Deepavali 2022: ಹಬ್ಬದ ಸಡಗರದ ನಡುವೆ ಅಸ್ತಮಾದಿಂದ ಬಳಲುತ್ತಿದ್ದರೆ ಇಲ್ಲಿದೆ ಉಪಯುಕ್ತ ಸಲಹೆಗಳು

| Updated By: ಅಕ್ಷತಾ ವರ್ಕಾಡಿ

Updated on: Oct 22, 2022 | 2:27 PM

Deepavali ; ಹಬ್ಬಗಳೆಂದರೇನೆ ಹಾಗೆಯೇ ಮುಂಚಿತವಾಗಿಯೇ ಪ್ರತಿಯೊಂದು ಮನೆಯಲ್ಲಿಯೂ ಸಂಭ್ರಮ,ಸಡಗರಗಳು ಮನೆ ಮಾಡಿ ಇರುತ್ತದೆ. ಆದ್ದರಿಂದ ಆಚರಣೆಯ ಜೊತೆಗೆ ಆರೋಗ್ಯದ ಕಡೆ ಗಮನಹರಿಸುವುದು ಅತ್ಯಂತ ಅಗತ್ಯ.

Deepavali 2022: ಹಬ್ಬದ ಸಡಗರದ ನಡುವೆ ಅಸ್ತಮಾದಿಂದ ಬಳಲುತ್ತಿದ್ದರೆ ಇಲ್ಲಿದೆ ಉಪಯುಕ್ತ ಸಲಹೆಗಳು
ಸಾಂಧರ್ಬಿಕ ಚಿತ್ರ
Image Credit source: tv9 Tegulu
Follow us on

ಈ ವರ್ಷದ ಬೆಳಕಿನ ಹಬ್ಬದಲ್ಲಿ ಆರೋಗ್ಯಕರವಾಗಿ ಸಂಭ್ರಮ ಸಡಗರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಇಲ್ಲಿದೆ ಕೆಲವೊಂದು ಉಪಯುಕ್ತ ಸಲಹೆಗಳು. ಆಸ್ತಮಾದಿಂದ ತೀವ್ರವಾಗಿ ಬಳಲುತ್ತಿರುವವರು ಆದಷ್ಟು ವಾಯು ಮಾಲಿನ್ಯ ಮತ್ತು ಧೂಳಿನಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ.

ಹಬ್ಬಗಳೆಂದರೇನೆ ಹಾಗೆಯೇ ಮುಂಚಿತವಾಗಿಯೇ ಪ್ರತಿಯೊಂದು ಮನೆಯಲ್ಲಿಯೂ ಸಂಭ್ರಮ,ಸಡಗರಗಳು ಮನೆ ಮಾಡಿ ಇರುತ್ತದೆ. ಆದ್ದರಿಂದ ಆಚರಣೆಯ ಜೊತೆಗೆ ಆರೋಗ್ಯದ ಕಡೆ ಗಮನಹರಿಸುವುದು ಅತ್ಯಂತ ಅಗತ್ಯ.

ಆಸ್ತಮಾ, ಶ್ವಾಸಕೋಶದ ಫೈಬ್ರೋಸಿಸ್ ಮತ್ತು ಅಲರ್ಜಿಕ್ ರಿನಿಟಿಸ್ನಂತಹ ಉಸಿರಾಟದ ಸಮಸ್ಯೆಯನ್ನು ತಡೆಗಟ್ಟಲು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅಗತ್ಯ. ವಿಶೇಷವಾಗಿ  ಆಸ್ತಮಾದಂತಹ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವವರು ಸಾಧ್ಯವಾದಷ್ಟು ಸಮಯವನ್ನು ಮನೆಯೊಳಗೆ ಕಳೆಯುವುದು ಉತ್ತಮ.

ಇದನ್ನು ಓದಿ: Madagascar Periwinkle: ಈ ಸಸ್ಯದ ಎಲೆಯನ್ನು ತಿಂದರೆ ಸಾಕು ಹಲವು ರೋಗಗಳು ನಿಮ್ಮಿಂದ ಓಡಿ ಹೋಗುತ್ತೆ

ಆಸ್ತಮಾವು ಹದಗೆಡುವ ಎದೆನೋವು, ಉಸಿರುಗಟ್ಟಿಸುವುದು, ಕೆಮ್ಮುವುದು ಮತ್ತು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಸ್ತಮಾ ಪೀಡಿತರು ತೆಗೆದುಕೊಳ್ಳಬಹುದಾದ ಕೆಲವು ಉಪಯುಕ್ತ ಸಲಹೆಗಳೆಂದರೆ:

1.ಆಹಾರ ಸೇವನೆಯ ಬಗ್ಗೆ ಗಮನವಿರಲಿ:
ಹಬ್ಬದ ಸಮಯದಲ್ಲಿ ಸಾಕಷ್ಟು ಬಗೆಯ ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಇವುಗಳು ಬಾಯಿಯಲ್ಲಿ ನೀರೂರಿಸುವುದಂತೂ ಖಂಡಿತ. ಆದ್ದರಿಂದ ಕಡಿಮೆ ತಿನ್ನಿರಿ ಏಕೆಂದರೆ ಅತಿಯಾಗಿ ತಿನ್ನುವುದು, ಇದು ಹಬ್ಬಗಳ ಸಮಯದಲ್ಲಿ ಸರ್ವೇ ಸಾಮಾನ್ಯ ಮತ್ತು ಸ್ವತಃ ಕೆಟ್ಟ ಅಭ್ಯಾಸವಾಗಿದೆ. ಆದರೆ ಅಸ್ತಮಾದಿಂದ ಬಳಲುತ್ತಿದ್ದವರು ಅತಿಯಾಗಿ ತಿನ್ನುವುದು ಮತ್ತು ಕೊಬ್ಬಿನ ಆಹಾರವನ್ನು ಸೇವಿಸುವುದು ಹೆಚ್ಚು ಅಪಾಯಕಾರಿ.

2.N95 ಮಾಸ್ಕ್ ಬಳಸಿ:
ಆಸ್ತಮಾದಂತಹ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವವರು ಸಾಧ್ಯವಾದಷ್ಟು ಸಮಯವನ್ನು ಮನೆಯೊಳಗೆ ಕಳೆಯುವುದು ಉತ್ತಮ. ಅದಾಗಿಯೂ ಹೊರಗೆ ಹೋಗುವುದಾದರೆ, N95 ಮಾಸ್ಕ್ ಬಳಸಿ, ಏಕೆಂದರೆ ವಾಯು ಮಾಲಿನ್ಯ ಮತ್ತು ಧೂಳಿನಿಂದ ನಿಮ್ಮನ್ನು ರಕ್ಷಿಸಲು ಇದು ಸಹಕಾರಿಯಾಗಿದೆ.


3.
ತಂಪು ಪಾನೀಯಗಳಿಂದ ದೂರವಿರಿ:
ದಿನವಿಡೀ ಉಗುರುಬೆಚ್ಚನೆಯ ನೀರನ್ನು ಕುಡಿಯುವುದನ್ನು ರೂಢಿಮಾಡಿಕೊಳ್ಳಿ. ಆಸ್ತಮಾದಂತಹ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವವರು ಆದಷ್ಟು ತಂಪು ಪಾನೀಯಗಳಿಂದ ದೂರವಿರುವುದು ಆರೋಗ್ಯಕ್ಕೆ ಅತ್ಯಂತ ಉತ್ತಮವಾಗಿದೆ.

4.ಧೂಳು, ವಾಯು ಮಾಲಿನ್ಯಗಳಿಂದ ದೂರವಿರಿ:
ಈಗಾಗಲೇ ಉಸಿರಾಟದ ಸಮಸ್ಯೆಗಳು ಅಥವಾ ಆಸ್ತಮಾದಂತಹ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ಸಾಧ್ಯವಾದಷ್ಟು ಮನೆಯೊಳಗಿರುವುದು ಉತ್ತಮ. ಧೂಮಪಾನಕ್ಕೆ ಒಡ್ಡಿಕೊಂಡಿರುವವರು ಆದಷ್ಟು ತಮ್ಮ ಅಭ್ಯಾಸವನ್ನು ಮಿತಿಗೊಳಿಸಿ.


5.
ಮದ್ಯಪಾನವನ್ನು ಸೇವನೆಯನ್ನು ತಪ್ಪಿಸಿ:
ಆಲ್ಕೋಹಾಲ್ ಸೇವನೆ ಅಸ್ತಮಾ ರೋಗಿಗಳನ್ನು ಮತ್ತಷ್ಟು ಸಮಸ್ಯೆಯತ್ತ ತಳ್ಳುತ್ತದೆ ಎಂಬುದು ಈಗಾಗಲೇ ತಿಳಿದಿರುವ ವಿಷಯ. ಆದರೂ ಕೂಡ ಹಬ್ಬಗಳ ಸಂದರ್ಭದಲ್ಲಿ ಸಡಗರಗಳ ನಡುವೆ ಆದಷ್ಟು ಮದ್ಯಪಾನವನ್ನು ಸೇವನೆಯನ್ನು ತಪ್ಪಿಸಿ.

ಈ ಮೇಲಿನ ಎಲ್ಲ ಸಲಹೆಗಳನ್ನು ತಪ್ಪದೇ ಅನುಸರಿಸಿ ,ನಿಮ್ಮ ದೀಪಾವಳಿಯನ್ನು ಮುಕ್ತವಾಗಿ ಆನಂದದಿಂದ ಆಚರಿಸಿ.

Published On - 1:21 pm, Sat, 22 October 22