Vitamin B12: ವಿಟಮಿನ್ ಬಿ 12 ಕೊರತೆಯು ದೇಹದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತವೆ

|

Updated on: Jun 27, 2023 | 6:11 PM

ಹೈದರಾಬಾದ್​​ನ ನರವಿಜ್ಞಾನಿ ಡಾ ಸುಧೀರ್ ಕುಮಾರ್ ಅವರು ಟ್ವಿಟ್ಟರ್‌ನಲ್ಲಿ ವಿಟಮಿನ್ ಬಿ 12 ಕೊರತೆಯು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ.

Vitamin B12: ವಿಟಮಿನ್ ಬಿ 12 ಕೊರತೆಯು ದೇಹದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತವೆ
ಸಾಂದರ್ಭಿಕ ಚಿತ್ರ
Follow us on

ವಿಟಮಿನ್ ಬಿ 12 ಮಿತಿಮೀರಿದ ಸೇವನೆಯಿಂದ ಗರ್ಭಿಣಿಯರು ಅತಿ ಹೆಚ್ಚು ಬಿ 12 ಮಟ್ಟವನ್ನು ಹೊಂದಿದ್ದು, ಇದು ಶಿಶುವಿನಲ್ಲಿ ಆಟಿಸಂ ಸ್ಪೆಕ್ಟ್ರಮ್ ಅಸ್ವಸ್ಥತೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ. ಮಿಟಮಿನ್​​​ ಬಿ 12 ಎಷ್ಟರ ಮಟ್ಟಿಗೆ ಸೇವಿಸುವುದು ಉತ್ತಮ ಹಾಗೂ ಇದರಿಂದಾಗುವ ಅಡ್ಡ ಪರಿಣಾಮಗಳೇನು? ಎಂಬುದನ್ನು ತಜ್ಞರು ವಿವರಿಸುತ್ತಾರೆ. ವಿಟಮಿನ್​​ ಬಿ 12 ಕೆಲವು ಆಹಾರಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ. ಇದಲ್ಲದೇ ಔಷಧಿಯ ರೂಪದಲ್ಲಿ ನೀಡಲಾಗುತ್ತದೆ. ಹೈದರಾಬಾದ್​​ನ ನರವಿಜ್ಞಾನಿ ಡಾ ಸುಧೀರ್ ಕುಮಾರ್ ಅವರು ಟ್ವಿಟ್ಟರ್‌ನಲ್ಲಿ ವಿಟಮಿನ್ ಬಿ 12 ಕೊರತೆಯು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ.

ವಿಟಮಿನ್ ಬಿ 12 ಕೊರತೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು:

ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಉಂಟಾದರೆ ರಕ್ತ ಹೀನತೆ, ನರರೋಗ, ಬುದ್ಧಿಮಾಂದ್ಯತೆ, ಸೈಕೋಸಿಸ್ ಮತ್ತು ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆಗೆ ಕಾರಣವಾಗಬಹುದು ಎಂದು ಡಾ ಸುಧೀರ್ ಸಲಹೆ ನೀಡುತ್ತಾರೆ. ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಉಂಟಾದರೆ, ನೀವು ರಕ್ತಹೀನತೆಯನ್ನು ಪಡೆಯಬಹುದು.

ರೋಗಲಕ್ಷಣಗಳು ಹೀಗಿವೆ:

ಕಡಿಮೆ ಶಕ್ತಿ, ದೀರ್ಘಕಾಲದ ಆಯಾಸ, ದೌರ್ಬಲ್ಯ, ತಲೆಹೊಟ್ಟು, ಹೃದಯ ಬಡಿತ ಮತ್ತು ಉಸಿರಾಟದ ತೊಂದರೆ, ಚರ್ಮದಲ್ಲಿ ಸಮಸ್ಯೆ, ಹಲ್ಲಿನ ಸಮಸ್ಯೆಗಳು, ಬಾಯಿ ಹುಣ್ಣುಗಳು, ವಸಡುಗಳಲ್ಲಿ ರಕ್ತಸ್ರಾವ, ನಾಲಿಗೆ ನೋವು, ಮಲಬದ್ಧತೆ, ಅತಿಸಾರ, ವಾಕರಿಕೆ, ಹಸಿವಿನ ಕೊರತೆ,ನರಗಳ ಸಮಸ್ಯೆಗಳು ಜುಮ್ಮೆನ್ನುವುದು ಅಥವಾ ಮರಗಟ್ಟುವಿಕೆ, ಸ್ನಾಯು ದೌರ್ಬಲ್ಯ ಮತ್ತು ನಡೆಯಲು ಕಷ್ಟ ಮತ್ತು ಮಾನಸಿಕ ಅಸ್ವಸ್ಥತೆಗೆ ಕಾರಣವಾಗಬಹುದು.

ಇದನ್ನೂ ಓದಿ: ಗರ್ಭಿಣಿಯರೇ ಗಮನಿಸಿ; ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ 6 ಅಂಶಗಳಿವು

ವಿಟಮಿನ್ ಬಿ 12 ಎಂದರೇನು?

ವಿಟಮಿನ್ ಬಿ 12 (ಕೋಬಾಲಾಮಿನ್) ಕೆಂಪು ರಕ್ತ ಕಣಗಳ ರಚನೆ, ಜೀವಕೋಶದ ಚಯಾಪಚಯ, ನರಗಳ ಕಾರ್ಯ ಮತ್ತು ಡಿಎನ್‌ಎ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಬಿ 12 ಚಟುವಟಿಕೆಯೊಂದಿಗೆ ಕೋಬಾಲ್ಟ್-ಒಳಗೊಂಡಿರುವ ಸಂಯುಕ್ತಗಳನ್ನು ಕೋಬಾಲಾಮಿನ್ ಎಂದು ಕರೆಯಲಾಗುತ್ತದೆ. ವಿಟಮಿನ್ ಬಿ 12 ನ ಚಯಾಪಚಯ ಸಕ್ರಿಯ ರೂಪಗಳು ಮೀಥೈಲ್ಕೋಬಾಲಾಮಿನ್ ಮತ್ತು 5-ಡಿಯೋಕ್ಸಿ ಅಡೆನೊಸೈಲ್ಕೋಬಾಲಾಮಿನ್.

ದೇಹದಲ್ಲಿ ವಿಟಮಿನ್ ಬಿ 12 ಹೆಚ್ಚಿಸುವ ಆಹಾರಗಳು:

ನಿಮ್ಮ ಆಹಾರದಲ್ಲಿ ಜೀವಸತ್ವಗಳ ಕೊರತೆಯಿಂದಾಗಿ ನಿಮ್ಮ ವಿಟಮಿನ್ ಬಿ 12 ಕೊರತೆಯು ಉಂಟಾದರೆ, ಪ್ರತಿದಿನ ಊಟದ ನಡುವೆ ತೆಗೆದುಕೊಳ್ಳಲು ವಿಟಮಿನ್ ಬಿ 12 ಮಾತ್ರೆಗಳನ್ನು ನೀವು ಶಿಫಾರಸು ಮಾಡುತ್ತಾರೆ.

ವಿಟಮಿನ್ ಬಿ 12 ನ ಉತ್ತಮ ಮೂಲಗಳು:
• ಮಾಂಸ
• ಸಾಲ್ಮನ್ ನಂತಹ ಮೀನು
• ಹಾಲು ಮತ್ತು ಇತರ ಡೈರಿ ಉತ್ಪನ್ನಗಳು
• ಮೊಟ್ಟೆ

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 10:36 am, Wed, 8 February 23