zodiac sign: ಈ ರಾಶಿಯವರು ಚಿನ್ನ ಧರಿಸಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ?
ಚಿನ್ನದ ಆಭರಣಗಳನ್ನು ಧರಿಸುವುದು ಎಲ್ಲರಿಗೂ ಒಳ್ಳೆಯದಲ್ಲ. ಮಕರ ಮತ್ತು ಕುಂಭ ರಾಶಿಯವರಿಗೆ ಚಿನ್ನ ಧಾರಣೆ ಮಾಡುವುದು ಅಷ್ಟು ಒಳ್ಳೆಯದಲ್ಲ ಎಂಬ ನಂಬಿಕೆ ಇದೆ. ಆದರೆ ಕೆಲವು ರಾಶಿಯವರಿಗೆ ಚಿನ್ನ ಧರಿಸುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಹಾಗಾದರೆ ಚಿನ್ನ ಧರಿಸುವುದರಿಂದ ಅದೃಷ್ಟ ಹೆಚ್ಚಾಗುವ ರಾಶಿಗಳು ಯಾವವು? ಇಲ್ಲಿದೆ ಮಾಹಿತಿ.
ಚಿನ್ನದ ಆಭರಣಗಳು ತೊಡುವುದಕ್ಕೆ ಎಲ್ಲರಿಗೂ ಇಷ್ಟ. ಆದರೆ ಇದನ್ನು ಧರಿಸುವುದರಿಂದ ಕೆಲವರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಈ ವಿಷಯ ಕೇಳಿ ನಿಮಗೆ ಆಶ್ಚರ್ಯ ಎನಿಸಬಹುದು ಆದರೆ ಇದು ಸತ್ಯ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಿನ್ನದ ಆಭರಣಗಳನ್ನು ಧರಿಸುವುದು ಎಲ್ಲರಿಗೂ ಒಳ್ಳೆಯದಲ್ಲ. ಮಕರ ಮತ್ತು ಕುಂಭ ರಾಶಿಯವರಿಗೆ ಚಿನ್ನ ಧಾರಣೆ ಮಾಡುವುದು ಅಷ್ಟು ಒಳ್ಳೆಯದಲ್ಲ ಎಂಬ ನಂಬಿಕೆ ಇದೆ. ಆದರೆ ಕೆಲವು ರಾಶಿಯವರಿಗೆ ಚಿನ್ನ ಧರಿಸುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಹಾಗಾದರೆ ಚಿನ್ನ ಧರಿಸುವುದರಿಂದ ಅದೃಷ್ಟ ಹೆಚ್ಚಾಗುವ ರಾಶಿಗಳು ಯಾವವು? ಇಲ್ಲಿದೆ ಮಾಹಿತಿ.
ಮೇಷ ರಾಶಿ:
ಮಂಗಳನ ಒಡೆತನದ ಮೇಷ ರಾಶಿಯವರು ಚಿನ್ನವನ್ನು ಧರಿಸುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಚಿನ್ನ ಧರಿಸುವುದರಿಂದ, ಮೇಷ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ವೃತ್ತಿ ಕ್ಷೇತ್ರದಲ್ಲಿ ಉತ್ತಮ ಫಲಗಳು ಲಭಿಸುತ್ತದೆ. ಮೇಷ ರಾಶಿಯವರ ಜಾತಕದಲ್ಲಿ ಸೂರ್ಯ ಮತ್ತು ಗುರು ದುರ್ಬಲರಾಗಿದ್ದರೆ, ಚಿನ್ನ ಧರಿಸುವುದರಿಂದ ಇದಕ್ಕೆ ಪರಿಹಾರ ಸಿಗುತ್ತದೆ.
ಸಿಂಹ ರಾಶಿ:
ಈ ರಾಶಿಯವರು ತುಂಬಾ ಸ್ವತಂತ್ರರು. ಆದರೆ ಕೆಲವೊಮ್ಮೆ ಇದೇ ಅವರಿಗೆ ಮುಳುವಾಗುತ್ತದೆ. ಆದ್ದರಿಂದ, ಸಿಂಹ ರಾಶಿಯವರ ಗಮನವನ್ನು ಕೇಂದ್ರೀಕರಿಸಲು ಚಿನ್ನದ ಆಭರಣಗಳನ್ನು ಧರಿಸಬೇಕು. ಇದರಿಂದ ಅವರು ಉತ್ತಮ ರೀತಿಯಲ್ಲಿ ಪ್ರಗತಿ ಸಾಧಿಸುತ್ತಾರೆ ಮತ್ತು ಸಮಾಜದಲ್ಲಿ ತಮ್ಮದೇ ಆದ ಸ್ಥಾನ ಪಡೆದುಕೊಳ್ಳುತ್ತಾರೆ.
ಕನ್ಯಾ ರಾಶಿ:
ಬುಧ ಗ್ರಹದ ಒಡೆತನದಲ್ಲಿರುವ ಕನ್ಯಾ ರಾಶಿಯ ಜನರು ಕಠಿಣ ಪರಿಶ್ರಮಿಗಳು. ಆದರೆ ಕೆಲವೊಮ್ಮೆ ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ಅವರು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ನಿವಾರಿಸಲು ಚಿನ್ನದ ಆಭರಣಗಳನ್ನು ಧರಿಸಿದರೆ, ತುಂಬಾ ಪ್ರಯೋಜನಗಳನ್ನು ಪಡೆಯುತ್ತಾರೆ. ಚಿನ್ನ ಧರಿಸುವುದರಿಂದ ವೃತ್ತಿಜೀವನದಲ್ಲಿ ಉತ್ತಮ ಬದಲಾವಣೆಗಳು ಕಂಡು ಬರುತ್ತದೆ. ಕಾಣುವ ಕನಸು ನನಸಾಗುತ್ತದೆ.
ಇದನ್ನೂ ಓದಿ: ಮನೆಯ ಬಾಗಿಲಿನ ಮೇಲೆ ದೇವರ ಫೋಟೋ ಇಟ್ಟಿದ್ದೀರಾ? ಈ ನಿಯಮ ಕಡ್ಡಾಯ ಪಾಲಿಸಿ
ಧನು ರಾಶಿ:
ಈ ರಾಶಿಯ ಅಧಿಪತಿ ಗುರು. ಈ ರಾಶಿಯವರು ಚಿನ್ನ ಧರಿಸುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಈ ರಾಶಿಯವರು ಚಿನ್ನವನ್ನು ಧರಿಸಿದರೆ ಸಾಮಾಜಿಕ ಜೀವನದಲ್ಲಿ ಇದ್ದಂತಹ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ಮೀನ ರಾಶಿ:
ಈ ರಾಶಿಯವರು ಭವಿಷ್ಯದ ಬಗ್ಗೆ ಹೆಚ್ಚಿನ ಭಯ ಹೊಂದಿರುತ್ತಾರೆ. ಆದರೆ ಚಿನ್ನ ಧರಿಸುವುದರಿಂದ ಎಲ್ಲಾ ರೀತಿಯ ಭಯ ನಿವಾರಣೆಯಾಗುತ್ತವೆ ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:34 pm, Sat, 4 May 24