Natural Face Wash: ದುಬಾರಿ ಬೆಲೆಯ ಫೇಸ್ ವಾಶ್ ಬದಲಿಗೆ ಮನೆಯಲ್ಲಿ ಲಭ್ಯವಿರುವ ವಸ್ತುಗಳಿಂದ ತ್ವಚೆಯ ಹೊಳಪನ್ನು ಹೆಚ್ಚಿಸಿ
ತ್ವಚೆಯ ಮೇಲಿನ ಧೂಳು, ಕೊಳೆಗಳನ್ನು ಹೋಗಲಾಡಿಸಲು ಮುಖವನ್ನು ದಿನಕ್ಕೆ ಎರಡರಿಂದ ಮೂರು ಬಾರಿ ತೊಳೆಯುವುದು ಬಹಳ ಮುಖ್ಯ. ಅನೇಕ ಜನರು ಫೇಸ್ ವಾಶ್ ಅಥವಾ ಕ್ಲೆನ್ಸರ್ ಸಹಾಯದಿಂದ ಮುಖವನ್ನು ತೊಳೆಯತ್ತಾರೆ. ಇದರ ಬದಲು ನೈಸರ್ಗಿಕವಾಗಿ ಲಭ್ಯವಿರುವ ಈ ಕೆಲವೊಂದು ವಸ್ತುಗಳಿಂದ ಮುಖವನ್ನು ತೊಳೆಯುವ ಮೂಲಕ ತ್ವಚೆಯ ಹೊಳಪನ್ನು ಮತ್ತಷ್ಟು ಹೆಚ್ಚಿಸಬಹುದು ಜೊತೆಗೆ ಹಲವಾರು ಚರ್ಮ ಸಂಬಂಧಿ ಸಮಸ್ಯೆಗಳನ್ನು ಕೂಡ ತೊಡೆದುಹಾಕಬಹುದು.
ಮುಖದ ಅಂದವನ್ನು ಕಾಪಾಡಿಕೊಳ್ಳಲು ಹಾಗೂ ತ್ವಚೆಯಲ್ಲಿ ಕಾಣಿಸಿಕೊಳ್ಳುವ ಕೊಳೆ ಮತ್ತು ಜಿಡ್ಡನ್ನು ತೊಡೆದುಹಾಕಲು ದಿನಕ್ಕೆ ಎರಡು ಬಾರಿಯಾದರೂ ಮುಖವನ್ನು ಸ್ವಚ್ಛಗೊಳಿಸುವುದು ಅವಶ್ಯಕ. ಮುಖವನ್ನು ಸ್ವಚ್ಛಗೊಳಿಸಲು ಅನೇಕರು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಪೇಸ್ ವಾಶ್ ಮತ್ತು ಕ್ಲೆನ್ಸರ್ ಬಳಕೆ ಮಾಡುತ್ತಾರೆ. ವಾಸ್ತವವಾಗಿ ಈ ಉತ್ಪನ್ನಗಳನ್ನು ರಾಸಾಯನಿಕಯುಕ್ತವಾಗಿರುತ್ತದೆ ಮತ್ತು ಇದು ಮೊಡವೆ ಇನ್ನಿತರ ತ್ವಚೆ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ. ಹಾಗಿರುವಾಗ ರಾಸಯನಿಕಯುಕ್ತ ಉತ್ಪನ್ನಗಳನ್ನು ಬಳಸುವ ಬದಲು ನಿಮ್ಮ ಮನೆಯಲ್ಲಿ ಲಭ್ಯವಿರುವ ಈ ಕೆಲವೊಂದು ವಸ್ತುಗಳಿಂದ ಮುಖವನ್ನು ಸ್ವಚ್ಛಗೊಳಿಸುವ ಮೂಲಕ ತ್ವಚೆಯ ಹೊಳಪು ಮತ್ತು ಆರೋಗ್ಯವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಬಹುದು.
ನಿಮ್ಮ ಮನೆಯಲ್ಲಿ ಲಭ್ಯವಿರುವ ಈ ಕೆಲವೊಂದು ನೈಸರ್ಗಿಕ ವಸ್ತುಗಳಿಂದ ಮುಖ ತೊಳೆಯಿರಿ:
ಸೌತೆಕಾಯಿ ರಸ:
ಮುಖ ತೊಳೆಯಲು ರಾಸಯನಿಕಯುಕ್ತ ಫೇಸ್ ವಾಶ್ ಬದಲು ನೀವು ಸೌತೆಕಾಯಿ ರಸವನ್ನು ಬಳಸಬಹುದು. ಇದು ಮುಖದಲ್ಲಿರುವ ಕೊಳೆ ಮತ್ತು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕುತ್ತದೆ ಹಾಗೂ ತಾಜಾತನದ ಭಾವನೆಯನ್ನು ನೀಡುತ್ತದೆ. ಇದಕ್ಕಾಗಿ ಸೌತೆಕಾಯಿ ರಸ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ, ಹತ್ತಿ ಉಂಡೆಯ ಸಹಾಯದಿಂದ ಆ ರಸವನ್ನು ಮುಖಕ್ಕೆ ಹಚ್ಚಿ ನಂತರ ನೀರಿನಿಂದ ಮುಖವನ್ನು ತೊಳೆಯಿರಿ.
ಜೇನುತುಪ್ಪ:
ಜೇನು ತುಪ್ಪ ಕೂಡಾ ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳಿದ್ದು, ಇದು ತ್ವಚೆಯ ಮೇಲಿರುವ ಬ್ಯಾಕ್ಟೀರಿಯಾ ಮತ್ತು ಕೊಳೆಗಳನ್ನು ಸ್ವಚ್ಛಗೊಳಿಸಿ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ಇದಕ್ಕಾಗಿ ಒಂದು ಚಮಚ ಜೇನುತುಪ್ಪವನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿ, ಎರಡು ನಿಮಿಷಗಳ ಕಾಲ ನಿಧಾನಕ್ಕೆ ಮಸಾಜ್ ಮಾಡಿ, ನಂತರ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ.
ಇದನ್ನೂ ಓದಿ: ಮುಖಕ್ಕೆ ಸ್ಕ್ರಬ್ಬಿಂಗ್ ಮಾಡುವಾಗ ಎಂದಿಗೂ ಈ ತಪ್ಪು ಮಾಡಬೇಡಿ
ಕಡ್ಲೆಹಿಟ್ಟು:
ಮುಖವನ್ನು ಸ್ವಚ್ಛಗೊಳಿಸಲು ಕಡ್ಲೆ ಹಿಟ್ಟನ್ನು ಹಿಂದಿನ ಕಾಲದಿಂದಲೂ ಬಳಸಲಾಗುತ್ತಿದೆ. ಇದು ಮುಖದಲ್ಲಿನ ಕೊಳಕು ಮತ್ತು ಸತ್ತ ಚರ್ಮವನ್ನು ತೆಗೆದು ಹಾಕುವ ಮೂಲಕ ಚರ್ಮದ ಬಣ್ಣವನ್ನು ಸುಧಾರಿಸುತ್ತದೆ. ಇದಕ್ಕಾಗಿ ಒಂದರಿಂದ ಎರಡು ಚಮಚ ಕಡ್ಲೆಹಿಟ್ಟನ್ನು ತೆಗೆದುಕೊಂಡು, ಅದಕ್ಕೆ ಒಂದು ಚಿಟಿಕೆ ಅರಶಿನ ಮತ್ತು ಕೆಲವು ಹನಿ ರೋಸ್ ವಾಟರ್ ಸೇರಿಸಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿ ಮತ್ತು ಸ್ವಲ್ಪ ಹೊತ್ತಿನ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ.
ಇದನ್ನೂ ಓದಿ:
ಮೊಸರು:
ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು, ನೀವು ಮೊಸರಿನಿಂದಲೂ ಮುಖವನ್ನು ಸ್ವಚ್ಛಗೊಳಿಸಬಹುದು. ಮೊಸರು ಮುಖದಲ್ಲಿ ಕಾಣಿಸಿಕೊಳ್ಳುವ ಟ್ಯಾನಿಂಗ್ ಮತ್ತು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ಒಂದರಿಂದ ಎರಡು ಚಮಚ ಮೊಸರನ್ನು ತೆಗೆದುಕೊಂಡು ಮುಖದ ಮೇಲೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ, ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.
ಹಾಲು:
ಹಾಲು ಅತ್ಯುತ್ತಮ ಕ್ಲೆನ್ಸರ್ ಆಗಿ ಕೆಲಸ ಮಾಡುತ್ತದೆ. ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲ ಕಂಡುಬರುತ್ತದೆ, ಇದು ಚರ್ಮದ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ ಮತ್ತು ಮುಖವನ್ನು ಸ್ವಚ್ಛಗೊಳಿಸಿ ಮುಖವನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ಇದಕ್ಕಾಗಿ ಹತ್ತಿಯ ಉಂಡೆಯ ಸಹಾಯದಿಂದ ಹಾಲನ್ನು ಮುಖಕ್ಕೆ ಹಚ್ಚಿಕೊಂಡು, ಸ್ವಲ್ಪ ಹೊತ್ತು ಮೃದುವಾಗಿ ಮಸಾಜ್ ಮಾಡಿ ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಿರಿ.
ಈ ಎಲ್ಲಾ ವಸ್ತುಗಳು ನೈಸರ್ಗಿಕ ಫೇಸ್ ವಾಶ್ ಮತ್ತು ಕ್ಲೆನ್ಸರ್ ಆಗಿದ್ದು, ಕೊಳೆ ಮತ್ತು ಕಲ್ಮಶಗಳನ್ನು ತೆಗೆದುಹಾಕುವ ಮೂಲಕ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: