Cough Home Remedies: ಕೆಮ್ಮು ಶಮನಗೊಳಿಸಲು ಈ ಮನೆಮದ್ದು ಪ್ರಯತ್ನಿಸಿ
ಸಾಂಪ್ರದಾಯಿಕವಾಗಿ ಗಿಡಮೂಲಿಕೆಗಳಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಅದರಂತೆಯೇ ಮೂಲೇತಿ(Liquorice) ಮತ್ತು ಸೋಂಪು ಕಾಳು (Fennel Seed) ಬಳಸಿ ಕೆಮ್ಮಿಗೆ ಚಿಕಿತ್ಸೆ ನೀಡಬಹುದು ಎಂದು ಪೌಷ್ಟಿಕ ತಜ್ಞರಾದ ಲೋಹಿತ್ ಬಾತ್ರಾ ಹೇಳುತ್ತಾರೆ.
ಚಳಿಗಾಲದಲ್ಲಿ ಕೆಮ್ಮು, ನೆಗಡಿ ಪ್ರಾರಂಭವಾದರೆ ಸಾಕು. ಅದು ಕಡಿಮೆಯಾಗಲು ಸಾಕಷ್ಟು ದಿನ ತೆಗೆದುಕೊಳ್ಳುತ್ತದೆ. ಅತಿಯಾದ ಕೆಮ್ಮು ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಅಡ್ಡಿಯಾಗಿವುದು ಮಾತ್ರವಲ್ಲದೇ, ಅತಿಯಾಗಿ ಕೆಮ್ಮಿ ಗಂಟಲು ನೋವು, ಎದೆ ನೋವು ಉಂಟಾಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಸರಿಯಾದ ಆಹಾರ ಕ್ರಮ ರೂಢಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಕೆಮ್ಮು ಪ್ರಾರಂಭವಾದರೆ ಸಾಕು, ಕಡಿಮೆಯಾಗುವುದೇ ಇಲ್ಲ ಎನ್ನುವವರಿಗೆ ಪೌಷ್ಟಿಕ ತಜ್ಞರಾದ ಲೋಹಿತ್ ಬಾತ್ರಾರವರು ಗಿಡ ಮೂಲಿಕೆಯೊಂದರ ಪ್ರಯೋಜನಗಳ ಕುರಿತು ತಿಳಿಸಿಕೊಟ್ಟಿದ್ದಾರೆ.
ಸಾಂಪ್ರದಾಯಿಕವಾಗಿ ಗಿಡಮೂಲಿಕೆಗಳಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಅದರಂತೆಯೇ ಮೂಲೇತಿ(Liquorice) ಮತ್ತು ಸೋಂಪು ಕಾಳು (Fennel Seed) ಬಳಸಿ ಕೆಮ್ಮಿಗೆ ಚಿಕಿತ್ಸೆ ನೀಡಬಹುದು ಎಂದು ಲೋಹಿತ್ ಬಾತ್ರಾ ಹೇಳುತ್ತಾರೆ. ಕೆಮ್ಮು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು, ಇದು ನಿಮ್ಮಲ್ಲಿ ಕೆಲವರಿಗೆ ದಿನಗಳು ಮತ್ತು ವಾರಗಳವರೆಗೆ ಇರುತ್ತದೆ. ಹವಾಮಾನದಲ್ಲಿ ಬದಲಾವಣೆಯಾದಾಗ, ಸಮಸ್ಯೆ ಹೆಚ್ಚು ಉಲ್ಬಣಗೊಳ್ಳುತ್ತದೆ. ನೀವು ದಿನವಿಡೀ ಕೆಮ್ಮಿದಾಗ, ಅದು ನಿಮಗೆ ಮಾತ್ರವಲ್ಲದೆ ನಿಮ್ಮ ಸುತ್ತಮುತ್ತಲಿನವರಿಗೂ ಅಹಿತಕರವಾಗಿರುತ್ತದೆ. ಕೆಮ್ಮನ್ನು ನಿಭಾಯಿಸಲು ನೀವು ಮಾಡುವ ಮೊದಲ ಕೆಲಸವೆಂದರೆ ಕೆಮ್ಮಿನ ಸಿರಪ್ ಆದರೆ ಈ ಸಿರಪ್ಗಳನ್ನು ಅತಿಯಾಗಿ ತೆಗೆದುಕೊಳ್ಳುವುದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ನಿಮ್ಮ ಹಲ್ಲುಗಳ ಆರೋಗ್ಯಕ್ಕಾಗಿ ಈ ಅಭ್ಯಾಸವನ್ನು ರೂಢಿಸಿಕೊಳ್ಳಿ
ಮೂಲೇತಿಯನ್ನು ಕೆಮ್ಮು ಮತ್ತು ನೋಯುತ್ತಿರುವ ಗಂಟಲಿಗೆ ಹಳೆಯ ಮನೆಮದ್ದಾಗಿ ಬಳಕೆ ಮಾಡಲಾಗುತ್ತದೆ. ಇದು ವೈಜ್ಞಾನಿಕ ಪ್ರಯೋಜನ ಸಹ ನೀಡುತ್ತದೆ. ಮೂಲೇತಿ ಆಯುರ್ವೇದ ವೈದ್ಯಕೀಯ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ಹಲವು ಪ್ರಯೋಜನ ನೀಡುವ ಮೂಲಕ ಆರೋಗ್ಯಕರ ಆಯ್ಕೆ ಆಗಿದೆ. ಈಗ ಮೂಲೇತಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ನೀವಿದನ್ನು ಹಾಲಿನಲ್ಲಿ ಅಥವಾ ಜೇನುತುಪ್ಪದಲ್ಲಿ ಬೆರೆಸಿ ಸೇವಿಸಬಹುದಾಗಿದೆ. ಮುಲೇತಿ ಅಥವಾ ಲೈಕೋರೈಸ್ ಶಕ್ತಿಯುತವಾದ ಆಂಟಿಬಯೋಟಿಕ್, ಉರಿಯೂತ ನಿವಾರಕ ಮತ್ತು ಆಸ್ತಮಾ ವಿರೋಧಿ ಗುಣಗಳನ್ನು ಹೊಂದಿದೆ. ಸೋಂಪು ಕಾಳಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಆರೋಗ್ಯದ ಮೇಲೆ ಸಾಕಷ್ಟು ಪ್ರಯೋಜನಗಳಿವೆ.
ಸೋಂಪು ಕಾಳಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಆರೋಗ್ಯದ ಮೇಲೆ ಸಾಕಷ್ಟು ಪ್ರಯೋಜನಗಳಿವೆ. ಸೋಂಪು ಕಾಳಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ಗಳು ಸಮೃದ್ಧವಾಗಿದೆ. ಆದ್ದರಿಂದ ನಿಮ್ಮ ಆಹಾರ ಕ್ರಮದಲ್ಲಿ ಸೋಂಪು ಕಾಳನ್ನು ಬಳಸುವುದರಿಂದ ಚಳಿಗಾಲದಲ್ಲಿ ಹರಡುವ ಕೆಮ್ಮು, ಶೀತವನ್ನು ಶಮನಗೊಳಿಸಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ :
Published On - 12:54 pm, Sat, 11 February 23