Guava Leaves Benefits: ಪೇರಲೆ ಎಲೆಯ ನೀರಿನಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ

ಪೇರಲೆ ಗಿಡದ ಎಲೆಯಲ್ಲಿಯೂ ಕೂಡ ಅನೇಕ ಪ್ರಯೋಜನಗಳಿವೆ. ಬಿಸಿ ನೀರಿನಲ್ಲಿ ಪೇರಲೆ ಎಲೆಗಳನ್ನು ಕುದಿಸಿ ಕುಡಿಯುವುದರಿಂದ ಕಾಲೋಚಿತ ರೋಗಗಳು ಕಡಿಮೆಯಾಗುವುದಲ್ಲದೆ ಚರ್ಮದ ಸಮಸ್ಯೆಗಳು ಕಡಿಮೆಯಾಗುತ್ತವೆ.

Guava Leaves Benefits: ಪೇರಲೆ ಎಲೆಯ ನೀರಿನಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Aug 17, 2021 | 9:33 AM

ಸಾಮಾನ್ಯವಾಗಿ ಪೇರಲೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಪೋಷಕಾಂಶಗಳು ಮತ್ತು ವಿಟಮಿನ್‌ಗಳು ಅಧಿಕವಾಗಿದ್ದು, ಇದು ದೇಹದಲ್ಲಿನ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುವುದಲ್ಲದೆ ಆರೋಗ್ಯವಾಗಿರಿಸುತ್ತದೆ. ಕೇವಲ ಪೇರಲೆ ಹಣ್ಣು ಮಾತ್ರವಲ್ಲ. ಪೇರಲೆ ಗಿಡದ ಎಲೆಯಲ್ಲಿಯೂ ಕೂಡ ಅನೇಕ ಪ್ರಯೋಜನಗಳಿವೆ. ಬಿಸಿ ನೀರಿನಲ್ಲಿ ಪೇರಲೆ ಎಲೆಗಳನ್ನು ಕುದಿಸಿ ಕುಡಿಯುವುದರಿಂದ ಕಾಲೋಚಿತ ರೋಗಗಳು ಕಡಿಮೆಯಾಗುವುದಲ್ಲದೆ ಚರ್ಮದ ಸಮಸ್ಯೆಗಳು ಕಡಿಮೆಯಾಗುತ್ತವೆ. ಆದಾಗ್ಯೂ ಈ ಪೇರಲೆ ಎಲೆಗಳಿಂದ ಕೂದಲಿನ ಸಮಸ್ಯೆಗಳನ್ನು ಪರಿಶೀಲಿಸಬಹುದು. ಪೇರಲೆ ಎಲೆ ಬಳಸುವುದರಿಂದ ಕೂದಲು ಕಪ್ಪು, ದಪ್ಪ, ಉದ್ದ ಮತ್ತು ಮೃದುವಾಗುತ್ತದೆ. ಹಾಗಿದ್ದರೆ ಪೇರಲೆ ಎಲೆಗಳನ್ನು ಉಪಯೋಗಿಸುವ ಕ್ರಮ ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಪೇರಲೆ ಎಲೆ ಪೇಸ್ಟ್ ಪೇರಲೆ ಎಲೆಯನ್ನು ಚೆನ್ನಾಗಿ ನೀರಿನಿಂದ ತೊಳೆದು, ರುಬ್ಬಿಕೊಂಡು ದಪ್ಪ ಪೇಸ್ಟ್ ರೀತಿ ಮಾಡಿಕೊಳ್ಳಿ. ಈಗ ಈ ಪೇಸ್ಟ್ ಅನ್ನು ತಲೆಯ ನೆತ್ತಿಗೆ ಮತ್ತು ಕೂದಲಿಗೆ ಹೇರ್ ಕಲರ್ ಬ್ರಷ್ ಸಹಾಯದಿಂದ ಹಚ್ಚಿ. ನಂತರ ಬೆರಳುಗಳಿಂದ ಐದು ನಿಮಿಷಗಳ ಕಾಲ ನೆತ್ತಿಯನ್ನು ಮಸಾಜ್ ಮಾಡಿ ಮತ್ತು ಅರ್ಧ ಘಂಟೆಯವರೆಗೆ ಬಿಡಿ. ಬಳಿಕ ನೀರಿನಿಂದ ತೊಳೆಯಿರಿ. ಈ ರೀತಿ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ದೂರವಾಗುತ್ತದೆ

ಪೇರಲೆ ಎಲೆಯ ನೀರು ಕೂದಲ ಬೆಳವಣಿಗೆ, ಉದ್ದ ಮತ್ತು ಸೌಂದರ್ಯವನ್ನು ಹೆಚ್ಚಿಸಲು ಪೇರಲೆ ಎಲೆಯ ನೀರನ್ನು ಕೂದಲಿಗೆ ಬಳಸಬಹುದು. ತಾಜಾ ಪೇರಲೆ ಎಲೆಗಳನ್ನು ತೆಗೆದುಕೊಂಡು ನಂತರ ಅವುಗಳನ್ನು ಶುದ್ಧ ನೀರಿನಿಂದ ತೊಳೆಯಿರಿ. ಈಗ ಒಂದು ಪಾತ್ರೆಯಲ್ಲಿ ಕುದಿಯಲು ಒಂದು ಲೀಟರ್ ನೀರನ್ನು ಹಾಕಿ ಮತ್ತು ಅದರಲ್ಲಿ ಪೇರಲೆ ಎಲೆಗಳನ್ನು ಹಾಕಿ. ಈ ನೀರನ್ನು ಕಡಿಮೆ ಉರಿಯಲ್ಲಿ ಎರಡು ನಿಮಿಷ ಕುದಿಸಿ. ನಂತರ ನೀರನ್ನು ತಣ್ಣಗಾಗಲು ಬಿಡಿ. ನೀರು ತಣ್ಣಗಾದ ನಂತರ ಅದನ್ನು ಫಿಲ್ಟರ್ ಮಾಡಿ ಇನ್ನೊಂದು ಬೌಲ್​ಗೆ ತೆಗೆದುಕೊಳ್ಳಿ. ಈಗ ಈ ಪೇರಲೆ ನೀರನ್ನು ಕೂದಲಿನ ತುದಿಗೆ ಹಚ್ಚಿ ಒಂದು ಗಂಟೆ ನಂತರ ನೀರಿನಿಂದ ತೊಳೆಯಿರಿ.

ಪೇರಲೆ ಎಲೆ, ಈರುಳ್ಳಿ ರಸ, ತೆಂಗಿನ ಎಣ್ಣೆ ಪೇಸ್ಟ್ ಮೊದಲು ಪೇರಲೆ ಎಲೆಗಳನ್ನು ಮಿಕ್ಸಿಯಲ್ಲಿ ಹಾಕಿ ನಯವಾಗಿ ಪೇಸ್ಟ್ ಮಾಡಿ. ನಂತರ ಈರುಳ್ಳಿಯನ್ನು ತೆಗೆದುಕೊಂಡು ಪೇಸ್ಟ್ ಮಾಡಿ ಮತ್ತು ಅದರಿಂದ ರಸವನ್ನು ತೆಗೆದುಕೊಂಡು ಪಕ್ಕಕ್ಕೆ ಇರಿಸಿ. ಈಗ ಪೇರಲೆ ಎಲೆ ಪೇಸ್ಟ್ ಮತ್ತು ಈರುಳ್ಳಿ ರಸ ಎರಡನ್ನೂ ಸೇರಿಸಿ ಮತ್ತು ಒಂದು ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ತಲೆಗೆ ಬ್ರಷ್ ಅಥವಾ ಬೆರಳುಗಳ ಸಹಾಯದಿಂದ ಹಚ್ಚಿ. ಅರ್ಧ ಗಂಟೆಯ ನಂತರ ಶಾಂಪೂ ಬಳಸಿ ತೊಳೆಯಿರಿ.

ಇದನ್ನೂ ಓದಿ: Hairy Ears: ಕಿವಿಯಲ್ಲಿ ಬೆಳೆಯುವ ಕೂದಲು ಆರೋಗ್ಯಕ್ಕೆ ಹಾನಿಕಾರಕವೇ?

Guava Side Effect: ಪೇರಲೆ ಹಣ್ಣಿನ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕ!

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ