ಸಾಮಾನ್ಯವಾಗಿ ಚರ್ಮದ ಅಲರ್ಜಿಗಳು ಕಾಡುತ್ತಿರುತ್ತದೆ. ಚರ್ಮದ ಮೇಲೆ ಕೆಂಪು ಗುಳ್ಳೆಗಳು, ಕಜ್ಜಿ ಕಂಡು ಬರುತ್ತವೆ. ಇವುಗಳನ್ನು ಹೋಗಲಾಡಿಸಲು ಅದೆಷ್ಟೋ ಮನೆಮದ್ದುಗಳನ್ನು ತಯಾರಿಸುತ್ತೇವೆ. ಕೇವಲ ಔಷಧಗಳಿಂದ ಮಾತ್ರವಲ್ಲ. ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯಿಂದಲೂ ಚರ್ಮದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ದೇಹದಲ್ಲಿ ಪೌಷ್ಟಿಕಾಂಶದ ಕೊರತೆಯಿಂದಲೂ ಚರ್ಮದ ಅಲರ್ಜಿ ಕಂಡು ಬರುತ್ತವೆ. ಹಾಗಿರುವಾಗ ಚರ್ಮಕ್ಕೆ ಹಿತಕರವಾದ ಆಹಾರ ಪದಾರ್ಥಗಳು ಯಾವುದು ಎಂಬುದನ್ನು ತಿಳಿಯೋಣ.
ಸಾಮಾನ್ಯವಾಗಿ ದೇಹದಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸಿಕೊಳ್ಳಲು ತರಕಾರಿಗಳು ಮತ್ತು ಹಣ್ಣುಗಳಿಂದ ತಯಾರಿಸಿದ ಪಾನೀಯವನ್ನು ಅಥವಾ ಜ್ಯೂಸ್ ಸೇವಿಸುತ್ತೇವೆ. ಇದು ದೇಹದ ಆರೋಗ್ಯದ ಜತೆಗೆ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗಿರುವಾಗ ಚರ್ಮದ ಆರೋಗ್ಯವನ್ನು ಸುಧಾರಿಸುವ ಪಾನೀಯಗಳು ಯಾವುವು ಎಂಬುದು ಈ ಕೆಳಗಿನಂತಿದೆ.
ಕಿವಿ ಜ್ಯೂಸ್
ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಕಂಡು ಬರುತ್ತದೆ. ಇದು ಚರ್ಮದ ಆರೋಗ್ಯ ಸುಧಾರಿಸಲು ತುಂಬಾ ಪ್ರಯೋಜಕಾರಿ. ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಲು ಕಿವಿ ಫ್ರೂಟ್ ಸಹಾಯಕಾರಿ. ಆದ್ದರಿಂದ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಕಿವಿ ಹಣ್ಣಿನ ಜ್ಯೂಸ್ ಮಾಡಿ ಸವಿಯಬಹುದು. ಜತೆಗೆ ನಿಂಬೆ ಹಣ್ಣಿನ ಜ್ಯೂಸ್, ಜೇನುತುಪ್ಪ, ಮಿಂಟ್ ಎಲೆಗಳ ಜ್ಯೂಸ್ ಕೂಡಾ ಒಳ್ಳೆಯದು.
ಕಿತ್ತಳೆ ಹಣ್ಣಿನ ಜ್ಯೂಸ್
ಕಿತ್ತಳೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಿಟಮಿನ್ ಸಿ ಅಂಶವಿರುವುದರಿಂದ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ವೈರಸ್ ವಿರುದ್ಧ ಹೋರಾಡಲು ಇದು ಸಹಾಯ ಮಾಡುತ್ತದೆ. ಜತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿರುತ್ತದೆ. ಚರ್ಮದ ಆರೋಗ್ಯವನ್ನು ಸುಧಾರಿಸಲು ಇದು ಸಹಾಯಕವಾಗಿದೆ. ಕಿತ್ತಳೆ ಹಣ್ಣಿನ ಕ್ಯೂಸ್ ಸೇವಿಸುವುದರ ಜತೆಗೆ ಇತ್ತಳೆ ಸಿಪ್ಪೆಯ ಚಟ್ನಿ, ತಂಬುಳಿ ಮಾಡಿಯೂ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ.
ಪೈನಾಪಲ್ ಜ್ಯೂಸ್
ವಿಟಮಿನ್ ಸಿ ಅಂಶದಿಂದ ಸಮೃದ್ಧವಾಗಿರುವ ಪೈನಾಪಲ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜೀರ್ಣಕ್ರಿಯೆಯನ್ನು ಸುಧಾರಿಸಲು, ಚರ್ಮದ ಆರೋಗ್ಯ ಕಾಪಾಡಲು, ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇದು ಸಹಾಯಕವಾಗಿದೆ. ಸೇವಿಸಲು ರುಚಿಕರವಾಗಿಯೂ ಜತೆಗೆ ಮಕ್ಕಳಿಂದ ವಯಸ್ಕರವರೆಗೆ ಹೆಚ್ಚು ಇಷ್ಟವಾಗುವ ಜ್ಯೂಸ್ ಆಗಿದೆ.
ಇದನ್ನೂ ಓದಿ:
Side Effect Soft Drink: ಅತಿಯಾದ ತಂಪು ಪಾನೀಯ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆಗಳಿವೆ ಗೊತ್ತೇ?
Published On - 8:36 am, Wed, 1 September 21