AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IVY GOURD: ಮಧುಮೇಹ ರೋಗಿಗಳಿಗೆ ತೊಂಡೆಕಾಯಿ ಸೇವನೆ ಒಳ್ಳೆಯದೇ? ತಜ್ಞರು ಹೇಳುವುದೇನು?

ತೊಂಡೆಕಾಯಿ ಮರೆಗುಳಿತನವನ್ನು ತರುವುದಲ್ಲದೆ ಮಕ್ಕಳು ಇದರ ಸೇವನೆಯಿಂದ ಅಧ್ಯಯನದಲ್ಲಿ ಹಿಂದುಳಿಯುತ್ತಾರೆ ಎಂಬ ನಂಬಿಕೆ ಇದೆ. ಆದರೆ ತೊಂಡೆಕಾಯಿ ಪೋಷಕಾಂಶಗಳ ಭಂಡಾರವಾಗಿದೆ. ಇದು ನಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಹಾಗಾದರೆ ಈ ತರಕಾರಿ ಸೇವನೆ ಮಾಡುವುದರಿಂದ ಯಾವೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯಿರಿ.

IVY GOURD: ಮಧುಮೇಹ ರೋಗಿಗಳಿಗೆ ತೊಂಡೆಕಾಯಿ ಸೇವನೆ ಒಳ್ಳೆಯದೇ? ತಜ್ಞರು ಹೇಳುವುದೇನು?
IVY GOURD
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jun 05, 2024 | 5:58 PM

Share

ಬೇಸಿಗೆ ಕಾಲದಲ್ಲಿ ಮಾರುಕಟ್ಟೆಗೆ ಅನೇಕ ರೀತಿಯ ತರಕಾರಿಗಳು ಬರುತ್ತವೆ. ಇವುಗಳಲ್ಲಿ ತೊಂಡೆಕಾಯಿ ಕೂಡ ಒಂದು. ಆದರೆ ಅನೇಕರಿಗೆ ಈ ತರಕಾರಿ ಇಷ್ಟವಾಗುವುದಿಲ್ಲ. ಇದನ್ನು ನೋಡಿ ಮೂಗು ಮುರಿಯುವರೇ ಹೆಚ್ಚು. ಹಿಂದಿನಿಂದಲೂ, ಈ ತರಕಾರಿ ಮರೆಗುಳಿತನವನ್ನು ತರುವುದಲ್ಲದೆ ಮಕ್ಕಳು ಇದರ ಸೇವನೆಯಿಂದ ಅಧ್ಯಯನದಲ್ಲಿ ಹಿಂದುಳಿಯುತ್ತಾರೆ ಎಂಬ ನಂಬಿಕೆ ಇದೆ. ಆದರೆ ತೊಂಡೆಕಾಯಿ ಪೋಷಕಾಂಶಗಳ ಭಂಡಾರವಾಗಿದೆ. ಇದು ನಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಹಾಗಾದರೆ ಈ ತರಕಾರಿ ಸೇವನೆ ಮಾಡುವುದರಿಂದ ಯಾವೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯಿರಿ.

ತೂಕ ಕಡಿಮೆ ಮಾಡಲು ಸಹಕಾರಿ:

ಬೊಜ್ಜು ಮತ್ತು ತೂಕ ಹೆಚ್ಚಳವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ತಜ್ಞರು, ಈ ರೀತಿ ಸಮಸ್ಯೆಗಳಿಂದ ಮುಕ್ತಿ ಪಡೆದು, ತೂಕ ಕಡಿಮೆ ಮಾಡಲು ತೊಂಡೆಕಾಯಿ ಒಳ್ಳೆಯದು ಎನ್ನುತ್ತಾರೆ. ಏಕೆಂದರೆ ಇದರಲ್ಲಿ ಉತ್ತಮ ಪ್ರಮಾಣದ ಫೈಬರ್ ಇದ್ದು, ನಿಯಮಿತವಾಗಿ ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ಇದು ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಕಬ್ಬಿಣದ ಕೊರತೆಯು ಆಯಾಸಕ್ಕೆ ಕಾರಣಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ತೊಂಡೆಕಾಯಿಯಲ್ಲಿ ಉತ್ತಮ ಪ್ರಮಾಣದಲ್ಲಿ ಕಬ್ಬಿಣದ ಅಂಶ ಇರುವುದರಿಂದ ಇದು ಹಿಮೋಗ್ಲೋಬಿನ್ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅನೇಕ ರೋಗಗಳು ಮತ್ತು ಸೋಂಕುಗಳಿಂದ ನಿಮ್ಮನ್ನು ದೂರವಿಡುತ್ತದೆ.

ಇದನ್ನೂ ಓದಿ: ಬೆವರುವುದು ಆರೋಗ್ಯಕ್ಕೆ ಒಳ್ಳೆಯದು , ಯಾಕೆ ಗೊತ್ತಾ?

ಮಧುಮೇಹವನ್ನು ನಿಯಂತ್ರಿಸುತ್ತದೆ:

ಮಧುಮೇಹ ರೋಗಿಗಳಿಗೆ ತೊಂಡೆಕಾಯಿ ಸೇವನೆ ತುಂಬಾ ಪ್ರಯೋಜನಕಾರಿ. ಈ ತರಕಾರಿ ಹೈಪರ್ಗ್ಲೈಸೆಮಿಕ್ ವಿರೋಧಿ ಪರಿಣಾಮಗಳನ್ನು ಹೊಂದಿದೆ. ಇವು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶವು, ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈ ತರಕಾರಿಯನ್ನು ತಿನ್ನುವುದರಿಂದ ಹೊಟ್ಟೆ ಬೇಗನೆ ತುಂಬುತ್ತದೆ. ಇದರಿಂದ ಅತಿಯಾಗಿ ತಿನ್ನುವುದು ಕಡಿಮೆಯಾಗುತ್ತದೆ. ಜೊತೆಗೆ ಇದು ಮಲಬದ್ಧತೆ, ಗ್ಯಾಸ್, ಹೊಟ್ಟೆನೋವು, ಸೆಳೆತ, ಅತಿಸಾರದಂತಹ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: