ಆರೋಗ್ಯವೇ ಭಾಗ್ಯ ಎಂಬ ಮಾತು ಅಕ್ಷರಶಃ ನಿಜ. ಆದರೆ ಆರೋಗ್ಯ ಕಾಪಾಡಿಕೊಳ್ಳಲು ಸತತ ಪ್ರಯತ್ನ ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ನಮ್ಮ ಈಗೀನ ಜೀವನಶೈಲಿಯಲ್ಲಿ ದೇಹವನ್ನು ರೋಗಗಳಿಂದ ರಕ್ಷಿಸಿಕೊಳ್ಳುವುದು ಬಹಳ ಅನಿವಾರ್ಯವಾಗಿದೆ. ಹಾಗಾಗಿ ನಮ್ಮ ದಿನನಿತ್ಯದ ಆಹಾರ ಪದ್ದತಿಯಲ್ಲಿ ದೇಹಕ್ಕೆ ಅನೇಕ ರೀತಿಯ ಪೋಷಕಾಂಶಗಳನ್ನು ನೀಡಬೇಕಾಗುತ್ತದೆ. ಜೊತೆಗೆ ಅದರಲ್ಲಿ ಹೇರಳವಾದ ಜೀವಸತ್ವಗಳು, ಖನಿಜಗಳು ಮತ್ತು ಕ್ಯಾಲ್ಸಿಯಂ ಅನ್ನು ಒಳಗೊಂಡಿರಬೇಕು. ನಿಮಗೆ ತಿಳಿದಿರಬಹುದು, ಜೀವಸತ್ವಗಳು ಅತ್ಯಂತ ಪ್ರಮುಖ ಪೋಷಕಾಂಶಗಳಾಗಿವೆ, ಅವುಗಳ ಕೊರತೆಯು ಅನೇಕ ರೀತಿಯ ರೋಗಗಳಿಗೆ ಕಾರಣವಾಗಬಹುದು. ಅದರಲ್ಲಿಯೂ, ಇತರ ಜೀವಸತ್ವಗಳಿಗೆ ಹೋಲಿಸಿದರೆ ವಿಟಮಿನ್ ಬಿ 12 ಅತ್ಯಂತ ಪ್ರಮುಖ ಅಂಶವೆಂದು ಪರಿಗಣಿಸಲಾಗಿದೆ. ಹಾಗಾದರೆ ಈ ವಿಟಮಿನ್ ಕೊರತೆಯಾದರೆ ಯಾವ ರೀತಿಯ ಸಮಸ್ಯೆಗಳು ಕಂಡು ಬರುತ್ತದೆ? ಅದನ್ನು ತಡೆಯಲು ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿಟಮಿನ್ ಬಿ 12 ಪೋಷಕಾಂಶವನ್ನು ‘ಕೋಬಾಲಾಮೈನ್’ ಎಂದೂ ಕೂಡ ಕರೆಯಲಾಗುತ್ತದೆ. ಸಾಮಾನ್ಯವಾಗಿ ವಿಟಮಿನ್ ಬಿ 12 ಕೊರತೆಯು ದೇಹದಲ್ಲಿ ಇತರ ಜೀವಸತ್ವಗಳು ಮತ್ತು ಕಬ್ಬಿಣದ ಕೊರತೆಗೆ ಕಾರಣವಾಗಬಹುದು. ಒಂದು ವೇಳೆ ಈ ಪ್ರಮುಖ ಪೋಷಕಾಂಶಗಳಲ್ಲಿ ಕೊರತೆ ಎದುರಾದರೆ ದೇಹದ ನರಮಂಡಲಕ್ಕೆ ಸಂಬಂಧಿಸಿದ ತೊಂದರೆಗಳು ಎದುರಾಗಬಹುದು ಎಂದು ತಜ್ಞರು ಎಚ್ಚರಿಕೆಯನ್ನು ನೀಡುತ್ತಾರೆ. ಜೊತೆಗೆ ಇದು ರಕ್ತಹೀನತೆ, ನರಕ್ಕೆ ಸಂಬಂಧಿಸಿದ ಸಮಸ್ಯೆ ಮತ್ತು ಮೂಳೆ ಹಾಗೂ ಸ್ನಾಯುಗಳ ದೌರ್ಬಲ್ಯಕ್ಕೆ ಕಾರಣವಾಗಬಹುದು. ಇದನ್ನು ತಡೆಯಲು ಚಳಿಗಾಲದಲ್ಲಿ ಲಭ್ಯವಿರುವ ಕೆಲವು ತರಕಾರಿಗಳನ್ನು ಸೇವನೆ ಮಾಡುವುದರಿಂದ ಈ ಕೊರತೆಯನ್ನು ನಿವಾರಿಸಬಹುದು.
ಇದನ್ನೂ ಓದಿ: ರೀಲ್ಸ್ಗೆ ಅಡಿಕ್ಟ್ ಆಗಿದ್ದೀರಾ? ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು
ಸಾಮಾನ್ಯವಾಗಿ ಚಳಿಗಾಲದಲ್ಲಿ ಕಂಡು ಬರುವ ಸಾಮಾನ್ಯ ತರಕಾರಿಗಳಲ್ಲಿ ಪಾಲಕ್ ಕೂಡ ಒಂದು. ಈ ತರಕಾರಿಗಳಲ್ಲಿ ಕಬ್ಬಿಣಾಂಶ ಸಮೃದ್ಧವಾಗಿದೆ. ಇದಲ್ಲದೆ, ಪಾಲಕ್ ದೇಹದಲ್ಲಿ ವಿಟಮಿನ್ ಬಿ -12 ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಪಾಲಕ್ ಸೊಪ್ಪು ರಕ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ನೀವು ಪಾಲಕ್ ಸೂಪ್ ಅಥವಾ ಬೇರೆ ಬೇರೆ ರೀತಿಯ, ನಿಮಗಿಷ್ಟವಾಗುವ ಆಹಾರಗಳಲ್ಲಿ ಸೇರಿಸಿಕೊಳ್ಳಬಹುದು.
ಇದರಲ್ಲಿ ವಿಟಮಿನ್ ಬಿ 12 ನಲ್ಲಿ ಹೇರಳವಾಗಿ ಕಂಡುಬರುತ್ತದೆ, ಇದು ಫೈಬರ್ ಮತ್ತು ಪೊಟ್ಯಾಸಿಯಮ್ ನಿಂದ ಸಮೃದ್ಧವಾಗಿದೆ. ಈ ವಿಟಮಿನ್ ಕೊರತೆಯನ್ನು ನೀಗಿಸಲು ನೀವು ಇದನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸಬಹುದು. ಜೊತೆಗೆ ಇದರಿಂದ ವಿಶೇಷ ರೀತಿಯ ಅಡುಗೆಗಳನ್ನು ಮಾಡಬಹುದು. ಇದೆಲ್ಲದರೊಂದಿಗೆ ಅನೇಕ ರೀತಿಯ ಆಹಾರಗಳಲ್ಲಿ ವಿಟಮಿನ್ ಬಿ 12 ಅಂಶವಿದ್ದು, ಹಾಲು, ಮೊಸರು ಮತ್ತು ಚೀಸ್ ನಲ್ಲಿ ಇವು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ