ವಿಟಮಿನ್ ಕೊರತೆಯಿಂದ ಆಯಾಸ, ಉಸಿರಾಟದ ತೊಂದರೆ ಮತ್ತು ತಲೆತಿರುಗುವಿಕೆ ಮುಂತಾದ ರೋಗಲಕ್ಷಣಗಳು ಉಂಟಾಗುತ್ತವೆ. ಮಾತ್ರೆ ಅಥವಾ ಚುಚ್ಚುಮದ್ದಿನ ಮೂಲಕ ಸೇವಿಸುವ ವಿಟಮಿನ್ ಸಪ್ಲಿಮೆಂಟ್ಗಳು (Vitamin Supplements) ನಮ್ಮ ದೇಹದಲ್ಲಿ ವಿಟಮಿನ್ ಕೊರತೆಯನ್ನು ಸರಿಪಡಿಸಬಹುದು. ಆರೋಗ್ಯಕರ ಕಣ್ಣುಗಳು, ಉತ್ತಮ ದೃಷ್ಟಿ, ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ವಿಟಮಿನ್ ಎ (Vitamin A Deficiency) ಬಹಳ ಅವಶ್ಯಕವಾಗಿದೆ. ಇದು ಸೋಂಕಿನ ವಿರುದ್ಧ ಹೋರಾಡಲು ನಿಮ್ಮ ದೇಹಕ್ಕೆ ಸಹಾಯ ಮಾಡುತ್ತದೆ.
ಮಾನವನ ದೇಹವು ವಿಟಮಿನ್ ಎ ಅನ್ನು ಸ್ವತಃ ಉತ್ಪಾದಿಸಲು ಸಾಧ್ಯವಿಲ್ಲದ ಕಾರಣ ನೀವು ಅದನ್ನು ನಿಮ್ಮ ಆಹಾರದಲ್ಲಿ ಇತರ ರೀತಿಯಲ್ಲಿ ಸೇರಿಸಿಕೊಳ್ಳಬೇಕು. ನಿಮ್ಮ ಆಹಾರದಲ್ಲಿ ನೀವು ಸಾಕಷ್ಟು ವಿಟಮಿನ್ ಎ ಪಡೆಯದಿದ್ದರೆ, ನೀವು ವಿಟಮಿನ್ ಎ ಕೊರತೆಯನ್ನು ಅನುಭವಿಸಬೇಕಾಗುತ್ತದೆ. ಇದು ದೃಷ್ಟಿ ಸಮಸ್ಯೆಗಳು, ಕಡಿಮೆಯಾದ ರೋಗನಿರೋಧಕ ಶಕ್ತಿ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಟಮಿನ್ ಎ ಕೊರತೆ ಉಂಟಾಗಿದೆ ಎಂಬುದರ ಲಕ್ಷಣಗಳಿವು.
ಇದನ್ನೂ ಓದಿ: ಬೆಂಗಳೂರಿನ ಶೇ 95 ರಷ್ಟು ಮಂದಿಗೆ ವಿಟಮಿನ್ ಡಿ ಕೊರತೆ: ತಜ್ಞರು ಹೇಳುವ ಕಾರಣ ಇಲ್ಲಿದೆ
ಶುಷ್ಕತೆ:
ವಿಪರೀತ ಶುಷ್ಕತೆ, ಚರ್ಮದ ಕಿರಿಕಿರಿ ಅಥವಾ ಊತವು ವಿಟಮಿನ್ ಎ ಕೊರತೆಯಿಂದ ಉಂಟಾಗುತ್ತದೆ. ಇದು ಎಸ್ಜಿಮಾಗೆ ಕಾರಣವಾಗಬಹುದು.
ಕಣ್ಣಿನ ಸಮಸ್ಯೆಗಳು:
ಕಡಿಮೆ ವಿಟಮಿನ್ ಎ ಮಟ್ಟಗಳು ದೃಷ್ಟಿ ದೋಷ, ಒಣಗಿದ ಕಣ್ಣುಗಳು ಮತ್ತು ರಾತ್ರಿ ಕುರುಡುತನದ ಸಮಸ್ಯೆಗಳಿಗೆ ಕಾರಣವಾಗಬಹುದು.
ದೇಹದ ಬೆಳವಣಿಗೆಗೆ ತೊಂದರೆ:
ಮಕ್ಕಳಲ್ಲಿ ವಿಟಮಿನ್ ಎ ಕೊರತೆಯು ದೈಹಿಕ ಬೆಳವಣಿಗೆಗೆ ಅಡ್ಡಿಯಾಗಬಹುದು.
ಸೋಂಕುಗಳು:
ವಿಟಮಿನ್ ಎ ರೋಗನಿರೋಧಕ ಶಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ ನೀವು ಆಗಾಗ ಸೋಂಕಿಗೆ ಒಳಗಾಗಬಹುದು.
ಗಾಯವು ನಿಧಾನವಾಗಿ ವಾಸಿಯಾಗುತ್ತದೆ:
ವಿಟಮಿನ್ ಎ ಕೊರತೆಯು ಗಾಯಗಳು ನಿಧಾನವಾಗಿ ವಾಸಿಯಾಗುವಂತೆ ಮಾಡುತ್ತದೆ. ಏಕೆಂದರೆ ಇದು ಚರ್ಮದ ಕೋಶಗಳ ದುರಸ್ತಿಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕೂದಲು ಡ್ಯಾಮೇಜ್ ಆಗದಂತೆ ತಡೆಯುವ 7 ವಿಟಮಿನ್ಗಳಿವು
ಅತಿಯಾದ ಆಯಾಸ:
ನೀವು ನಿರಂತರ ಆಯಾಸವನ್ನು ಅನುಭವಿಸಿದರೆ ನೀವು ವಿಟಮಿನ್ ಎ ಕೊರತೆಯನ್ನು ಹೊಂದಿರಬಹುದು ಎಂದರ್ಥ.
ಬಂಜೆತನ:
ವಿಟಮಿನ್ ಎ ಕೊರತೆಯಿಂದ ಗಂಡು ಮತ್ತು ಹೆಣ್ಣು ಇಬ್ಬರಿಗೂ ಬಂಜೆತನ ಉಂಟಾಗಬಹುದು.
ವಿಪರೀತ ತೂಕ ಇಳಿಕೆ:
ನೀವು ಇದ್ದಕ್ಕಿದ್ದಂತೆ ಸಾಕಷ್ಟು ತೂಕವನ್ನು ಕಳೆದುಕೊಂಡರೆ, ಅದು ವಿಟಮಿನ್ ಎ ಕೊರತೆಯ ಸಂಕೇತವಾಗಿರಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ