ಅಜೀರ್ಣದ ಸಮಸ್ಯೆಗೆ ಅರಿಶಿನ ಮದ್ದು; ಈ ನೈಸರ್ಗಿಕ ಔಷಧಿ ಬಗ್ಗೆ ನಿಮಗೆಷ್ಟು ಗೊತ್ತು?

ಆಗ್ನೇಯ ಏಷ್ಯಾ ಭಾಗದಲ್ಲಿ ಅಜೀರ್ಣದ ಚಿಕಿತ್ಸೆ ಸೇರಿದಂತೆ ಔಷಧೀಯ ಪರಿಹಾರವಾಗಿ ಅರಿಶಿನ ಹಲವು ಶತಮಾನಗಳಿಂದ ಬಳಸಲ್ಪಟ್ಟಿದೆ.

ಅಜೀರ್ಣದ ಸಮಸ್ಯೆಗೆ ಅರಿಶಿನ ಮದ್ದು; ಈ ನೈಸರ್ಗಿಕ ಔಷಧಿ ಬಗ್ಗೆ ನಿಮಗೆಷ್ಟು ಗೊತ್ತು?
ಅರಿಶಿನ
Image Credit source: iStock

Updated on: Sep 13, 2023 | 4:18 PM

ಅರಿಶಿನದಲ್ಲಿ ಕಂಡುಬರುವ ನೈಸರ್ಗಿಕ ಸಂಯುಕ್ತವನ್ನು ಹೊಟ್ಟೆಯ ಆಮ್ಲವನ್ನು ನಿಗ್ರಹಿಸಲು ಬಳಸಲಾಗುತ್ತದೆ. ಅಜೀರ್ಣದ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಅರಿಶಿನವನ್ನು ಬಳಸಲಾಗುತ್ತದೆ ಎಂದು ಬಿಎಂಜೆ ಎವಿಡೆನ್ಸ್-ಬೇಸ್ಡ್ ಮೆಡಿಸಿನ್ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನವು ತಿಳಿಸಿದೆ. ಕರ್ಕುಮಾ ಲಾಂಗಾ ಸಸ್ಯದ ಮೂಲದಿಂದ ಬಂದಿರುವ ಅರಿಶಿನವು ಕರ್ಕ್ಯುಮಿನ್ ಎಂಬ ನೈಸರ್ಗಿಕವಾಗಿ ಸಕ್ರಿಯವಾಗಿರುವ ಸಂಯುಕ್ತವನ್ನು ಹೊಂದಿದೆ. ಇದು ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಆಗ್ನೇಯ ಏಷ್ಯಾ ಭಾಗದಲ್ಲಿ ಅಜೀರ್ಣದ ಚಿಕಿತ್ಸೆ ಸೇರಿದಂತೆ ಔಷಧೀಯ ಪರಿಹಾರವಾಗಿ ಅರಿಶಿನ ಹಲವು ಶತಮಾನಗಳಿಂದ ಬಳಸಲ್ಪಟ್ಟಿದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ ಎನ್ನಲಾಗಿದೆ.

ಅರಿಶಿನದಲ್ಲಿ ಫೈಬರ್, ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್ ಕೆ, ಪೊಟ್ಯಾಸಿಯಂ, ಪ್ರೋಟೀನ್, ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಕಂಡುಬರುತ್ತವೆ. ಗಾಯಗಾಳಾಗಿದ್ದರೆ ಆ ಜಾಗಕ್ಕೆ ಅರಿಶಿನವನ್ನು ಹಚ್ಚುವುದರಿಂದ ರಕ್ತ ಸೋರುವಿಕೆಯನ್ನು ನಿಯಂತ್ರಿಸಬಹುದು. ಅರಿಶಿನ ಆ್ಯಂಟಿಸೆಪ್ಟಿಕ್ ಆಗಿರುವುದರಿಂದ ದಿನನಿತ್ಯ ಅಡುಗೆಯಲ್ಲಿ ಬಳಸುವುದರಿಂದ ದೇಹದ ಆರೋಗ್ಯವನ್ನು ಕಾಪಾಡುತ್ತದೆ. ನಂಜು, ಅಲರ್ಜಿ ಮತ್ತಿತರ ಸಮಸ್ಯೆಯಾಗದಂತೆ ತಡೆಯುತ್ತದೆ.

ಇದನ್ನೂ ಓದಿ: ಅಜೀರ್ಣವೆಂದು ತಪ್ಪು ತಿಳಿದು ನಿರ್ಲಕ್ಷಿಸ ಬೇಡಿ; ಯಕೃತ್ತಿನ ಕ್ಯಾನ್ಸರ್ ರೋಗಲಕ್ಷಣಗಳು

ಬೆಳಗ್ಗೆ ಎದ್ದ ಕೂಡಲೆ ಅರಿಶಿನದ ನೀರು ಕುಡಿಯುವುದರಿಂದ ದೇಹದಲ್ಲಿನ ರಕ್ತವನ್ನು ಶುದ್ಧೀಕರಣಗೊಳಿಸಿ, ರಕ್ತ ಸಂಚಲನವನ್ನು ಸುಲಭಗೊಳಿಸುತ್ತದೆ. ಮೆದುಳಿನ ಕಾರ್ಯಾಚರಣೆಯನ್ನು ಕೂಡ ಸರಾಗಗೊಳಿಸುತ್ತದೆ. ಶೀತವಾದಾಗ ಬಿಸಿ ಹಾಲಿನಲ್ಲಿ ಅರಿಶಿನ ಸೇರಿಸಿ ಕುಡಿದರೆ ಸ್ವಲ್ಪ ಮಟ್ಟಿಗೆ ಕೆಮ್ಮು ನಿಯಂತ್ರಣಕ್ಕೆ ಬರುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ