Walnuts Benefits: ದಿನವೂ ವಾಲ್​ನಟ್ ತಿನ್ನುವುದರಿಂದ ಏನೆಲ್ಲ ಪ್ರಯೋಜನವಿದೆ ಗೊತ್ತಾ?

| Updated By: ಸುಷ್ಮಾ ಚಕ್ರೆ

Updated on: May 05, 2022 | 8:26 PM

Health Tips: ವಾಲ್​ನಟ್​ನಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಅಂಶ ಇರುವುದರಿಂದ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಬಯಸಿದರೆ ನೆನೆಸಿದ ವಾಲ್​ನಟ್ ತಿನ್ನುವುದು ಉತ್ತಮ.

Walnuts Benefits: ದಿನವೂ ವಾಲ್​ನಟ್ ತಿನ್ನುವುದರಿಂದ ಏನೆಲ್ಲ ಪ್ರಯೋಜನವಿದೆ ಗೊತ್ತಾ?
ವಾಲ್​ನಟ್
Follow us on

ನೋಡಲು ಮೆದುಳಿನ ಆಕೃತಿಯಲ್ಲಿರುವ ವಾಲ್‌ನಟ್‌ಗಳು (Walnuts) ನಮ್ಮ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿವೆ. ವಾಲ್​ನಟ್ ಗಟ್ಟಿಯಾದ ಶೆಲ್ ಅನ್ನು ಹೊಂದಿದ್ದು, ಅದನ್ನು ತುಂಡರಿಸಿದರೆ ಸುಕ್ಕಾದ ವಾಲ್​ನಟ್ ಸಿಗುತ್ತದೆ. ವಾಲ್‌ನಟ್ಸ್‌ ಮೆದುಳಿನ ಆರೋಗ್ಯ ಮತ್ತು ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಒಮೆಗಾ -3 ಕೊಬ್ಬಿನಾಮ್ಲಗಳು ಮೆದುಳಿನಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಮಾತ್ರವಲ್ಲದೆ ಮೆದುಳಿನ ಸಿಗ್ನಲಿಂಗ್ ಮತ್ತು ನ್ಯೂರೋಜೆನೆಸಿಸ್ ಅನ್ನು ಸುಧಾರಿಸುವಲ್ಲಿಯೂ ಸಹ ಪಾತ್ರ ವಹಿಸುತ್ತವೆ. ಆ್ಯಂಟಿಆಕ್ಸಿಡೆಂಟ್ ಅಂಶ ಇತರ ಬೀಜಗಳಿಗಿಂತ ವಾಲ್‌ನಟ್‌ಗಳಲ್ಲಿ ಹೆಚ್ಚಾಗಿರುತ್ತದೆ. ವಿಟಮಿನ್ ಇ, ಮೆಲಟೋನಿನ್ ಮತ್ತು ಪಾಲಿಫಿನಾಲ್ ಎಂದು ಕರೆಯಲ್ಪಡುವ ಸಸ್ಯ ಪದಾರ್ಥಗಳು, ವಿಶೇಷವಾಗಿ ವಾಲ್‌ನಟ್‌ಗಳಲ್ಲಿ ಹೇರಳವಾಗಿರುವ ಈ ಪರಿಣಾಮಕ್ಕೆ ಕಾರಣವಾಗಿವೆ.

1. ಮೆದುಳಿನ ಆರೋಗ್ಯಕ್ಕೆ ಸಹಕಾರಿ:
ವಾಲ್​ನಟ್​ನಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲಗಳು ಮೆದುಳಿನಲ್ಲಿನ ಆಕ್ಸಿಡೇಟಿವ್‌ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆದುಳಿನ ಅನೇಕ ತೊಂದರೆಗಳನ್ನು ಕೂಡ ಇದು ನಿಧಾನವಾಗಿ ಕಡಿಮೆ ಮಾಡುತ್ತದೆ.

2. ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ:
ವಾಲ್‌ನಟ್ಸ್ ಹೃದ್ರೋಗದ ಅಪಾಯದಲ್ಲಿರುವವರಿಗೆ ಅವರ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಾಲ್​ನಟ್ಸ್ ಅನ್ನು ಕಡಿಮೆ ಸ್ಯಾಚುರೇಟೆಡ್ ಕೊಬ್ಬಿನ ಆಹಾರದೊಂದಿಗೆ ಜೋಡಿಸಿದಾಗ, ಹೃದಯ ರಕ್ತನಾಳದ ಕಾಯಿಲೆಯ ಅಪಾಯದಲ್ಲಿರುವವರಿಗೆ ಅವರ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. (Source)

ಇದನ್ನೂ ಓದಿ
Hair Care: ಕೂದಲು ಬಿಳಿಯಾಗದಂತೆ ತಡೆಗಟ್ಟುವುದು ಹೇಗೆ?; ಕೂದಲ ಆರೋಗ್ಯಕ್ಕೆ ಏನು ತಿನ್ನಬೇಕು?
Health Tips: ಮತ್ತಷ್ಟು ಕ್ಯಾಲೊರಿ ಬರ್ನ್ ಮಾಡಬೇಕಾ?; ವಾಕಿಂಗ್​ನಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
Health Tips: PCOS​ನಿಂದ ಬಳಲುತ್ತಿದ್ದೀರಾ?; ಪಿಸಿಓಎಸ್​ನಿಂದ ಪಾರಾಗಲು ಏನು ಸೇವಿಸಬೇಕು?

3. ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ:
ರಾತ್ರಿಯಲ್ಲಿ 2 ವಾಲ್​ನಟ್ ನೆನೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿರಿ. ನೆನೆಸಿದ ವಾಲ್​ನಟ್ ತಿನ್ನುವುದು ನೆನೆಸಿದ ಬಾದಾಮಿ ತಿನ್ನುವುದಕ್ಕೆ ಸಮವಾಗಿದೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಬಯಸಿದರೆ ನೆನೆಸಿದ ವಾಲ್​ನಟ್ ತಿನ್ನುವುದು ಉತ್ತಮ. ಪ್ರತಿದಿನ ವಾಲ್​ನಟ್ ಸೇವಿಸುವ ಜನರಲ್ಲಿ ಟೈಪ್ -2 ಮಧುಮೇಹ ಬರುವ ಅಪಾಯವನ್ನು ಕಡಿಮೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ವಾಲ್​ನಟ್ ಸಹಾಯ ಮಾಡುತ್ತದೆ. ಮಧುಮೇಹದ ಅಪಾಯವನ್ನು ಕೂಡ ಇದು ಕಡಿಮೆ ಮಾಡುತ್ತದೆ.

4. ಜೀರ್ಣಕ್ರಿಯೆ ಸುಧಾರಿಸುತ್ತದೆ:
ವಾಲ್​ನಟ್​ನಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಅಂಶ ಇರುವುದರಿಂದ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಹೊಟ್ಟೆಯನ್ನು ಸರಿಯಾಗಿಡಲು ಮತ್ತು ಮಲಬದ್ಧತೆಯನ್ನು ತಪ್ಪಿಸಲು ಫೈಬರ್ ಸಮೃದ್ಧವಾಗಿರುವ ವಸ್ತುಗಳನ್ನು ಸೇವಿಸುವುದು ಬಹಳ ಮುಖ್ಯ. ಈ ಸಂದರ್ಭದಲ್ಲಿ, ನೀವು ಪ್ರತಿದಿನ ವಾಲ್​ನಟ್ ಸೇವಿಸಿದರೆ ನಿಮ್ಮ ಹೊಟ್ಟೆಯ ಸಮಸ್ಯೆ ದೂರುವಾಗುತ್ತದೆ, ಮಲಬದ್ಧತೆ ಸಮಸ್ಯೆಯೂ ದೂರವಾಗುತ್ತದೆ.

5. ತೂಕ ಇಳಿಸಲು ಸಹಕಾರಿ:

ತೂಕದ ಸಮಸ್ಯೆಯಿಂದ ಬಳಲುವವರು ವಾಲ್​ನಟ್ ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ವಾಲ್ ನಟ್ಸ್‌ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದು. ಅಲ್ಲದೆ, ಇದರಲ್ಲಿರುವ ಕೊಬ್ಬಿನಾಮ್ಲಗಳು ಉತ್ತಮ ಕೊಲೆಸ್ಟ್ರಾಲ್‌ ಮಟ್ಟವನ್ನು ಹೆಚ್ಚಿಸುತ್ತದೆ. ವಾಲ್ ನಟ್ಸ್‌ ಸೇವನೆ ಮಾಡುವುದರಿಂದ ಎಲ್‌.ಡಿ.ಎಲ್‌ ಕಣಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಅಲ್ಲದೆ, ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ತಗ್ಗಿಸಿಕೊಳ್ಳಬಹುದು

ವಾಲ್‌ನಟ್ಸ್‌ನಲ್ಲಿ ಇತರ ಯಾವುದೇ ಬೀಜಗಳಿಗಿಂತ ಹೆಚ್ಚಿನ ಒಮೆಗಾ-3 ಕೊಬ್ಬಿನಂಶವಿದೆ. ಆಲ್ಫಾ-ಲಿನೋಲೆನಿಕ್ ಆಮ್ಲವು ಸಸ್ಯಗಳಲ್ಲಿ ಕಂಡುಬರುವ ಒಮೆಗಾ-3 ಲಿಪಿಡ್ ಆಗಿದೆ. ವಿಶೇಷವಾಗಿ ವಾಲ್​ನಟ್ಸ್ ಇದು ಅತ್ಯಗತ್ಯ ಕೊಬ್ಬು. ನೀವು ಇದನ್ನು ನಿಮ್ಮ ಆಹಾರದ ಮೂಲಕ ಪಡೆಯಬೇಕು.

ಇನ್ನಷ್ಟು ಆರೋಗ್ಯದ ಕುರಿತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Thu, 5 May 22