ಬದಲಾದ ಜೀವನಶೈಲಿಯಿಂದಾಗಿ ಕೂದಲು (Hair)ಉದುರುವ ಸಮಸ್ಯೆಗಳು ಕೂಡ ಹೆಚ್ಚಾಗುತ್ತಿವೆ. ಆದರೆ ಕೂದಲಿನ ಆರೋಗ್ಯ ಕಾಪಾಡುತ್ತಾ, ಕೂದಲಲ್ಲಿ ರೇಷ್ಮೆಯಂಥಾ ಹೊಳಪು ಬರುವಂತೆ ಕೂಡ ಮಾಡಬಹುದು. ಆಧುನಿಕ ಜೀವನಶೈಲಿಯಿಂದ ಕೆಲವು ಹಾರ್ಮೋನುಗಳ, ಅದರಲ್ಲೂ ಮುಖ್ಯವಾಗಿ ಕಾರ್ಟಿಸೋಲ್ ಎಂಬ ಹಾರ್ಮೋನಿನ ಕಾರ್ಯನಿರ್ವಹಣೆಯಲ್ಲಿ ವ್ಯತಿರಿಕ್ತತೆ ಉಂಟಾಗಿ ‘ಮೆಲನಿನ್’ ಎಂಬ ವರ್ಣದ್ರವ್ಯವನ್ನು ಸೂಸುವ ಜೀವಕೋಶಗಳಲ್ಲಿನ ಕೆಲವು ವಂಶವಾಹಿನಿಗಳು ಕಾರ್ಯವನ್ನು ನಿಲ್ಲಿಸಬಹುದು.
ಇನ್ನೂ ಕೆಲವು ಬಾರಿ ನಾವು ತಿನ್ನುವ ಆಹಾರದಲ್ಲಿ ಕೂದಲ ಬೆಳವಣಿಗೆಗೆ ಬೇಕಾಗುವ ವಿಟಮಿನ್‌ಗಳ ಅಥವಾ ಅಮೈನೊ ಆಮ್ಲಗಳ ಕೊರತೆ ಇರಬಹುದು. ಕೂದಲು ಬೆಳೆಯದೆ ಇರಬಹುದು. ಈ ಎಲ್ಲಾ ಕಾರಣಗಳಿಂದ ಕೂದಲು ಬಹುಬೇಗ ಬಿಳಿಯಾಗಬಹುದು ಅಥವಾ ಉದುರಬಹುದು.
ಕೂದಲು ನುಣುಪಾಗಿ ಹೊಳೆಯುವಂತಾಗಲು ಹೀಗೆ ಮಾಡಿ
ತೆಂಗಿನ ಎಣ್ಣೆ ಹಾಗೂ ನಿಂಬೆಹಣ್ಣು: ಕೋಕೋನಟ್ ಹೇರ್ ಆಯಿಲ್ ಜತೆಗೆ ನಿಂಬೆ ಹಣ್ಣಿನ ರಸವನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಬೇಕು. ಕೇವಲ 5-7 ನಿಮಿಷಗಳ ಬಳಿಕ ಬಾಚಣಿಗೆ ತೆಗೆದುಕೊಂಡು ಕೂದಲು ಬಾಚಿ ರಾತ್ರಿಇಡೀ ಹಾಗೆಯೇ ಇಡಿ ಮರುದಿನ ತಲೆಸ್ನಾನ ಮಾಡಿ.
ತೆಂಗಿನ ಎಣ್ಣೆ ಹಾಗೂ ಜೇನುತುಪ್ಪ: ತೆಂಗಿನ ಎಣ್ಣೆ ಹಾಗೂ ಜೇನುತುಪ್ಪವನ್ನು ಮಿಕ್ಸ್ ಮಾಡಿ ಒಲೆಯಮೇಲಿಟ್ಟು ಸ್ವಲ್ಪ ಬೆಚ್ಚಗೆ ಮಾಡಿ ಬಳಿಕ ತಲೆಗೆ ಹಾಕಿ, ಒಣಗುವವರೆಗೆ ಹಾಗೆಯೇ ಬಿಡಿ ಬಳಿಕ ಟವಲ್ ಒದ್ದೆ ಮಾಡಿಕೊಂಡು ಒರೆಸಿ, ಬಳಿಕ ತಲೆಸ್ನಾನ ಮಾಡಿ.
ಬಾಳೆಹಣ್ಣು, ಅವಕಾಡೋ ಹಾಗೂ ಕೋಕೋನಟ್ ಆಯಿಲ್: ಬಾಳೆಹಣ್ಣು, ಅವಕಾಡೋ ಹಾಗೂ ಕೋಕೋನಟ್ ಹೇರ್ ಆಯಿಲ್ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ, 2-3 ನಿಮಿಷಗಳ ಕಾಲ ಮುಟ್ಟದೇ ಹಾಗೆಯೇ ಬಿಡಿ ಬಳಿಕ ಬಾಚಣಿಗೆ ತೆಗೆದುಕೊಂಡು ಕೂದಲನ್ನು ಬಾಚಿ ಹಾಗೆಯೇ 10 ನಿಮಿಷಗಳ ಕಾಲ ತಲೆಗೆ ಮಸಾಜ್ ಮಾಡಿ. ಬಳಿಕ ಕೂದಲು ತೊಳೆಯಿರಿ.
ಕೋಕೋನಟ್ ಹಾಗೂ ಪೆಪ್ಪರ್ಮೆಂಟ್ ಮಾಸ್ಕ್: ಎರಡು ಚಮಚದಷ್ಟು ಕೋಕೋನಟ್ ಆಯಿಲ್, ಹಾಗೂ ಪೆಪ್ಪರ್ಮೆಂಟ್ ಆಯಿಲ್ ಮಿಕ್ಸ್ ಮಾಡಿ ಮಿಕ್ಸ್ ಮಾಡಿ ಸ್ವಲ್ಪ ಬಿಸಿ ಮಾಡಿ ಬಳಿಕ ಅದು ತಣ್ಣಗಾಗುವವರೆಗೆ ಫ್ರಿಜ್ನಲ್ಲಿರಿಸಬೇಕು. ಮರುದಿನ ಕೂದಲಿಗೆ ಹಚ್ಚಿ 20-25 ನಿಮಿಗಳ ಬಳಿಕ ತಲೆ ಸ್ನಾನ ಮಾಡಬೇಕು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ