ಬೆಳಗ್ಗಿನ ಈ ಅಭ್ಯಾಸಗಳು ನಿಮ್ಮ ಮಕ್ಕಳನ್ನು ಚುರುಕಾಗಿಸುತ್ತದೆ
ಮಕ್ಕಳು ಬೆಳಗ್ಗಿನ ಸಮಯದಲ್ಲಿ ರೂಢಿಸಿಕೊಳ್ಳುವ ಕೆಲವು ಆರೋಗ್ಯಕರ ಅಭ್ಯಾಸಗಳಿಂದ ಅವರ ಬುದ್ಧಿಶಕ್ತಿ ಹೆಚ್ಚಾಗುತ್ತದೆ. ಇದು ಕೆಲವರಿಗೆ ಆಶ್ಚರ್ಯ ಹುಟ್ಟಿಸಬಹುದು. ಆದರೆ ಇದು ನಿಜ. ನಿಮ್ಮ ಮಕ್ಕಳು ಯಾವ ರೀತಿ ದಿನವನ್ನು ಆರಂಭಿಸುತ್ತಾರೆ ಎಂಬುದು ಬಹಳ ಮುಖ್ಯವಾಗಿರುತ್ತದೆ. ಮಕ್ಕಳಿಗೆ ಮೊಬೈಲ್ ಕೊಡುವುದಕ್ಕಿಂತ ಕೆಲವು ಸರಳ ಅಭ್ಯಾಸಗಳನ್ನು ಪಾಲಿಸಲು ಅನುವು ಮಾಡಿಕೊಡಿ. ಇದರಿಂದ ಅವರ ಆಲಸ್ಯ ಕಡಿಮೆಯಾಗಿ ಚುರುಕುತನ ಹೆಚ್ಚಾಗುತ್ತದೆ.

ಬೆಳಗ್ಗಿನ ಸಮಯದಲ್ಲಿ ಮಕ್ಕಳು (Children) ರೂಢಿಸಿಕೊಳ್ಳುವ ಆರೋಗ್ಯಕರ ಅಭ್ಯಾಸಗಳಿಂದ ಅವರ ಯೋಗಕ್ಷೇಮವನ್ನು (Well-being) ಸುಧಾರಿಸುತ್ತದೆ. ಓದುವುದು (Reading), ವ್ಯಾಯಾಮ (Exercise) ಮಾಡುವುದು, ಆರೋಗ್ಯಕರ ಆಹಾರಗಳ ಸೇವನೆ ಈ ರೀತಿ ಸರಳ ಅಭ್ಯಾಸಗಳು ಮಕ್ಕಳ ಮಾನಸಿಕ ಆರೋಗ್ಯ (Health) ಹಾಳಾಗದಂತೆ ನೋಡಿಕೊಳ್ಳುತ್ತದೆ. ಜೊತೆಗೆ ಅವರ ಬುದ್ದಿವಂತಿಕೆ ಹೆಚ್ಚಾಗುತ್ತದೆ. ಮಕ್ಕಳಲ್ಲಿ ಆಲಸ್ಯ ಕಡಿಮೆಯಾಗಿ ಚುರುಕುತನ ಹೆಚ್ಚುತ್ತದೆ. ಪ್ರತಿ ಕೆಲಸದಲ್ಲಿಯೂ ಆಸಕ್ತಿ ಮೂಡುತ್ತದೆ. ಹಾಗಾದರೆ ಮಕ್ಕಳ ಆರೋಗ್ಯ ಚೆನ್ನಾಗಿದ್ದು ಅವರು ಬುದ್ದಿವಂತರಾಗಲು ಯಾವ ರೀತಿಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು? ಮಕ್ಕಳು ಚುರುಕಾಗಲು ಅವರ ಬೆಳಗಿನ ದಿನಚರಿ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ನಿಮ್ಮ ಮಕ್ಕಳ ದಿನಚರಿ ಹೀಗಿರಲಿ;
- ಮಕ್ಕಳನ್ನು ಬೇಗ ಎಬ್ಬಿಸಲು ಪ್ರಯತ್ನಿಸಿ. ಈ ಅಭ್ಯಾಸ ಅವರನ್ನು ಮತ್ತಷ್ಟು ಚುರುಕುಗೊಳಿಸುತ್ತದೆ. ಜೊತೆಗೆ ಮಕ್ಕಳಲ್ಲಿ ಒಂದು ರೀತಿಯ ಶಿಸ್ತು ಮೂಡಲು ಈ ಅಭ್ಯಾಸ ಸಹಾಯ ಮಾಡುತ್ತದೆ.
- ಮಕ್ಕಳು ಎದ್ದ ತಕ್ಷಣ ಅವರ ದಿನವನ್ನು ನೀರು ಕುಡಿಯುವುದರಿಂದ ಪ್ರಾರಂಭಿಸಲು ಅನುವು ಮಾಡಿಕೊಡಿ. ಇದು ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ಮಕ್ಕಳ ಜೀರ್ಣಶಕ್ತಿಯನ್ನು ಹೆಚ್ಚು ಮಾಡುತ್ತದೆ. ಈ ಅಭ್ಯಾಸ ಮಕ್ಕಳಿಗೆ ಓದುವುದಕ್ಕೆ, ಬರೆಯುವುದಕ್ಕೆ ಹೆಚ್ಚಿನ ಹುಮ್ಮಸ್ಸು ನೀಡುತ್ತದೆ.
- ಪ್ರೊಟೀನ್, ಫೈಬರ್, ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುವ ಸಮತೋಲಿತ ಉಪಹಾರ ನೀಡಿ. ಇದು ಮೆದುಳಿಗೆ ಹೆಚ್ಚಿನ ಶಕ್ತಿ ನೀಡುವುದಲ್ಲದೆ ಮಕ್ಕಳಲ್ಲಿ ಏಕಾಗ್ರತೆ, ಸ್ಮರಣ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.
- ಮಕ್ಕಳಿಗೆ ಬೆಳಿಗ್ಗೆ ಸರಳ ವ್ಯಾಯಾಮ ಮಾಡುವುದನ್ನು ಹೇಳಿಕೊಡಿ. ಇದು ಮಕ್ಕಳಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಜೊತೆಗೆ ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ. ಬುದ್ಧಿಶಕ್ತಿ ಹೆಚ್ಚಾಗುತ್ತದೆ.
- ಪ್ರತಿದಿನ ಬೆಳಿಗ್ಗೆ ಮಕ್ಕಳಿಗೆ ಒಂದು ಸಣ್ಣ ಕಥೆ, ಸುದ್ದಿ ತುಣುಕು ಅಥವಾ ಯಾವುದಾದರೂ ಒಂದು ಮೋಜಿನ ಸಂಗತಿಯನ್ನು ಓದಲು ಪ್ರೋತ್ಸಾಹಿಸಿ. ಇದರಿಂದ ಮಕ್ಕಳಲ್ಲಿ ಕುತೂಹಲ, ಗ್ರಹಿಕೆಯ ಕೌಶಲ್ಯ ಹೆಚ್ಚಾಗುತ್ತದೆ ಜೊತೆಗೆ ಶಬ್ದಕೋಶದ ಅರಿವಾಗುತ್ತದೆ.
- ಪ್ರತಿನಿತ್ಯ ಒಂದು ಗುರಿ ಇಟ್ಟುಕೊಂಡು ಅದನ್ನು ಶತತ ಪ್ರಯತ್ನ ಹಾಕಿ ಸಾಧಿಸಲು ಹೇಳಿ. ಇದರಿಂದ ಮಕ್ಕಳಲ್ಲಿ ಜವಾಬ್ದಾರಿ ಹೆಚ್ಚಾಗುತ್ತದೆ. ವಿಶ್ವಾಸ ಬೆಳೆಯುತ್ತದೆ. ಮಕ್ಕಳ ಸಾಮರ್ಥ್ಯ ದ್ವಿಗುಣಗೊಳ್ಳುತ್ತದೆ.
ಈ ರೀತಿಯ ಆರೋಗ್ಯಕರ ಅಭ್ಯಾಸಗಳು ಮಕ್ಕಳನ್ನು ಚುರುಕಾಗಿಸುತ್ತದೆ. ಅವರ ಆಲಸ್ಯವೂ ಕೂಡ ಕಡಿಮೆಯಾಗುತ್ತದೆ. ಮಕ್ಕಳಿಗೆ ಮೊಬೈಲ್ ಕೊಟ್ಟು ಅವರ ಸಾಮರ್ಥ್ಯವನ್ನು ಕುಂಠಿತಗೊಳಿಸುವುದಕ್ಕಿಂತ ಈ ರೀತಿಯ ಸಣ್ಣ ಸಣ್ಣ ಅಭ್ಯಾಸಗಳಿಂದ ಮಕ್ಕಳ ಬೆಳವಣಿಗೆಯನ್ನು, ಅವರ ಬುದ್ಧಿಶಕ್ತಿಯನ್ನು ಹೆಚ್ಚಿಸಬಹುದು. ನೀವು ಕೂಡ ಈ ಸಲಹೆಗಳನ್ನು ಪಾಲಿಸಿ ನೋಡಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








