AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾಗಳಲ್ಲಿ ತೋರಿಸುವ ಕ್ರೌರ್ಯಕ್ಕಿಂತ ಭೀಕರವಾಗಿ ಸುಹಾಸ್ ಶೆಟ್ಟಿಯನ್ನು ಸಾಯಿಸಲಾಗಿದೆ: ಶೋಭಾ ಕರಂದ್ಲಾಜೆ

ಸಿನಿಮಾಗಳಲ್ಲಿ ತೋರಿಸುವ ಕ್ರೌರ್ಯಕ್ಕಿಂತ ಭೀಕರವಾಗಿ ಸುಹಾಸ್ ಶೆಟ್ಟಿಯನ್ನು ಸಾಯಿಸಲಾಗಿದೆ: ಶೋಭಾ ಕರಂದ್ಲಾಜೆ

ಅರುಣ್​ ಕುಮಾರ್​ ಬೆಳ್ಳಿ
|

Updated on: May 02, 2025 | 6:06 PM

Share

ಸರ್ಕಾರಗಳು ಬದಲಾಗುತ್ತಿರುತ್ತವೆ, ಆದರೆ ಅಧಿಕಾರಿಗಳು ಶಾಶ್ವತವಾಗಿ ಇರುತ್ತಾರೆ, ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ನಡೆಸಿ ಹಂತಕರನ್ನು ಹಿಡಿಯಬೇಕು, ತಾನು ಗೃಹ ಇಲಾಖೆಯೊಂದಿಗೆ ಮಾತಾಡಿ ಸುಹಾಸ್ ಕೊಲೆ ಪ್ರಕರಣವನ್ನು ಎನ್​ಐಎಗೆ ವಹಿಸಿಕೊಡುವಂತೆ ಕೋರಿದ್ದೇನೆ, ಕರಾವಳಿ ಭಾಗದಲ್ಲಿ ಪದೇಪದೆ ಈ ನಡೆಯುತ್ತಿರುವ ಇಂಥ ಕೃತ್ಯಗಳ ಕೂಲಂಕಷ ಮತ್ತು ಸಮಗ್ರ ತನಿಖೆ ನಡೆಯಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಮಂಗಳೂರು, ಮೇ 2: ಸುಹಾಸ್ ಶೆಟ್ಟಿಯನ್ನು (Suhas Shetty) ಜನನಿಬಿಡ ರಸ್ತೆಯಲ್ಲಿ ಅಮಾನವೀಯವಾಗಿ ಮತ್ತು ಭೀಕರವಾಗಿ ಹತ್ಯೆ ಮಾಡಲಾಗಿದೆ, ಅಷ್ಟೆಲ್ಲ ಜನ ಓಡಾಡುತ್ತಿದ್ದರೂ ಸಿನಿಮಾಗಳಲ್ಲಿ ತೋರಿಸುವ ಕ್ರೌರ್ಯ ಮತ್ತು ಭೀಭತ್ಸತೆಯೊಂದಿಗೆ ಅವರನ್ನು ಕೊಲ್ಲಲಾಗಿದೆ, ಹತ್ಯೆಗೈದವರು ನಿಸ್ಸಂದೇಹವಾಗಿ ತರಬೇತಿಯನ್ನು ಪಡೆದಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಈ ಪ್ರಕರಣದಿಂದ ಜನರ ಗಮನವನ್ನು ಬೇರೆಡೆ ತಿರುಗಿಸಲು ಸರ್ಕಾರ ಆಗಲೇ ನಿರ್ಧರಿಸಿಬಿಟ್ಟಿದೆ, ಇಂದು ಬೆಳಗ್ಗೆ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ತಮಗೆ ಜೀವ ಬೆದರಿಕೆ ಕರೆ ಬಂದಿದೆ ಅಂತ ಹೇಳುತ್ತಾರೆ, ಸಿಎಂ ಸಿದ್ದರಾಮಯ್ಯ ಸುಹಾಸ್ ಶೆಟ್ಟಿ ಹತ್ಯೆಯ ಬಗ್ಗೆ ಮಾತಾಡುವ ಬದಲು ಖಾದರ್ ಅವರಿಗೆ ಜೀವ ಬೆದರಿಕೆ ಕರೆ ಬಂದಿರುವ ಮತ್ತು ಅವರಿಗೆ ಭದ್ರತೆ ಒದಗಿಸುವ ಬಗ್ಗೆ ಮಾತಾಡುತ್ತಾರೆ, ಜನರಿಗೆ ರಕ್ಷಣೆ ಕೊಡುವುದು ಈ ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಶೋಭಾ ಹೇಳಿದರು.

ಇದನ್ನೂ ಓದಿ: ಸುಹಾಸ್ ಶೆಟ್ಟಿ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ