆರೈಕೆಗೆ ಸಂಬಂಧಿಸಿದ ಕೆಲವು ಟಿಪ್ಸ್ಗಳು ಇಲ್ಲಿವೆ
ಮೂರನೇ ಬಾರಿ – ಸಂಜೆ 5 ಗಂಟೆಗೆ
ಮೂರನೇ ಬಾರಿ ದೈನಂದಿನ ಮೇಕಪ್, ಧೂಳು, ಮಾಲಿನ್ಯ, ಬೆವರು ಇತ್ಯಾದಿಗಳನ್ನು ತೊಡೆದುಹಾಕಲು ಬಳಸಲಾಗುತ್ತದೆ. ಈ ಸಮಯದಲ್ಲಿ ನಿಮ್ಮ ಮುಖವನ್ನು ಫೇಸ್ ವಾಶ್ ನಿಂದ ತೊಳೆಯಿರಿ. ನೀವು ಮೇಕ್ಅಪ್ ಧರಿಸಿರಲಿ, ಹೊರಗೆ ಕೆಲಸ ಮಾಡುತ್ತಿರಲಿ, ಎಣ್ಣೆಯುಕ್ತ ತ್ವಚೆಯಿರಲಿ ಅಥವಾ ದಿನದಲ್ಲಿ ಹೆಚ್ಚು ಬೆವರುತ್ತಿರಲಿ, ನಿಮ್ಮ ತ್ವಚೆಯನ್ನು ಸ್ವಚ್ಛಗೊಳಿಸಲು ಕ್ಲೆನ್ಸಿಂಗ್ ಬಾಮ್ ಅಥವಾ ಸೂಪರ್ ಮೈಲ್ಡ್ ಕ್ರೀಮ್ ಎಕ್ಸ್‌ಫೋಲಿಯೇಟರ್ ಅನ್ನು ಬಳಸಿ.
ನಾಲ್ಕನೇ ಬಾರಿ – ಮಲಗುವ ಮುನ್ನ
ರಾತ್ರಿ ಮಲಗುವ ಮುನ್ನ ಮುಖ ತೊಳೆಯಿರಿ. ಈ ಸಮಯದಲ್ಲಿ ನೀವು ಬೆಚ್ಚಗಿನ ನೀರಿನಿಂದ ನಿಮ್ಮ ಮುಖವನ್ನು ತೊಳೆಯಬೇಕು. ನಿಯಮಿತ ಚರ್ಮದ ಶುದ್ಧೀಕರಣವು ಧೂಳು, ಎಣ್ಣೆ, ಕಲ್ಮಶಗಳು, ಸೂಕ್ಷ್ಮಜೀವಿಗಳು, ಸತ್ತ ಚರ್ಮದ ಕೋಶಗಳು ಮತ್ತು ಮೊಡವೆಗಳಂತಹ ಚರ್ಮದ ಸಮಸ್ಯೆಗಳಿಗೆ ಕಾರಣವಾಗುವ ಇತರ ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮುಖ ತೊಳೆದರೆ ಚರ್ಮಕ್ಕೆ ಫ್ರೆಶ್ ಲುಕ್ ಸಿಗುತ್ತದೆ. ಅಲ್ಲದೆ ತ್ವಚೆಯ ಉತ್ಪನ್ನಗಳು ಚರ್ಮವನ್ನು ಚೆನ್ನಾಗಿ ತೂರಿಕೊಳ್ಳುತ್ತವೆ. ನಿಯಮಿತ ಮುಖದ ಶುದ್ಧೀಕರಣವು ಹೆಚ್ಚುವರಿ ತೈಲ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ