ಜೇನಿಗೆ ಹೋಲಿಸಿದರೆ ಜೀರಿಗೆ ನೀರು ದೇಹದ ತೂಕ ಇಳಿಸಲು ಜೊತೆಗೆ ಸರ್ವಾಂಗ ಆರೋಗ್ಯ ಕಾಪಾಡಲು ಅತ್ಯುತ್ತಮ, ಹೇಗೆ? ಇಲ್ಲಿದೆ ವಿವರಣೆ
Honey Water Vs Jeera Water: ಜೇನುತುಪ್ಪ ನೀರು ಮತ್ತು ಜೀರಿಗೆ ನೀರು! ಯಾವುದು ಬೆಸ್ಟ್? ಅಸಲಿಗೆ ಈ ಜೇನುತುಪ್ಪದ ಮಹಿಮೆಯನ್ನು ಒಂದೇ ಉಸಿರಿನಲ್ಲಿ ಹೇಳಬೇಕು ಅಂದರೆ ತೂಕ ನಷ್ಟಕ್ಕೆ ಜೇನು ಹನಿ ನೀರು ನಿಷ್ಪ್ರಯೋಜಕ. ಏಕೆಂದರೆ ಅಸಲಿಗೆ ಜೇನು ಜಸ್ಟ್ ಸಕ್ಕರೆ ಪದಾರ್ಥ ಅಷ್ಟೇ! ಸಕ್ಕರೆ ಪದಾರ್ಥ ನೈಸರ್ಗಿಕವಾಗಿಯೇ ಆದರೂ ದೇಹಕ್ಕೆ ಒಳ್ಳೆಯದಲ್ಲ ಎಂದು ನಿಸ್ಸಂಶಯವಾಗಿ ಹೇಳಬಹುದು.
ಆರೋಗ್ಯ ಕಾಪಾಡಿಕೊಳ್ಳಲು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಏನಾದರೊಂದು ಕಷಾಯ ಕುಡಿಯುವ ಪರಿಪಾಠ ಹೊಂದಿದ್ದೀರಾ? ಅದರಲ್ಲೂ ಮುಖ್ಯವಾಗಿ ಉಗುರು ಬೆಚ್ಚಗಿನ ನೀರಿನಲ್ಲಿ ಜೇನು ತುಪ್ಪ ಸೇರಿಸಿಕೊಂಡು ಕುಡಿಯುತ್ತಿದ್ದೀರಾ? ಒಂದು ನಿಮಿಷ ಇರಿ. ಮೊದಲು ಈ ಲೇಖನ ಸಂಪೂರ್ಣವಾಗಿ ಓದಿ ನೋಡಿ. ತೂಕ ಇಳಿಸಿಕೊಳ್ಳುವ ಹಪಾಹಪಿಯಲ್ಲಿ ಅರ್ಧ ಲೋಟ ಬಿಸಿ ನೀರಿಗೆ ಒಂದಿಷ್ಟು ಜೇಣು ಸೇರಿಸಿಕೊಂಡು ಕುಡಿದುಬಿಟ್ಟರೆ ದೇಹದ ತೂಕ ತನ್ನಷ್ಟಕ್ಕೆ ತಾನೇ ಕರಗಿಬಿಡುತ್ತದೆ ಎಂದು ಅನೇಕ ಮಂದಿ ಹೇಳುತ್ತಾರೆ. ಆದರೆ ಅದು ಸರ್ವತಾ ಸರಿಯಲ್ಲ.
ಹಾಗಾದರೆ ಸತ್ಯವೇನು? ಮಿಥ್ಯವೇನು? ವಾಸ್ತವವೇನು? ಅಸಲಿಗೆ ಈ ಜೇನುತುಪ್ಪದ ಮಹಿಮೆ ಏನು ಎಂದರೆ… ಒಂದೇ ಉಸಿರಿನಲ್ಲಿ ತೂಕ ನಷ್ಟಕ್ಕೆ ಜೇನು ಹನಿ ನೀರು ನಿಷ್ಪ್ರಯೋಜಕ ಎನ್ನಬಹುದು. ಏಕೆಂದರೆ ಅಸಲಿಗೆ ಜೇನು ಜಸ್ಟ್ ಸಕ್ಕರೆ ಪದಾರ್ಥ ಅಷ್ಟೇ! ಸಕ್ಕರೆ ಪದಾರ್ಥ ನೈಸರ್ಗಿಕವಾಗಿಯೇ ಆದರೂ ದೇಹಕ್ಕೆ ಒಳ್ಳೆಯದಲ್ಲ ಎಂದು ನಿಸ್ಸಂಶಯವಾಗಿ ಹೇಳಬಹುದು. ಅದರಲ್ಲೂ ಮಾರುಕಟ್ಟೆಗಳಲ್ಲಿ ಈಗ ಸಿಗುವ ಜೇನು… ಶುಗರ್ ಸಿರಪ್ ಅಷ್ಟೇ! ಇಲ್ಲಿ ಒಂದು ಮಾತು ಹೇಳಬೇಕು. ಪರಿಶುದ್ಧವಾದ ಮತ್ತು ಅತ್ಯಧಿಕ ಔಷದೀಯ ಗುಣವಿರುವ ಜೇನು ಯಾವುದಪಾ ಅಂದರೆ ಅದು ಶ್ರೀಗಂಧದ ಮರಗಳ ಹೂವಿನ ಮಕರಂದದಿಂದ ಜೇನುನೊಣಗಳು ಉತ್ಪತ್ತಿಸುವ ಅಪ್ಪಟ ಜೇನು. ಇದು ತುಂಬಾ ಕಾಸ್ಟ್ಲೀ ಸಹ.
ಜೇನುತುಪ್ಪ ಕೇವಲ ಸಕ್ಕರೆಯಷ್ಟೆ, ಅದರಲ್ಲೂ ಮಾರುಕಟ್ಟೆಯಲ್ಲಿ ಸಿಗುವ ಜೇನು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ! ಹೇಗೆ?
Honey Water: ಜೇನುತುಪ್ಪ ಕುರಿತಾಗಿ ಒಂದು ಚಮಚದಷ್ಟು ಸತ್ಯಗಳನ್ನು ಲೆಕ್ಕಾಚಾರದೊಂದಿಗೆ ಚರ್ಚಿಸೋಣ. ಕ್ಯಾಲೋರಿಗಳು ಮತ್ತು ಸಕ್ಕರೆ ಹೊರತುಪಡಿಸಿ ಯಾವುದೇ ಪೋಷಕಾಂಶವನ್ನು ಹೊಂದಿಲ್ಲ ಎಂದು ನೀವು ನೋಡುತ್ತೀರಿ. ಒಂದು ಚಮಚ ಜೇನುತುಪ್ಪವು ಸುಮಾರು 6 ಗ್ರಾಂ ಸಕ್ಕರೆ ಮತ್ತು 21 ಕ್ಯಾಲೋರಿಗಳನ್ನು ಹೊಂದಿರುತ್ತದೆ ಅಷ್ಟೇ. ಯಾವುದೆ ಸ್ವರೂಪದ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಇನ್ನು ಒಂದು ಟೀ ಸ್ಪೂನ್ ಸಕ್ಕರೆಯಲ್ಲಿ 17 ಗ್ರಾಂ ಸಕ್ಕರೆ ಪದಾರ್ಥ ಮತ್ತು 64 ಕ್ಯಾಲೋರಿಗಳು ಇರುತ್ತವೆ. ಈ ಸಕ್ಕರೆ ಅಂಶ ದೇಹದ ತೂಕ ಹೆಚ್ಚಾಗಲು ಮಾತ್ರ ಕಾರಣವಾಗುತ್ತದೆ, ದೇಹ ತೂಕ ಕಡಿಮೆಯಾಗಲು ಅಲ್ಲ! ಹಾಗಾದರೆ, ಜೇನುತುಪ್ಪವನ್ನು ತೆಗೆದುಕೊಳ್ಳುವುದರಿಂದ ಪ್ರಯೋಜನವೇನು ಅಲ್ಲವಾ?
ಇನ್ನು ಆಯುರ್ವೇದದ ಪ್ರಕಾರ ಬಿಸಿ ಮಾಡಿದ ಜೇನುತುಪ್ಪವು ಸ್ಲೋ ಪಾಯ್ಸನ್ ಆಗಿ ಕೆಲಸ ಮಾಡುತ್ತದೆ. ಅದು ದೇಹದಲ್ಲಿ ಅಮಾ ಎಂಬ ವಿಷಾಂಶವನ್ನು (ama toxicity) ಹರಡುತ್ತದೆ. ಇದು ಅನೇಕ ರೋಗರುಜಿನಗಳಿಗೆ ಕಾರಣವಾಗುತ್ತದೆ.
ಮಧುಮೇಹಿಗಳಿಗೆ ಜೇನುತುಪ್ಪ ಅಪಾಯಕಾರಿ ಹೇಗೆ?:
ಜೇನುತುಪ್ಪವು ಸಕ್ಕರೆಯ ಮತ್ತೊಂದು ರೂಪವಾಗಿದೆ. ಇದು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ (glycemic index GI) ಹೊಂದಿದೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ತೀವ್ರವಾಗಿ ಹೆಚ್ಚಿಸಬಿಡುತ್ತದೆ. ಇಲ್ಲಿ ದಾಖಲಿಸಬೇಕಾದ ಸಂಗತಿಯೆಂದರೆ ಜೇನುತುಪ್ಪದ GI 58 ಅದೇ ಸಕ್ಕರೆಯ GI 60 ರಷ್ಟಿದೆ. ಈಗ ನೀವು ಯೋಚಿಸುತ್ತಿರಬೇಕು ಮೇಲೆ ಹೇಳಿದ್ದರಲ್ಲಿ ಸತ್ಯಾಂಶ ಎಷ್ಟಿದೆ ಅಂತಾ! ಬನ್ನೀ ಜೀರಿಗೆ ನೀರಿನ ಬಗ್ಗೆಯೂ ಒಂದಷ್ಟು ತುಲನಾತ್ಮಕ ವಿವರಣೆ ನೋಡೋಣ. ತೂಕ ನಷ್ಟಕ್ಕೆ ಜೀರಿಗೆ ನೀರು ಏಕೆ ಒಳ್ಳೆಯದು? ಎಂಬುದನ್ನೂ ಲೆಕ್ಕ ಹಾಕಿ ನೋಡೋಣ…
Jeera Water ಒಂದು ಚಮಚ ಜೀರಿಗೆ ನೀರು ಏನು ಮಾಡಬಲ್ಲದು?
ಜೀರಿಗೆ ನೀರಿಗೆ ಜೈ ಜೈ ಅನ್ನಿ… ಒಂದು ಚಮಚ ಜೀರಿಗೆ ನೀರು ಬಹುತೇಕ ಶೂನ್ಯದಷ್ಟು ಸಕ್ಕರೆ ಅಂಶ ಮತ್ತು ಕೇವಲ 8 ಕ್ಯಾಲೋರಿಗಳನ್ನು ಹೊಂದಿರುತ್ತದೆ. ತೂಕ ನಷ್ಟಕ್ಕೆ ಜೀರಿಗೆ ನೀರು ಅತ್ಯುತ್ತಮವಾಗಿದೆ. ಅಧ್ಯಯನದ ಪ್ರಕಾರ, ಜೀರಿಗೆ ತೂಕ ಇಳಿಸಲು ಸಹಾಯ ಮಾಡುತ್ತದೆ. ಹೊಟ್ಟೆಯ ಗಾತ್ರ/ಉಬ್ಬರವನ್ನು ಕಡಿಮೆ ಮಾಡುತ್ತದೆ. ಇದು ಕರುಳಿನಲ್ಲಿ ಕಿಣ್ವಗಳನ್ನು ಸ್ರವಿಸುವ ಮೂಲಕ ಸಕ್ಕರೆ, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳ ವಿಭಜನೆಗೆ ಸಹಾಯ ಮಾಡುತ್ತದೆ.
ಇನ್ನು, ಆರೋಗ್ಯಕರ ಗಟ್ (gut) ಪೋಷಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಜೀರ್ಣಕ್ರಿಯೆ ಮಟ್ಟವನ್ನು ಮತ್ತಷ್ಟು ಸುಧಾರಿಸುತ್ತದೆ. ತೂಕ ಹೆಚ್ಚಳಕ್ಕೆ ಕಾರಣವಾಗುವ ಉಬ್ಬುವಿಕೆಯನ್ನು ಕ್ಷಣಾರ್ಧದಲ್ಲಿ ಕುಗ್ಗಿಸುತ್ತದೆ. ನಿಮ್ಮನ್ನು ಬೆರಗುಗೊಳಿಸುವಂತೆ ಜೀರಿಗೆ ನೀರಿನ ಪ್ರಯೋಜನಗಳು ಇನ್ನೂ ಹಲವಾರು ಇವೆ.
1. ತೂಕ ನಷ್ಟವನ್ನು ಉತ್ತೇಜಿಸುತ್ತದೆ 2. ಕ್ಯಾನ್ಸರ್ ಅನ್ನು ತಡೆಯುತ್ತದೆ 3. ಅತಿಸಾರಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ 4. ಜೀರಾ ಸ್ಮರಣಶಕ್ತಿಯನ್ನು ತೀಕ್ಷ್ಣಗೊಳಿಸುತ್ತದೆ 5. ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ 6. ನಿಮ್ಮ ಯಕೃತ್ತನ್ನು ರಕ್ಷಿಸುತ್ತದೆ 7. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 8. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. 9. ಜೀರ್ಣಕ್ರಿಯೆಗೆ ಅತ್ಯುತ್ತಮ 10. ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ. ಆರೋಗ್ಯ ಕಾಪಾಡಿಕೊಳ್ಳಲು ಇದಕ್ಕಿಂತ ಇನ್ನೇನು ಬೇಕು, ಅಲ್ವಾ?