Oral Health: ಹಲ್ಲು ಹುಳುಕಾಗಲು ನಿಮ್ಮ ಈ ಅಭ್ಯಾಸಗಳೇ ಕಾರಣವಾಗಿರಬಹುದು

Oral Health: ಹಲ್ಲು ಹುಳುಕು ಎಂಬುದು ಸಾಮಾನ್ಯವಾಗಿದ್ದು, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಾಡುವ ಸಮಸ್ಯೆ ಇದಾಗಿದೆ. ಆದರೆ ಕೆಲವರು ನಮ್ಮ ಹಲ್ಲಿನ ಕ್ವಾಲಿಟಿಯೇ ಸರಿ ಇಲ್ಲ ಎಂದು ಹೇಳಿ ನುಣಿಚಿಕೊಳ್ಳುತ್ತಾರೆ. ಆದರೆ ನಿಮ್ಮ ಅಭ್ಯಾಸಗಳೇ ನಿಮ್ಮೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣವಾಗಿರುತ್ತದೆ. ಹಾಗೆಯೇ ಹಲ್ಲಿನ ಹುಳುಕಿಗೂ ಕೂಡ ನೀವೇ ಮೂಲ ಕಾರಣರಾಗಿರುತ್ತೀರಿ.

Oral Health: ಹಲ್ಲು ಹುಳುಕಾಗಲು ನಿಮ್ಮ ಈ ಅಭ್ಯಾಸಗಳೇ ಕಾರಣವಾಗಿರಬಹುದು
Tooth Decay
Follow us
TV9 Web
| Updated By: ನಯನಾ ರಾಜೀವ್

Updated on:Jun 18, 2022 | 10:08 AM

ಹಲ್ಲು ಹುಳುಕು ಎಂಬುದು ಸಾಮಾನ್ಯವಾಗಿದ್ದು, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಾಡುವ ಸಮಸ್ಯೆ ಇದಾಗಿದೆ. ಆದರೆ ಕೆಲವರು ನಮ್ಮ ಹಲ್ಲಿನ ಕ್ವಾಲಿಟಿಯೇ ಸರಿ ಇಲ್ಲ ಎಂದು ಹೇಳಿ ನುಣಿಚಿಕೊಳ್ಳುತ್ತಾರೆ. ಆದರೆ ನಿಮ್ಮ ಅಭ್ಯಾಸಗಳೇ ನಿಮ್ಮೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣವಾಗಿರುತ್ತದೆ. ಹಾಗೆಯೇ ಹಲ್ಲಿನ ಹುಳುಕಿಗೂ ಕೂಡ ನೀವೇ ಮೂಲ ಕಾರಣರಾಗಿರುತ್ತೀರಿ.

ಹಲ್ಲು ದೇಹದ ಒಂದು ಪ್ರಮುಖವಾದ ಅಂಗ. ನಿಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಗುತ್ತದೆ. ವ್ಯಕ್ತಿ ಸತ್ತಾಗಲೂ, ದೇಹ ಮಣ್ಣಿನಲ್ಲಿ ಕೊಳೆತಾಗಲೂ ಹಲ್ಲು ಮಾತ್ರ ಏನೂ ಆಗದೆ ಉಳಿದುಕೊಳ್ಳುತ್ತದೆ. ಆದರೆ ಹುಳುಕು ಎಂಬುದು ಒಂದೆರಡು ವರ್ಷಗಳಲ್ಲಿ ಆ ಗಟ್ಟಿ ಹಲ್ಲನ್ನು ಕರಗಿಸುವ ಶಕ್ತಿಯನ್ನು ಹೊಂಡಿದೆ.

ಬಾಯಿಯನ್ನು ಡ್ರೈ ಆಗಲು ಬಿಡಬೇಡಿ: ಹಲ್ಲು ಮೂಡುವ ಸಮಯದಿಂದಲೇ ವಾತಾವರಣದಲ್ಲಿರುವ ಸೂಕ್ಷ್ಮಾಣುಗಳು ಮಗುವಿನ ಬಾಯಿ ಹಾಗೂ ಜೊಲ್ಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಸದಾ ಬಾಯಿಯಲ್ಲಿ ಬಾಯಿಯಲ್ಲಿ ಸಿಹಿ, ಸಕ್ಕರೆ ಅಂಶ, ಆಮ್ಲ ಪದಾರ್ಥಗಳ ಅಂಶ, ಅಂಟು, ಹುಳಿ ಇಡುತ್ತೀರೋ ಆಗ ಬಾಯಿಯ ಪಿ.ಎಚ್ ಮಟ್ಟ ಕುಸಿಯುತ್ತದೆ ಆಗ ಹುಳುಕು ಆರಂಭವಾಗುತ್ತದೆ.

ಸಾಮಾನ್ಯದಿಂದ (7ಕ್ಕಿಂತ) ಕಡಿಮೆ ಆದರೆ ಬಾಯಿಯ ಆಮ್ಲೀಯ ಗುಣ ಹೆಚ್ಚುತ್ತದೆ. ಇದು ಕಡಿಮೆಯಾದಷ್ಟೂ ಆಮ್ಲೀಯ ಗುಣ ಹೆಚ್ಚುತ್ತದೆ. ರೋಗಾಣು ಜಾಗೃತಿಗೊಳ್ಳುತ್ತದೆ ಮತ್ತು ತನ್ನ ಕಾರ್ಯವಾದ ಹುಳುಕು ಹಿಡಿಯುವುದನ್ನು ಶುರು ಮಾಡುತ್ತದೆ. ಇದು ಹೆಚ್ಚಾಗಿ ಬಳಸುವ ದವಡೆ ಹಲ್ಲುಗಳನ್ನೇ ಹಾಳುಗೆಡವುತ್ತದೆ. ಏಕೆಂದರೆ ದವಡೆ ಹಲ್ಲಿನ ಸುತ್ತಳತೆ ಹೆಚ್ಚು. ಅಂಟು ಪದಾರ್ಥ ಕೂರಲು ಅನುಕೂಲವಾಗಿರುವಂತಹ ವಿಸ್ತೃತ ಜಾಗ. ಕಾರಣಗಳು ಹಲವಾರಿದ್ದರೂ ಮುಖ್ಯವಾದ ಕಾರಣವೇ ಹಲ್ಲಿನ ಬಗೆಗಿರುವ ನಿರ್ಲಕ್ಷ್ಯ ಮನೋಭಾವ. ಈ ಸಮಸ್ಯೆ ಮಹಿಳೆಯರಿಗೆ ಹೆಚ್ಚಾಗಿ ಕಂಡು ಬರುತ್ತದೆ.

ಹಲ್ಲು ತೆಗೆಸಲು ಹುಳುಕೇ ಕಾರಣ ಹಲ್ಲುಗಳನ್ನು ತೆಗೆಸಲು ಹುಳುಕೇ ಪ್ರಮುಖ ಕಾರಣ, ಹುಳುಕು ಹಲ್ಲು ಆಗಲು ಕಾರಣ ಬಹಳಷ್ಟಿದ್ದರೂ ರೋಗ ಬಾರದಂತೆ, ಬಂದರೂ ಹೆಚ್ಚಾಗದಂತೆ ಜಾಗ್ರತೆ ವಹಿಸುವ ಜವಾಬ್ದಾರಿ ನಮ್ಮ ಮೇಲಿದೆ. ರೋಗದ ಉಪಶಮನಕ್ಕಿಂತ ಅದನ್ನು ಬಾರದಂತೆ ತಡೆಗಟ್ಟುವುದೇ ಉತ್ತಮ ಮಾರ್ಗ. ಒಂದು ದವಡೆ ಹಲ್ಲು ಹುಳುಕಿನಿಂದ ಹಾಳಾದರೆ ಜಗಿಯುವ ಸಾಮರ್ಥ್ಯ ಶೇ 50 ಕಡಿಮೆಯಾದಂತೆ.

ಹಲ್ಲು ಹುಳುಕಾಗದಂತೆ ತಡೆಗಟ್ಟಲು ಏನು ಮಾಡಬೇಕು -ದಿನಕ್ಕೆರಡು ಬಾರಿ ಸರಿಯಾದ ಕ್ರಮದಲ್ಲಿ ಹಲ್ಲುಗಳನ್ನು ಸ್ವಚ್ಛಗೊಳಿಸಬೇಕು -ಸಿಹಿ ಪದಾರ್ಥಗಳ ಸೇವನೆ ಕಡಿಮೆ ಮಾಡಿ -ಹಲ್ಲಿನ ಆರೋಗ್ಯಕ್ಕೆ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ -ಹಲ್ಲು ಹುಳುಕಿನ ಸೂಚನೆ ಕಂಡು ಬಂದರೆ ದಂತವೈದ್ಯರನ್ನು ಭೇಟಿಯಾಗಿ

ಹುಳುಕು ಕಂಡುಹಿಡಿಯುವುದು ಹೇಗೆ? ಆಹಾರ ಸಿಕ್ಕಿ ಬೀಳುವುದು, ಕಚ್ಚುವಾಗ ನೋವು, ಸಂವೇದನೆ. ಹುಳಿ ಅಂಶದ ಪದಾರ್ಥಗಳಿಗೆ ಹಲ್ಲುಗಳು ಜುಂ ಎನ್ನುವುದು, ತಣ್ಣೀರು, ಗಾಳಿ, ಸಿಹಿ,

ಹಲ್ಲು ಹುಳುಕಾಗಲು ಕಾರಣಗಳೇನು? -ಹಲ್ಲಿನ ಸ್ವಚ್ಛತೆ ಬಗ್ಗೆ ಗಮನ ನೀಡದಿರುವುದು. -ಹಲ್ಲಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ -ಅತಿಯಾದ ಸಕ್ಕರೆ ಅಂಶವಿರುವ ಪದಾರ್ಥಗಳ ಸೇವನೆ -ಮುರಿದ ಹಲ್ಲು, ಸವೆದ, ವಕ್ರಹಲ್ಲು. -ಆಹಾರ ಕಣ ಸಿಕ್ಕಿ ಬೀಳುವ ಜಾಗಗಳು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:06 am, Sat, 18 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ