AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lips Care: ಧೂಮಪಾನಿಗಳು ತಮ್ಮ ತುಟಿಯ ಆರೋಗ್ಯ ಹೇಗೆ ಕಾಪಾಡಿಕೊಳ್ಳಬಹುದು?

ಧೂಮಪಾನ( Smoking)ಮಾಡುವುದು ಆರೋಗ್ಯಕ್ಕೆ ಹಾನಿಕಾರಕ, ಆದರೆ ಇದೆಲ್ಲವನ್ನೂ ತಿಳಿದೂ ಬಿಡಲಾರದ ಪರಿಸ್ಥಿತಿಯಲ್ಲಿ ಕೆಲವರು ಇರುತ್ತಾರೆ. ದೂಮಪಾನಿಗಳು ತಮ್ಮ ತುಟಿಯ ಬಣ್ಣ ಕಪ್ಪಾಗದಂತೆ ನೋಡಿಕೊಳ್ಳುವುದು ಹೇಗೆ ಮಾಹಿತಿ ಇಲ್ಲಿದೆ.

Lips Care: ಧೂಮಪಾನಿಗಳು ತಮ್ಮ ತುಟಿಯ ಆರೋಗ್ಯ ಹೇಗೆ ಕಾಪಾಡಿಕೊಳ್ಳಬಹುದು?
Smokers
Follow us
TV9 Web
| Updated By: ನಯನಾ ರಾಜೀವ್

Updated on: Jun 17, 2022 | 3:11 PM

ದುಶ್ಚಟಗಳ ನಡುವೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕಷ್ಟ,  ಧೂಮಪಾನ( Smoking)ಮಾಡುವುದು ಆರೋಗ್ಯಕ್ಕೆ ಹಾನಿಕಾರಕ, ಆದರೆ ಇದೆಲ್ಲವನ್ನೂ ತಿಳಿದೂ ಬಿಡಲಾರದ ಪರಿಸ್ಥಿತಿಯಲ್ಲಿ ಕೆಲವರು ಇರುತ್ತಾರೆ. ದೂಮಪಾನಿಗಳು ತಮ್ಮ ತುಟಿಯ ಬಣ್ಣ ಕಪ್ಪಾಗದಂತೆ ನೋಡಿಕೊಳ್ಳುವುದು ಹೇಗೆ ಮಾಹಿತಿ ಇಲ್ಲಿದೆ.

ಹಳೆಯ ಲಿಪ್ ಬಾಮ್ ಬಳಸಬೇಡಿ: ನೀವು ಲಿಪ್ ಬಾಮ್ ಅನ್ನು ಬಳಕೆ ಮಾಡುವುದಾದರೆ, ಅದು ಹಳೆಯದಾಗದಂತೆ ವಿಶೇಷ ಕಾಳಜಿ ವಹಿಸಿ. ಇಲ್ಲದಿದ್ದರೆ ಅವಧಿ ಮುಗಿದ ಉತ್ಪನ್ನಗಳು ನಿಮ್ಮ ತುಟಿಗಳ ಸೌಂದರ್ಯವನ್ನು ಕಸಿದುಕೊಂಡು ಅವುಗಳನ್ನು ಕಪ್ಪಾಗಿಸುತ್ತದೆ.

ಸದಾ ತುಟಿಯನ್ನು ಮಾಯ್ಚುರೈಸ್​ ಆಗಿಡಿ: ಸದಾ ತುಟಿಯನ್ನು ಒಣಗದಂತೆ ನೋಡಿಕೊಳ್ಳಿ, ಮಾಯ್ಚುರೈಸ್​ಆಗಿರಿಸಿ, ಬೆಣ್ಣೆ ಅಥವಾ ಸೆರಂ ಬಳಕೆ ಮಾಡುವುದರಿಂದ ನಿಮ್ಮ ತುಟಿ ಸದಾ ಹೈಡ್ರೇಟ್​ ಆಗಿರಲಿದೆ.

ಡೆಡ್ ಸ್ಕಿನ್: ಆಗಾಗ್ಗೆ ಸತ್ತ ಚರ್ಮದ (Dead Skin) ಪದರವು ನಮ್ಮ ತುಟಿಗಳ ಮೇಲೆ ಸಂಗ್ರಹವಾಗುತ್ತದೆ. ಅದನ್ನು ನಿಯಮಿತವಾಗಿ ತೆಗೆದುಹಾಕುವುದು ಬಹಳ ಮುಖ್ಯ, ಈ ಕಾರಣದಿಂದಾಗಿ ತುಟಿಗಳ ಮೇಲೆ ಸುಕ್ಕುಗಳು ಸಹ ಉಂಟಾಗುತ್ತವೆ. ಅದಕ್ಕಾಗಿಯೇ ತುಟಿಗಳಿಂದ ಸತ್ತ ಜೀವಕೋಶಗಳನ್ನು ತೆಗೆದುಹಾಕುವುದು ಮತ್ತು ಮಸಾಜ್ ಮಾಡುವುದು ಮುಖ್ಯ.

ಲಿಪ್‌ಸ್ಟಿಕ್‌: ಧೂಮಪಾನದ ಜತೆಗೆ ಮಹಿಳೆಯರು ಬಳಸುವ ಲಿಪ್​ಸ್ಟಿಕ್ ಇಂದಲೂ ನಿಮ್ಮ ತುಟಿ ಕಪ್ಪಾಗಲಿದೆ. ಲಿಪ್‌ಸ್ಟಿಕ್‌ನಲ್ಲಿ ಹಾನಿಕಾರಕ ರಾಸಾಯನಿಕಗಳ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ, ಕೆಲವು ಕಳಪೆ ಗುಣಮಟ್ಟದ ಲಿಪ್‌ಸ್ಟಿಕ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದರಿಂದ ತುಟಿಗಳಿಗೆ ಸಾಕಷ್ಟು ಹಾನಿಯಾಗುತ್ತದೆ. ನೀವು ಲಿಪ್‌ಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಉತ್ತಮ ಬ್ರಾಂಡ್ ಉತ್ಪನ್ನಗಳನ್ನು ಮಾತ್ರ ಬಳಸುವುದು ಉತ್ತಮ.

ಸದಾ ನೀರು ಕುಡಿಯಿರಿ: ದೇಹದಲ್ಲಿ ನೀರಿನ ಕೊರತೆಯಿಂದ ತುಟಿಗಳು ಕಪ್ಪಾಗಲು ಪ್ರಾರಂಭಿಸುತ್ತವೆ. ಆದ್ದರಿಂದ, ಧೂಮಪಾನಿಗಳು ಇದನ್ನು ನಿಯಮಿತ ಮಧ್ಯಂತರದಲ್ಲಿ ಕುಡಿಯುವುದು ಅವಶ್ಯಕ, ಇದು ತುಟಿಗಳನ್ನು ಹೈಡ್ರೀಕರಿಸುತ್ತದೆ ಮತ್ತು ನೈಸರ್ಗಿಕ ರೀತಿಯಲ್ಲಿ ಅವುಗಳ ಸೌಂದರ್ಯ ಕೆಡದೆ ಹಾಗೆಯೇ ಉಳಿಯುತ್ತದೆ.

ತುಟಿ ಮಾಸ್ಕ್​ಗಳನ್ನು ಬಳಸಿ: ಒಡೆದಿರುವ ತುಟಿಯನ್ನು ಸರಿಪಡಿಸಲು ತುಟಿಯ ಮಾಸ್ಕ್​ಗಳನ್ನು ಬಳಕೆ ಮಾಡಿ, ಲಿಪ್ ಸೆರಂಗಳಲ್ಲಿ ಆಂಟಿ ಆಕ್ಸಿಡೆಂಟ್ಸ್​ ಸೆರಾಮೈಡ್ಸ್​ಗಳಿದ್ದು, ಅವು ತುಟಿಯ ಆರೋಗ್ಯವನ್ನು ಕಾಪಾಡುತ್ತವೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ