ಹೆಚ್ಚಿನ ಯೂರಿಕ್ ಆಮ್ಲದ ಕಾರಣದಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ. ಕೈ ಕಾಲುಗಳಲ್ಲಿ ಊತ, ನೋವು, ನಡೆಯಲು ತೊಂದರೆ ಇತ್ಯಾದಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ . ಈ ರೋಗದ ಹೆಚ್ಚಳಕ್ಕೆ ಹಲವು ಕಾರಣಗಳಿದ್ದರೂ, ಅದರ ಮುಖ್ಯ ಕಾರಣವೆಂದರೆ ಸರಿಯಾದ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳದಿರುವುದಾಗಿದೆ. ನಮ್ಮ ಅನಾರೋಗ್ಯಕರ ಆಹಾರ ಸೇವನೆ ಮತ್ತು ಜೀವನಶೈಲಿ ಇದಕ್ಕೆ ಮುಖ್ಯ ಕಾರಣವಾಗಿದೆ.
ಹಿಮ್ಮಡಿಗಳಲ್ಲಿ ಕೆಲವೊಮ್ಮೆ ತುಂಬಾ ನೋವುಂಟಾಗುವುದು. ನೆಲದ ಮೇಲೆ ಕಾಲಿಡಲು ಸಾಧ್ಯವಾಗದಿರುವುದು. ಅಲ್ಲದೆ, ಕಾಲ್ಬೆರಳಿನಲ್ಲಿ ವಿಪರೀತ ನೋವಾಗುವುದು, ಬೆರಳುಗಳು ನಡುಗುವುದು ಈ ರೀತಿಯ ಸಮಸ್ಯೆಗಳು ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದಾಗಿ ಕಂಡುಬರುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಇದು ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದಲ್ಲ. ಇದು ಹೆಚ್ಚಿದ ಯೂರಿಕ್ ಆಮ್ಲದ ಸಂಕೇತವಾಗಿದೆ. ಈ ರೀತಿ ಸಮಸ್ಯೆ ಇರುವವರು ಯಾವ ರೀತಿಯ ಆಹಾರ ಸೇವನೆ ಮಾಡಬೇಕು? ಇಲ್ಲಿದೆ ಮಾಹಿತಿ.
ಇತ್ತೀಚಿನ ದಿನಗಳಲ್ಲಿ ಮಧುಮೇಹ ಮತ್ತು ಕೊಲೆಸ್ಟ್ರಾಲ್ ನಂತೆ, ಯೂರಿಕ್ ಆಮ್ಲದ ಸಮಸ್ಯೆಗಳು ಹೆಚ್ಚು ಸಾಮಾನ್ಯವಾಗುತ್ತಿವೆ. ಇನ್ನು ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಾದರೆ ಅನೇಕರು ತಮ್ಮ ಆಹಾರದಲ್ಲಿ ದ್ವಿದಳ ಧಾನ್ಯಗಳು ಮತ್ತು ಟೊಮೆಟೊಗಳನ್ನು ಸೇವಿಸುವುದನ್ನು ನಿಲ್ಲಿಸುತ್ತಾರೆ. ವಾಸ್ತವವಾಗಿ, ಯೂರಿಕ್ ಆಮ್ಲ ಹೆಚ್ಚಾಗಿದ್ದರೆ ಕೆಲವು ಆಹಾರಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬಹುದು. ಸಾಮಾನ್ಯವಾಗಿ ಮಾಂಸ, ಆಲ್ಕೋಹಾಲ್ ಮತ್ತು ಫಾಸ್ಟ್ ಫುಡ್ ಸೇವಿಸಬಾರದು. ಇವುಗಳ ಹೊರತಾಗಿ ತಜ್ಞರು ನೀಡಿದ ಸಲಹೆಯ ಆಧಾರದ ಮೇಲೆ ಎಲ್ಲಾ ಆಹಾರಗಳನ್ನು ಸೇವನೆ ಮಾಡಬಹುದು.
ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಿಂದ ಹೆಚ್ಚುವರಿ ಯೂರಿಕ್ ಆಮ್ಲವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಸಿಟ್ರಸ್ ಹಣ್ಣಿನ ರಸ ಮತ್ತು ಬೆರ್ರಿಗಳನ್ನು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ದೊರೆಯುತ್ತದೆ. ಇದರಿಂದ, ನೀವು ಯೂರಿಕ್ ಆಮ್ಲದ ಸಮಸ್ಯೆಯನ್ನು ತ್ವರಿತವಾಗಿ ಕಡಿಮೆ ಮಾಡಿಕೊಳ್ಳಬಹುದು.
ಹೆಚ್ಚು ಹಾಲಿನ ಉತ್ಪನ್ನಗಳನ್ನು ಸೇವಿಸಿ. ‘ಡಬಲ್ ಟೋನ್ಡ್’ ಅಥವಾ ‘ಸ್ಕಿಮ್ಡ್’ ಹಾಲನ್ನು ಸೇವಿಸುವುದರಿಂದ ಯೂರಿಕ್ ಆಮ್ಲದ ಮಟ್ಟ ಕಡಿಮೆಯಾಗುತ್ತದೆ. ಈ ಹಾಲಿನಿಂದ ತಯಾರಿಸಿದ ಮೊಸರನ್ನು ತಿನ್ನಬಹುದು. ಮಜ್ಜಿಗೆ ಕೂಡ ಈ ಸಮಸ್ಯೆಯನ್ನು ನಿವಾರಿಸುತ್ತದೆ.
ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಧಿವಾತದ ನೋವನ್ನು ಕಡಿಮೆ ಮಾಡುತ್ತದೆ.
ಇವು ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಓಟ್ಸ್, ಹಸಿರು ತರಕಾರಿಗಳಲ್ಲಿ ಫೈಬರ್ ಅಂಶವಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: