ಸಿಹಿಯ ಆತ್ಮ ಎಲ್ಲರಿಗೂ ಕಂಡೇ ಬಿಟ್ಟಿತು; ಭಾರ್ಗವಿಗೆ ಇದೆ ಮಾರಿ ಹಬ್ಬ
ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ಆತ್ಮ ಭಾರ್ಗವಿಯ ಕೊಲೆ ರಹಸ್ಯವನ್ನು ಬಯಲು ಮಾಡುತ್ತಿದೆ. ಭಾರ್ಗವಿಯು ಸಿಹಿಯನ್ನು ಕೊಂದಿದ್ದು, ಆಕೆಯ ಅಪರಾಧವನ್ನು ಮರೆಮಾಚಲು ಪ್ರಯತ್ನಿಸಿದ್ದಾಳೆ. ಆದರೆ ಸಿಹಿಯ ಆತ್ಮದಿಂದ ಭಾರ್ಗವಿಗೆ ದೊಡ್ಡ ಸಮಸ್ಯೆ ಎದುರಾಗಿದೆ. ರಾಮ್, ಭಾರ್ಗವಿಯ ನಿಜ ಸ್ವಭಾವವನ್ನು ತಿಳಿದುಕೊಳ್ಳುವನೇ ಎಂಬುದು ಸದ್ಯದ ಪ್ರಶ್ನೆ

‘ಸೀತಾ ರಾಮ’ (Seetha Rama) ಧಾರಾವಾಹಿಯು ಈಗ ಪ್ರಮುಖ ಘಟ್ಟ ತಲುಪಿದೆ ಎಂದೇ ಹೇಳಬಹುದು. ಭಾರ್ಗವಿಯು ಸಿಹಿಯನ್ನು ಕೊಲೆ ಮಾಡಿದ್ದಳು ಮತ್ತು ಆ ಕೊಲೆ ಯಾರಿಗೂ ಗೊತ್ತಾಗದಂತೆ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಳು. ಆದರೆ, ‘ಸೀತಾ ರಾಮ’ ಧಾರಾವಾಹಿಯಲ್ಲಿ ಸಿಹಿಯ ಆತ್ಮ ಬೆಂಬಿಡದೆ ಕಾಡುತ್ತಿದೆ. ಈಗ ಈ ಆತ್ಮಕ್ಕೆ ಶಕ್ತಿ ಬಂದಿದ್ದು, ಭಾರ್ಗವಿ ವಿರುದ್ಧ ತಿರುಗಿ ಬಿದ್ದಿದೆ. ಇದು ಭಾರ್ಗವಿಗೆ ಮುಳುವಾಗುವ ಲಕ್ಷಣ ಕಾಡುತ್ತಿದೆ.
‘ಆಪರೇಷನ್ ಸುಬ್ಬಿ’ ಹೆಸರಿನ ಆಪರೇಷನ್ ಮಾಡಿದ್ದರು ಭಾರ್ಗವಿ. ಇದಕ್ಕೆ ಕಾರಣವೂ ಇದೆ. ಸುಬ್ಬಿ, ಸಿಹಿ ಹಾಗೂ ಅಶೋಕ ಸೇರಿಕೊಂಡು ಭಾರ್ಗವಿಯ ನಿಜವಾದ ಸ್ವರೂಪ ಬಯಲು ಮಾಡಲು ಮುಂದಾಗಿದ್ದರು. ಅದು ನಾಟಕದ ಮೂಲಕ. ಇದನ್ನು ಅರಿತುಕೊಂಡ ಭಾರ್ಗವಿಯು ಪತಿಯ ಜೊತೆ ಸೇರಿ ಸುಬ್ಬಿಯನ್ನು ಕಿಡ್ನ್ಯಾಪ್ ಮಾಡಿಸಿದ್ದಾರೆ. ಪ್ರಜ್ಞೆ ತಪ್ಪುವಂತೆ ಮಾಡಿದ್ದಾರೆ. ಹೀಗಾಗಿ, ನಾಟಕ ಕ್ಲೋಸ್ ಆಗುವ ಸೂಚನೆ ಸಿಕ್ಕಿತ್ತು.
ಆ ಸಮಯದಲ್ಲಿ ದೇವರ ಬಳಿ ಹೋದ ಸಿಹಿ ಆತ್ಮ, ವಿಶೇಷ ಮನವಿ ಮಾಡಿಕೊಂಡಿತು. ‘ಸುಬ್ಬಿ ಇಲ್ಲದೆ ನಾಟಕ ಆಗಲ್ಲ. ಭಾರ್ಗವಿ ಆಂಟಿ ವಿಷಯ ಅಪ್ಪನಿಗೆ ಗೊತ್ತಾಗಲೇಬೇಕು. ಹೇಗಾದರೂ ಮಾಡಿ ಈ ನಾಟಕ ನಡೆಯುವಂತೆ ಮಾಡು’ ಎಂದು ಸಿಹಿಯ ಆತ್ಮ ದೇವರ ಬಳಿ ಮನವಿ ಮಾಡಿಕೊಂಡಿತು. ಇದಕ್ಕೆ ದೇವರು ಅಸ್ತು ಎಂದಿದ್ದಾನೆ. ಸಿಹಿಗೆ ವಿಶೇಷ ಶಕ್ತಿ ಸಿಕ್ಕಿ ಆಕೆ ಕಾಣಿಸಿದ್ದಾಳೆ.
ನಾಟಕ ನಡೆಯುವ ಸಮಯದವರೆಗೆ ಸಿಹಿ ಎಲ್ಲರಿಗೂ ಕಾಣಿಸುವ ಸಾಧ್ಯತೆ ಇದೆ. ಸಿಹಿಯನ್ನು ನೋಡಿ ಆಕೆಯನ್ನು ಕೂಡಿಟ್ಟವರು ಶಾಕ್ಗೆ ಒಳಗಾಗಿದ್ದಾರೆ. ಅದರಲ್ಲೂ ಭಾರ್ಗವಿಯು ನಡುಗಿ ಹೋಗಿದ್ದಾಳೆ. ತನ್ನ ನಿಜವಾದ ಸ್ವರೂಪ ಹೊರ ಬರುವ ಬಗ್ಗೆ ಆಕೆಗೆ ಭಯ ಕಾಡಿದೆ. ಮುಂದೇನು ಎನ್ನುವ ಪ್ರಶ್ನೆಯೂ ಆಕೆಗೆ ಮೂಡಿದೆ ಎನ್ನಬಹುದು.
ಇದನ್ನೂ ಓದಿ: ‘ಸೀತಾ ರಾಮ’ ಧಾರಾವಾಹಿ: ಅಶೋಕ್ಗೆ ಗೊತ್ತಾಗಿ ಹೋಯ್ತು ಸಿಹಿಯ ಆತ್ಮದ ಕಥೆ; ಮುಂದೇನು?
‘ಸೀತಾ ರಾಮ’ ಧಾರಾವಾಹಿಯಲ್ಲಿ ಭಾರ್ಗವಿ ಕೆಟ್ಟವಳು ಎನ್ನುವ ವಿಚಾರ ಆಕೆಯ ಮಲ ಮಗ ರಾಮನಿಗೆ ಗೊತ್ತಿಲ್ಲ. ಅದನ್ನು ತೋರಿಸಿವ ಉದ್ದೇಶದಿಂದ ಮಾಡಿದ ನಾಟಕವೇ ಇದಾಗಿದೆ. ಈ ನಾಟಕ ಯಶಸ್ಸು ಕಂಡರೆ ಭಾರ್ಗವಿಯ ನಿಜವಾದ ಮುಖ ಕಳಚಿ ಬೀಳುವ ಸಾಧ್ಯತೆ ಇದೆ. ಇದನ್ನು ರಾಮ್ ಹೇಗೆ ಅರ್ಥೈಸಿಕೊಳ್ಳುತ್ತಾನೆ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:30 am, Sat, 3 May 25







