
ಇತ್ತೀಚಿನ ದಿನಗಳಲ್ಲಿ, ಜನರಲ್ಲಿ ವಿವಿಧ ರೀತಿಯ ಕಾಯಿಲೆಗಳು ಕಂಡುಬರುತ್ತಿದೆ. ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ, ಒತ್ತಡ ಸೇರಿದಂತೆ ನಾನಾ ರೀತಿಯ ಅಂಶಗಳು ಆರೋಗ್ಯ ಸಮಸ್ಯೆಗಳು ಉದ್ಭವಿಸುವುದಕ್ಕೆ ಕಾರಣವಾಗುತ್ತಿದೆ. ಮಾತ್ರವಲ್ಲ, ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದ ಅಪಾಯಗಳು ಕೂಡ ವೇಗವಾಗಿ ಹೆಚ್ಚುತ್ತಿವೆ. ಅದರಲ್ಲಿಯೂ ಈ ಚಳಿಗಾಲದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿರುವರು ಬಹಳ ಜಾಗರೂಕರಾಗಿರಬೇಕಾಗುತ್ತದೆ. ಏಕೆಂದರೆ ಈ ಋತು ಇಂತಹ ಸಮಸ್ಯೆಗಳಿರುವವರಿಗೆ ಬಹಳ ಅಪಾಯಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾಗಿ ಈ ಸಮಸ್ಯೆಯನ್ನು ಆದಷ್ಟು ತಡೆಗಟ್ಟಲು ಪ್ರತಿದಿನ ವಾಕಿಂಗ್ (Walking) ಮಾಡುವುದು ಬಹಳ ಉಪಯೋಗಕಾರಿ. ಈ ಒಂದು ಅಭ್ಯಾಸ ಹೃದಯಾಘಾತದ (Heart Attack) ಅಪಾಯವನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಒಬ್ಬ ವ್ಯಕ್ತಿ ತನ್ನ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ಎಷ್ಟು ಹೊತ್ತು ವಾಕಿಂಗ್ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಆರೋಗ್ಯ ತಜ್ಞರು, ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು, ನೀವು ವಾರಕ್ಕೆ 200 ನಿಮಿಷಗಳ ಕಾಲ ವೇಗವಾಗಿ ನಡೆಯಬೇಕು ಎಂದು ಹೇಳುತ್ತಾರೆ. 200 ನಿಮಿಷಗಳು ಎಂದರೆ ವಾರದ ಐದು ದಿನ ದಿನಕ್ಕೆ 40 ನಿಮಿಷಗಳ ಕಾಲ ನಡೆಯಬೇಕು. ಈ ರೀತಿ ತಪ್ಪದೆ ಪ್ರತಿದಿನ 40 ನಿಮಿಷ ನಡೆಯುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯ ಕಡಿಮೆಯಾಗುತ್ತದೆ. ಅದಲ್ಲದೆ ಸಾಮಾನ್ಯ ವೇಗದಲ್ಲಿ ನಡೆಯುವುದಕ್ಕಿಂತ ವೇಗವಾಗಿ ನಡೆಯುವುದು ಹೃದಯಕ್ಕೆ ಬಹಳ ಉತ್ತಮ. ಆದ್ದರಿಂದ, ವೇಗವಾಗಿ ನಡೆಯುವ ಮೂಲಕ ನೀವು ಈ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ನೀವು ಕೂಡ ಇದನ್ನು ಅನುಸರಿಸಬಹುದು. ಆದರೆ ಅದಕ್ಕೂ ಮೊದಲು ನಿಮ್ಮ ವೈದ್ಯರ ಸಲಹೆ ಪಡೆಯುವುದು ಬಹಳ ಒಳ್ಳೆಯದು.
ಚುರುಕಾದ ನಡಿಗೆ, ಏರೋಬಿಕ್ಸ್, ಈಜು, ಸೈಕ್ಲಿಂಗ್ ಮತ್ತು ಓಟ ಇವೆಲ್ಲವೂ ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ಉತ್ತಮ ವ್ಯಾಯಾಮಗಳಾಗಿವೆ. ನೀವು ಪ್ರತಿದಿನ 40 ನಿಮಿಷಗಳಿಗಿಂತ ಹೆಚ್ಚು ಕಾಲ ವೇಗದಲ್ಲಿ ವಾಕಿಂಕ್ ಮಾಡಿದರೆ, ನಿಮ್ಮ ದೇಹದ ತೂಕವೂ ಕಡಿಮೆಯಾಗುತ್ತದೆ. ಇನ್ನು ಹೃದಯಾಘಾತವನ್ನು ತಡೆಗಟ್ಟಲು, ಪ್ರತಿದಿನ 40 -45 ನಿಮಿಷಗಳ ಕಾಲ ಚುರುಕಾದ ನಡಿಗೆ ಮಾಡಿ. ಇದು ನಿಮ್ಮ ಹೃದಯ, ಯಕೃತ್ತು ಮತ್ತು ಮೆದುಳನ್ನು ಆರೋಗ್ಯವಾಗಿಡುತ್ತದೆ. ಮಾತ್ರವಲ್ಲ, ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಮಧುಮೇಹದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ