Tulsi Water Benefits: ಮುಂಜಾನೆ ತುಳಸಿ ನೀರು ಕುಡಿಯುವುದರಿಂದ ಉಪಯೋಗಗಳು ಹಲವು

| Updated By: ಸುಷ್ಮಾ ಚಕ್ರೆ

Updated on: Dec 26, 2022 | 7:06 AM

ತುಳಸಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಶೀತ, ಒತ್ತಡ ಮತ್ತು ಆಮ್ಲೀಯತೆ ಕಡಿಮೆಯಾಗುತ್ತದೆ. ತುಳಸಿ ನೀರು ಕೆಮ್ಮು ಮತ್ತು ಉಸಿರಾಟದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

Tulsi Water Benefits: ಮುಂಜಾನೆ ತುಳಸಿ ನೀರು ಕುಡಿಯುವುದರಿಂದ ಉಪಯೋಗಗಳು ಹಲವು
ತುಳಸಿ ನೀರು
Image Credit source: News18
Follow us on

ಚಳಿಗಾಲ (Winter) ಶುರುವಾಗಿದೆ. ಚಳಿಯ ಜೊತೆಗೆ ಆಗಾಗ ಮಳೆಯೂ ಸುರಿಯುತ್ತಿರುವುದರಿಂದ ಈ ಸಮಯದಲ್ಲಿ ಕೆಮ್ಮು, ಶೀತ, ಕಫ ಮುಂತಾದ ಆರೋಗ್ಯ ಸಮಸ್ಯೆಗಳು ಸಾಮಾನ್ಯ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ತುಳಸಿ (Tulsi) ಗಿಡ ಇದ್ದೇ ಇರುತ್ತದೆ. ಹಿಂದೂಗಳು ದಿನವೂ ಬೆಳಗ್ಗೆ ತುಳಸಿ ಗಿಡಕ್ಕೆ ಪೂಜೆ ಸಲ್ಲಿಸುತ್ತಾರೆ. ಧಾರ್ಮಿಕ ನಂಬಿಕೆಗಳ ಹೊರತಾಗಿಯೂ ತುಳಸಿ ಎಲೆಗಳನ್ನು ಆಯುರ್ವೇದದಲ್ಲಿ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ.

ತುಳಸಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಶೀತ, ಒತ್ತಡ ಮತ್ತು ಆಮ್ಲೀಯತೆ ಕಡಿಮೆಯಾಗುತ್ತದೆ. ನಿಮ್ಮ ದಿನಚರಿಯಲ್ಲಿ ಹೊಸ ಆಯುರ್ವೇದ ಮತ್ತು ಆರೋಗ್ಯಕರ ಪದಾರ್ಥವನ್ನು ಸೇರಿಸಲು ನೀವು ಬಯಸಿದರೆ, ತುಳಸಿ ನೀರಿನಿಂದ ನಿಮ್ಮ ದಿನವನ್ನು ಪ್ರಾರಂಭಿಸಬಹುದು.

ತುಳಸಿ ನೀರು ಮಾಡುವುದು ಹೇಗೆ?:
ತುಳಸಿ ನೀರನ್ನು ತಯಾರಿಸುವುದು ಬಹಳ ಸುಲಭ. ಕೆಲವು ತಾಜಾ ತುಳಸಿ ಎಲೆಗಳನ್ನು 15 ನಿಮಿಷಗಳ ಕಾಲ ನೀರಿನಲ್ಲಿ ನಿಧಾನವಾದ ಶಾಖದಲ್ಲಿ ಕುದಿಸಿ. ಇದನ್ನು ಲೋಟದೊಳಗೆ ಹಾಕಿಟ್ಟುಕೊಂಡು, ಪ್ರತಿದಿನ ಬೆಳಿಗ್ಗೆ ಕುಡಿಯಿರಿ. ಆ ತುಳಸಿ ಎಲೆಗಳನ್ನು ಎಸೆಯಬೇಡಿ. ನೀವು ಅಡುಗೆ ಮಾಡುವ ಯಾವುದೇ ಊಟದಲ್ಲಿ ಇದನ್ನು ಬಳಸಬಹುದು. ಅಥವಾ ಬೇಯಿಸಿದ ಅನ್ನಕ್ಕೆ ಸೇರಿಸಿ ತಿನ್ನಲೂಬಹುದು.

ಇದನ್ನೂ ಓದಿ: Tulsi Benefits: ಹೃದಯ, ದೇಹ, ಮನಸ್ಸನ್ನು ಜೋಪಾನ ಮಾಡುತ್ತೆ ತುಳಸಿ, ಬಳಕೆ ಹೇಗೆ ತಿಳಿಯಿರಿ

ತುಳಸಿ ನೀರಿನ ಪ್ರಯೋಜನಗಳು:
– ತುಳಸಿ ನೀರನ್ನು ಕುಡಿಯುವುದರಿಂದ ಉಂಟಾಗುವ ದೊಡ್ಡ ಪ್ರಯೋಜನವೆಂದರೆ ಅದು ನಿಮ್ಮ ದೇಹ ಮತ್ತು ಅಂಗಗಳಲ್ಲಿರುವ ತ್ಯಾಜ್ಯ ಮತ್ತು ವಿಷವನ್ನು ತೊಡೆದುಹಾಕುತ್ತದೆ.

– ತುಳಸಿ ನೀರು ಉತ್ತಮ ರೋಗನಿರೋಧಕ ಬೂಸ್ಟರ್ ಆಗಿದೆ. ವಿಶೇಷವಾಗಿ ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ಇದರ ಪ್ರಯೋಜನ ಹೆಚ್ಚು.

– ಇದು ಸಾಮಾನ್ಯ ಶೀತ ಮತ್ತು ಜ್ವರ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

– ತುಳಸಿ ನೀರು ಕೆಮ್ಮು ಮತ್ತು ಉಸಿರಾಟದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

– ಇದು ಒತ್ತಡ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

– ಇದು ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ.

– ಇದು ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

– ಇದು ಬಾಯಿ ಹುಣ್ಣುಗಳನ್ನು ದೂರ ಇಡುತ್ತದೆ.

ಇದನ್ನೂ ಓದಿ: Winter Tips: ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕಾ ಕ್ರಮ ಅನುಸರಿಸಿ

-ತುಳಸಿ ಮೊಡವೆ ಮತ್ತು ಮೊಡವೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ತುಳಸಿ ಗಿಡಗಳೊಂದಿಗೆ ಪೇಸ್ಟ್ ಮಾಡಿ ಮತ್ತು ಅದನ್ನು ಪ್ರತಿದಿನ ಹೆಚ್ಚಿದರೆ ಮೊಡವೆ ಕಲೆ ಮಾಯವಾಗುತ್ತದೆ.

– ತುಳಸಿ ಚರ್ಮದ ಕಿರಿಕಿರಿ ಮತ್ತು ದದ್ದುಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ಇನ್ನಷ್ಟು ಆರೋಗ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ