
ಹಣ್ಣುಗಳ ರಾಜ ಮಾವಿನಹಣ್ಣು (Mango). ಇದನ್ನು ತಿನ್ನುವುದಕ್ಕೆ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಮಕ್ಕಳಿಂದ ವಯಸ್ಕರ ವರೆಗೆ ಎಲ್ಲರಿಗೂ ಇಷ್ಟವಾಗುವ ಹಣ್ಣುಗಳಲ್ಲಿ ಇದಕ್ಕೆ ಅಗ್ರಸ್ಥಾನವಿದೆ. ಮಾವಿನ ಹಣ್ಣುಗಳು ರುಚಿ ನೀಡುವುದು ಮಾತ್ರವಲ್ಲ ಇದರ ಸೇವನೆಯಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು (Health benefits) ಪಡೆದುಕೊಳ್ಳಬಹುದು. ಆದರೆ ನಿಮಗೆ ಗೊತ್ತಿರಲಿ, ಮಾವಿನ ಹಣ್ಣು ಮಾತ್ರ ನಾವು ಬಿಸಾಡುವ ಅದರ ಬೀಜ ಅಥವಾ ಗೊರಟೆಯೂ (mango seed benefits) ಸಹ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿವೆ. ಅದಕ್ಕಾಗಿಯೇ ಆಯುರ್ವೇದ ತಜ್ಞರು ಮಾವಿನ ಕಾಯಿ ಅಥವಾ ಹಣ್ಣಿನ ಬೀಜಗಳನ್ನು ಆರೋಗ್ಯಕ್ಕೆ ಪರಿಣಾಮಕಾರಿ ಗಿಡಮೂಲಿಕೆ ಎಂದು ಪರಿಗಣಿಸುತ್ತಾರೆ. ಹಾಗಾದರೆ ಈ ಬೀಜಗಳು ಯಾವ ರೀತಿ ಉಪಯೋಗಕ್ಕೆ ಬರುತ್ತದೆ? ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳಿ.
ಮಾವಿನ ಹಣ್ಣಿನೊಳಗಿರುವ ಗೊರಟೆ ಅಥವಾ ಅದರ ಬೀಜವನ್ನು ಸಾಮಾನ್ಯವಾಗಿ ನಾವು ಎಸೆಯುತ್ತೇವೆ. ಆದರೆ ಇದರಿಂದ ತಯಾರಾಗುವ ಪುಡಿಯಲ್ಲಿ ಅದೆಷ್ಟೋ ಕಾಯಿಲೆಗಳನ್ನು ವಾಸಿ ಮಾಡುವ ಶಕ್ತಿ ಇದೆ ಎಂದರೆ ನೀವು ನಂಬಲೇ ಬೇಕು. ಅದಕ್ಕಾಗಿಯೇ ಇವುಗಳನ್ನು ಕಸದ ಬುಟ್ಟಿಗೆ ಬಿಸಾಡುವ ಮೊದಲು ಅವುಗಳ ಉಪಯೋಗವನ್ನು ತಿಳಿದುಕೊಳ್ಳಬೇಕಾಗುತ್ತದೆ. ಹಾಗಾದರೆ ಇದರಿಂದ ಸಿಗುವ ಪ್ರಯೋಜನಗಳೇನು? ಯಾವ ರೀತಿಯ ಆರೋಗ್ಯ ಸಮಸ್ಯೆಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.
ಇದನ್ನೂ ಓದಿ: ನೀವು ಮಾವು ಪ್ರಿಯರೇ? ಹಾಗದರೆ ಈ ರೆಸಿಪಿ ಟ್ರೈ ಮಾಡಿ, ಒಂದು ವರ್ಷ ಇಟ್ಟರು ಏನು ಆಗಲ್ಲ!
ಮಾವಿನ ಬೀಜಗಳನ್ನು ಸರಿಯಾಗಿ ಬಿಸಿಲಿನಲ್ಲಿ ಒಣಗಿಸಬೇಕು. ನಂತರ, ಅವುಗಳನ್ನು ಮಿಕ್ಸರ್ ಗೆ ಹಾಕಿ ಪುಡಿ ಮಾಡಿ ಇಟ್ಟುಕೊಳ್ಳಬಹುದು. ಬಳಿಕ ಈ ಪುಡಿಯನ್ನು ಚಹಾದೊಂದಿಗೆ ಬೆರೆಸಿ ಪ್ರತಿದಿನ ಸೇವಿಸಬಹುದು. ಅಥವಾ ಇದನ್ನು ಸ್ಮೂಥಿ ಮತ್ತು ಜ್ಯೂಸ್‌ಗಳಿಗೆ ಸೇರಿಸಬಹುದು. ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಜೊತೆಗೆ ದೀರ್ಘಕಾಲೀನ ಪ್ರಯೋಜನಗಳನ್ನು ಕೂಡ ನೀಡುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ