ನಿಮ್ಮ ನೆಚ್ಚಿನ ಐಸ್ಕ್ರೀಂ, ತಂಪಾದ ಪಾನೀಯಗಳನ್ನು ಸೇವಿಸಿದ ತಕ್ಷಣ ಹಲ್ಲು ನೋವು ಶುರುವಾಗುತ್ತದೆ. ಅದು ಹಾಗಿರಲಿ ಕೆಲವೊಮ್ಮೆ ಸಿಹಿ, ಹುಳಿ ಪದಾರ್ಥಗಳನ್ನು ಸೇವಿಸಿದಾಗಲೂ ಸೆನ್ಸಿಟಿವಿಟಿ ಕಾಡುತ್ತದೆ. ನಿಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ಪಂಚ ಸೂತ್ರಗಳು
ನಿಮ್ಮ ಹಲ್ಲುಗಳು ಸದಾ ಸ್ವಚ್ಛವಾಗಿರಲಿ
ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸ್ವಚ್ಛತೆ ಬಹಳ ಮುಖ್ಯವಾದ ಅಂಶ. ನಿತ್ಯ 2 ಬಾರಿ ಹಲ್ಲುಗಳನ್ನು ಉಜ್ಜುವ ಅಭ್ಯಾಸವನ್ನು ಮಾಡಿಕೊಳ್ಳಿ. ನಿಮ್ಮ ಆರೋಗ್ಯದ ಸುಧಾರಣೆಗಾಗಿ ಇದು ಸಹಕಾರಿಯಾಗಲಿದೆ.ಹಲ್ಲುಗಳು ಶುಚಿಯಾಗಿ ಇದ್ದರೆ ವಸಡಿನ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ.
ಉಗುರು ಕಚ್ಚುವ ಅಭ್ಯಾಸವಿದ್ದರೆ ಬಿಟ್ಟುಬಿಡಿ
ಬಹಳಷ್ಟು ಮಂದಿಗೆ ಒತ್ತಡ ಹೆಚ್ಚಾದರೆ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಉಗುರು ಕಚ್ಚುವ ಅಭ್ಯಾಸದಿಂದ ಬಾಯಿಯ ಆರೋಗ್ಯ ಹಾಳಾಗುತ್ತದೆ.
ಗಟ್ಟಿಯಾದ ಪದಾರ್ಥಗಳ ಸೇವನೆ ಬೇಡ
ಬಾಟಲಿಗಳ ಮುಚ್ಚಳವನ್ನು ಹಲ್ಲಿನಿಂದ ತೆಗೆಯುವುದು, ಗಟ್ಟಿಯಾದ ವಸ್ತುಗಳನ್ನು ಬಾಯಿಂದ ಕಚ್ಚುವುದು, ಹಲ್ಲಿಗೆ ಬಹಳ ಹಾನಿಕರವಾಗಿದೆ.
ಹುಳಿ ಪದಾರ್ಥಗಳ ಸೇವನೆ ಬೇಡ
ಅತಿಯಾಗಿ ಹುಳಿ ಪದಾರ್ಥಗಳನ್ನು ಸೇವಿಸುವುದು, ನಿಂಬೆಹಣ್ಣಿನ ಶರಬತ್ತು ನೇರ ಕುಡಿಯುವುದರಿಂದ ನಿಂಬೆ ಹಣ್ಣಿನಲ್ಲಿರುವ ಆಸಿಡ್ ಅಂಶ ನಿಮ್ಮ ಹಲ್ಲುಗಳ ಬಣ್ಣವನ್ನು ಬದಲಾಯಿಸುತ್ತದೆ.
ಐಸ್ ಕ್ರೀಂ ಸೇವನೆ ಕಡಿಮೆ ಮಾಡಿ
ಐಸ್ಕ್ರೀಂ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಇಂತಹ ತಂಪಾದ ಆಹಾರ ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಹಾಗೂ ಹಲ್ಲುಗಳ ನರಗಳಿಗೆ ಹಾನಿಯಾಗಬಹುದು.