Custard Apple: ಮೆದುಳಿನ ಬೆಳವಣಿಗೆಗಾಗಿ ಮಕ್ಕಳಿಗೆ ತಿನ್ನಿಸಬೇಕು ಸೀತಾಫಲ ಅಥವಾ ಜಾನಕಿ ಫಲ
ಸೀತಾಫಲ ಮೂಲ ವೆಸ್ಟ್ ಇಂಡೀಸ್ ದ್ವೀಪ ಸಮೂಹ. ಸೀತಾಫಲ, ಶೀತಫಲ, ಜಾನಕಿ ಫಲ - ಇದು ಎಲ್ಲ ವಯೋಮಾನದವರಿಗೂ ಪ್ರಿಯವಾದ ಹಣ್ಣು. ತಂಪು ಗುಣ ಹೊಂದಿರುವುದರಿಂದ ಈ ಹಣ್ಣಿಗೆ ಶೀತಫಲ ಎಂದು ಕರೆಯುತ್ತಾರೆ. ಸೀತಾಫಲ ಹಣ್ಣಿನಲ್ಲಷ್ಟೇ ಅಲ್ಲ. ಅದರ ಗಿಡದಲ್ಲಿಯೂ ಅನೇಕ ಔಷಧೀಯ ಗುಣಗಳು ಅಡಕಗೊಂಡಿವೆ.
ಸೀತಾಫಲ ಮೂಲ ವೆಸ್ಟ್ ಇಂಡೀಸ್ ದ್ವೀಪ ಸಮೂಹ. ಸೀತಾಫಲ, ಶೀತಫಲ, ಜಾನಕಿ ಫಲ – ಇದು ಎಲ್ಲ ವಯೋಮಾನದವರಿಗೂ ಪ್ರಿಯವಾದ ಹಣ್ಣು. ತಂಪು ಗುಣ ಹೊಂದಿರುವುದರಿಂದ ಈ ಹಣ್ಣಿಗೆ ಶೀತಫಲ ಎಂದು ಕರೆಯುತ್ತಾರೆ. ಹಿಂದಿ ಭಾಷೆಯಲ್ಲಿ ಶರೀಫಾ ಎಂದೂ ಆಂಗ್ಲ ಭಾಷೆಯಲ್ಲಿ Custard Apple, Sugar apple ಎನ್ನುತ್ತಾರೆ. ಸೀತಾಫಲ ಹಣ್ಣಿನಲ್ಲಷ್ಟೇ ಅಲ್ಲ. ಅದರ ಗಿಡದಲ್ಲಿಯೂ ಅನೇಕ ಔಷಧೀಯ ಗುಣಗಳು ಅಡಕಗೊಂಡಿವೆ. ಇದು ಅತ್ಯಧಿಕ ಸಿ ಜೀವಸತ್ವ ಹೊಂದಿದ್ದು ಪೊಟ್ಯಾಷಿಯಂ, ಮೆಗ್ನೀಷಿಯಂ, ಕ್ಯಾಲ್ಸಿಯಂ, ಫೈಬರ್, ವಿಟಮಿನ್ ಬಿ -6 ಇರುವುದರಿಂದ ಇಡೀ ದೇಹಕ್ಕೆ ಚೈತನ್ಯ ನೀಡುತ್ತದೆ. ಸೀತಾಫಲ ತಿನ್ನುವಾಗ ಬೀಜಗಳನ್ನು ಹಲ್ಲಿನಿಂದ ಕಚ್ಚಬಾರದು. ಆಯಾಸ ಬಳಲಿಕೆ ದೂರ ಮಾಡಿ ಶರೀರಕ್ಕೆ ಚೈತನ್ಯ ನೀಡುವ ಈ ಹಣ್ಣನ್ನು ನೀವೂ ತಿನ್ನಿ ಮಕ್ಕಳಿಗೂ ತಿನ್ನಿಸಿ.
ಸೀತಾಫಲ ಹಣ್ಣಿನ ಔಷಧೀಯ ಗುಣಗಳು
* ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯಕ. * ಮೂಳೆಗಳಿಗೆ ಬಲ ನೀಡುತ್ತದೆ. * ಚರ್ಮಕ್ಕೆ ಕಾಂತಿ ನೀಡುತ್ತದೆ. * ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. * ಕಣ್ಣುಗಳ ಕಾಂತಿ ಹೆಚ್ಚುವುದು. * ಮೆದುಳಿನ ಬೆಳವಣಿಗೆಗಾಗಿ ಮಕ್ಕಳಿಗೆ ತಿನ್ನಿಸಬೇಕು. * ಹೃದಯಕ್ಕೆ ಬಲ ನೀಡುತ್ತದೆ… ಹೀಗೆ ಸೀತಾಫಲ ದಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳು ಇವೆ.
Nutmeg: ಜಾಕಾಯಿಗೆ ಇದೆ ಹತ್ತಾರು ಹೆಸರು, ಜೊತೆಗೆ ಹತ್ತಾರು ಆರೋಗ್ಯಕಾರಿ ಪ್ರಯೋಜನಗಳೂ ಇವೆ: ಅವು ಯಾವುವು ತಿಳಿಯೋಣ
ಸೀತಾಫಲ ಗಿಡದ ಉಪಯೋಗ * ಆಳವಾದ ಗಾಯ ಮತ್ತು ಗಾಯದಲ್ಲಿ ಹುಳ ಇದ್ದರೆ ಸೀತಾಫಲದ ಎಲೆಗಳನ್ನು ಅರೆದು ರಸ ಹಿಂಡಿದರೆ ಹುಳುಗಳು ನಾಶವಾಗಿ ಗಾಯ ವಾಸಿಯಾಗುತ್ತದೆ. * ಚರ್ಮರೋಗಗಳಲ್ಲಿ ಎಲೆ ರಸ ಉಪಯುಕ್ತವಾಗಿದೆ. * ಮಧುಮೇಹಕ್ಕೆ ಎಲೆಗಳ ಕಷಾಯ ಸೇವನೆ ಮಾಡಬಹುದು. * ಈ ಗಿಡದ ಚಕ್ಕೆಯ ಕಷಾಯ ಸೇವನೆ ಕೆಮ್ಮು ನಿವಾರಿಸುತ್ತದೆ. * ಕೂದಲು ಉದುರುತ್ತಿದ್ದರೆ ಸೀತಾಫಲ ಬೀಜಗಳ ಸಿಪ್ಪೆ ತೆಗೆದು ಒಳಗಿನ ತಿರುಳನ್ನು ಕುರಿ ಹಾಲಿನಲ್ಲಿ ಅರೆದು ತಲೆಗೆ ಹಚ್ಚಬಹುದು. ಮೊದಲು ಹೇನುಗಳ ನಿವಾರಣೆಗೆ ಬೀಜಗಳ ತಿರುಳನ್ನು ಉಪಯೋಗಿಸುತ್ತಿದ್ದರು.
ಇದನ್ನೂ ಓದಿ : International Yoga Day 2022 ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಒತ್ತಡ ಕಡಿಮೆ ಮಾಡಲು ಸಹಾಯಕವಾಗುವ ಯೋಗಭಂಗಿಗಳು
ಆರೋಗ್ಯದ ಬಗ್ಗೆ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ