AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Side Effect Soft Drink: ಅತಿಯಾದ ತಂಪು ಪಾನೀಯ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆಗಳಿವೆ ಗೊತ್ತೇ?

ತಂಪು ಪಾನೀಯಗಳ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂಬುದನ್ನು ತಿಳಿಯಿರಿ. ತಂಪು ಪಾನೀಯಗಳನ್ನು ನಿಯಮಿತವಾಗಿ ಸೇವಿಸುವುದು ಉತ್ತಮ. 

Side Effect Soft Drink: ಅತಿಯಾದ ತಂಪು ಪಾನೀಯ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆಗಳಿವೆ ಗೊತ್ತೇ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Aug 18, 2021 | 6:51 AM

ಸಾಮಾನ್ಯವಾಗಿ ಯಾವುದೇ ಪಾರ್ಟಿಯಲ್ಲಿ ಅಥವಾ ಸಮಾರಂಭದಲ್ಲಿ ತಂಪು ಪಾನೀಯಗಳು ಇದ್ದೇ ಇರುತ್ತವೆ. ಅದರಲ್ಲಿಯೂ ಈಗಿನ ಯುಪೀಳಿಗೆಗಂತೂ ಜ್ಯೂಸ್, ಪೆಪ್ಸಿ, ಕೋ ಕೋ ಕೋಲಾದಂತಹ ತಂಪು ಪಾನೀಯಗಳು ಬಹಳ ಇಷ್ಟವಾಗುತ್ತವೆ. ಸೋಡಾ ಬೆರೆಸಿ ತಯಾರಿಸಿರುವ ಈ ತಂಪು ಪಾನೀಯಗಳು ಆರೋಗ್ಯಕ್ಕೆ ಹಾನಿಕಾರಕ. ಇವುಗಳು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ. ಹಾಗಿರುವಾಗ ತಂಪು ಪಾನೀಯಗಳ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂಬುದನ್ನು ತಿಳಿಯಿರಿ.

ತಂಪು ಪಾನೀಯಗಳು ಯಾವುದೇ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಕೇವಲ ಕ್ಯಾಲೊರಿಗಳನ್ನು ಮಾತ್ರ ಹೊಂದಿರುತ್ತದೆ. ಟೈಪ್2 ಮಧುಮೇಹ, ತೂಕ ಹೆಚ್ಚಾಗುವುದು, ಜತೆಗೆ ತಲೆನೋವು, ಮೈ ಕೈ ನೋವಿನಂತಹ ಸಮಸ್ಯೆಗಳು ಕಾಡುತ್ತವೆ. ಜತೆಗೆ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಪ್ರತಿನಿತ್ಯ ಸಕ್ಕರೆ ಪಾನೀಯಗಳನ್ನು ಸೇವಿಸುವುದರಿಂದ ತೂಕ ಹೆಚ್ಚಳವಾಗುತ್ತದೆ.

ತೂಕ ಹೆಚ್ಚಳ ತಂಪು ಪಾನೀಯಗಳನ್ನು ಸೇವಿಸುವುದರಿಂದ ತೂಕ ಬಹುಬೇಗ ಹೆಚ್ಚಳವಾಗುತ್ತದೆ. ತಂಪು ಪಾನೀಯಗಳು ಸಕ್ಕರೆ ಮತ್ತು ಸೋಡಾ ಹೊಂದಿರುವುದರಿಂದ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಈಗಾಗಲೇ ದಪ್ಪಗಿದ್ದವವರು ತಂಪು ಪಾನೀಯಗಳನ್ನು ಹೆಚ್ಚು ಸೇವಿಸದಿರುವುದು ಉತ್ತಮ.

ಮಧುಮೇಹಕ್ಕೆ ಕಾರಣ ಹಾರ್ಮೋನ್ ಇನ್ಸುಲಿನ್ ರಕ್ತದಿಂದ ಗ್ಲೂಕೋಸ್ಅನ್ನು ನಿಮ್ಮ ಜೀವಕೋಶಗಳಿಗೆ ಸಾಗಿಸಲು ಸಹಾಯ ಮಾಡುತ್ತದೆ. ತಂಪು ಪಾನೀಯಗಳ ಅತಿಯಾದ ಸೇವನೆಯು ಫ್ರಕ್ಟೋಸ್ ಮತ್ತು ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ತಂಪು ಪಾನೀಯಗಳ ಅತಿಯಾದ ಸೆವನೆಯಿಂದ ಸಕ್ಕರೆ ಅಂಶ ದೇಹದಲ್ಲಿ ಹೆಚ್ಚಾಗಿ ಟೈಪ್-2 ಮಧುಮೇಹ ಸಮಸ್ಯೆಗೆ ಕಾರಣವಾಗುತ್ತದೆ. ಜತೆಗೆ ಸೋಡಾ ಬೆರೆಸಿರುವುದರಿಂದ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ.

ಕ್ಯಾಲೊರಿ ಮಟ್ಟವನ್ನು ಹೆಚ್ಚಿಸುತ್ತದೆ ತಂಪು ಪಾನೀಯಗಳಲ್ಲಿ ಕ್ಯಾಲೊರಿ ಹೆಚ್ಚಾಗಿರುವುದರಿಂದ ಇದು ದೇಹದ ತೂಕವನ್ನು ಬಹುಬೇಗ ಹೆಚ್ಚಿಸುತ್ತದೆ. ತಂಪು ಪಾನೀಯಗಳು ಹಸಿವನ್ನು ಕಟ್ಟುತ್ತದೆ. ಅಂದರೆ ಹಸಿವಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಡತೊಡಗುತ್ತವೆ.

ಹಲ್ಲು ಹಾಳಾಗುವುದು ಸೋಡಾದಲ್ಲಿ ಫಾಸ್ಪರಿಕ್ ಆಸಿಡ್ ಮತ್ತು ಸಾವಯವ ಆಮ್ಲಗಳಿದ್ದು ಅದು ಹಲ್ಲಿನ ದಂತ ಆರೋಗ್ಯಕ್ಕೆ ಹಾನಿಕಾರಕ. ಜತೆಗೆ ಸಕ್ಕರೆ ಅಂಶ ತಂಪು ಪಾನೀಯಗಳಲ್ಲಿ ಹೆಚ್ಚಾಗಿರುವದರಿಂದ ಹಲ್ಲು ಹುಳುಕಾಗುವುದು (ಕೊಳೆಯುವುದು). ಸಿಹಿ ಅಂಶದಿಂದ ಬಾಯಿಯಲ್ಲಿ ಬಹುಬೇಗ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಹಾಗಿರುವಾಗ ತಂಪು ಪಾನೀಯಗಳನ್ನು ನಿಯಮಿತವಾಗಿ ಸೇವಿಸುವುದು ಉತ್ತಮ.

ಇದನ್ನೂ ಓದಿ:

Teeth: ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಬೇಕೆ? ಈ ಕೆಲವು ಟಿಪ್ಸ್​ಗಳು ನಿಮಗಾಗಿ

Toothpaste Benefits: ಹಲ್ಲುಗಳನ್ನು ಸ್ವಚ್ಛಗೊಳಿಸುವುದರ ಜತೆಗೆ ಟೂತ್​ಪೇಸ್ಟ್ ಮುಖದ ಸೌಂದರ್ಯವನ್ನೂ ಹೆಚ್ಚಿಸುತ್ತದೆ

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
Weekly Horoscope: ಮೇ 05 ರಿಂದ 11 ರವರೆಗಿನ ವಾರ ಭವಿಷ್ಯ
Weekly Horoscope: ಮೇ 05 ರಿಂದ 11 ರವರೆಗಿನ ವಾರ ಭವಿಷ್ಯ
Daily Devotional: ಗಂಗಾ ಸಪ್ತಮಿಯ ಆಚರಣೆ ಮತ್ತು ಮಹತ್ವ ತಿಳಿಯಿರಿ
Daily Devotional: ಗಂಗಾ ಸಪ್ತಮಿಯ ಆಚರಣೆ ಮತ್ತು ಮಹತ್ವ ತಿಳಿಯಿರಿ