Weight Loss: ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ?; ಈ 3 ತಪ್ಪು ಕಲ್ಪನೆಗಳನ್ನು ಬಿಟ್ಟುಬಿಡಿ

| Updated By: ಸುಷ್ಮಾ ಚಕ್ರೆ

Updated on: Oct 15, 2022 | 4:16 PM

Health Tips: ತೂಕ ಇಳಿಸಿಕೊಳ್ಳುವವರು ಏನೇನು ತಿನ್ನಬೇಕು, ಏನು ತಿನ್ನಬಾರದು ಎಂಬ ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ. ಅವುಗಳಲ್ಲಿ 3 ಮುಖ್ಯ ತಪ್ಪು ಕಲ್ಪನೆಗಳು ಇಲ್ಲಿವೆ.

Weight Loss: ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ?; ಈ 3 ತಪ್ಪು ಕಲ್ಪನೆಗಳನ್ನು ಬಿಟ್ಟುಬಿಡಿ
ಪ್ರಾತಿನಿಧಿಕ ಚಿತ್ರ
Follow us on

ನೀವು ಕೂಡ ತೂಕ ಇಳಿಸಿಕೊಳ್ಳಲು (Weight Loss) ಪ್ರಯತ್ನ ಪಡುತ್ತಿದ್ದೀರಾ? ಅದಕ್ಕಾಗಿ ಸಾಕಷ್ಟು ಡಯೆಟ್ (Diet) ಮಾಡುತ್ತಿದ್ದೀರಾ? ತೆಳ್ಳಗಾಗಬೇಕು ಎಂದು ನೀವು ಬಯಸಿದ್ದರೆ ಯಾರ್ಯಾರೋ ಕೊಡುವ ಸಲಹೆಗಳನ್ನೆಲ್ಲ ಅನುಸರಿಸುವ ಅಭ್ಯಾಸವನ್ನು ಮೊದಲು ಬಿಡುವುದು ಉತ್ತಮ. ಏಕೆಂದರೆ ತೂಕ ಇಳಿಸಿಕೊಳ್ಳುವವರು ಏನೇನು ತಿನ್ನಬೇಕು, ಏನು ತಿನ್ನಬಾರದು ಎಂಬ ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ. ಅವುಗಳಲ್ಲಿ 3 ಮುಖ್ಯ ತಪ್ಪು ಕಲ್ಪನೆಗಳು ಇಲ್ಲಿವೆ.

ತೂಕ ಇಳಿಸಿಕೊಳ್ಳಲು ಕಟ್ಟುನಿಟ್ಟಿನ ಆಹಾರ, ಕಡಿಮೆ ಕ್ಯಾಲೋರಿ, ವ್ಯಾಯಾಮ, ನಿಯಮಿತ ನಿದ್ರೆ, ಹಾನಿಕಾರಕ ಆಹಾರಗಳನ್ನು ತಿನ್ನದಿರುವುದು ಬಹಳ ಮುಖ್ಯ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ನಿಮ್ಮ ಆಹಾರದಲ್ಲಿ ತುಪ್ಪವನ್ನು ಸೇವಿಸಬಾರದು ಎಂದು ಅನೇಕ ವ್ಯಕ್ತಿಗಳು ಹೇಳುವುದನ್ನು ನೀವು ಕೇಳಿರಬಹುದು. ತುಪ್ಪವು ಕೊಬ್ಬನ್ನು ಒಳಗೊಂಡಿರುವುದರಿಂದ ಹೆಚ್ಚಿನವರು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುವಾಗ ತುಪ್ಪದಿಂದ ದೂರವಿರುತ್ತಾರೆ. ಆದರೆ ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ತುಪ್ಪವನ್ನು ತ್ಯಜಿಸುವುದು ನಿಜವಾಗಿಯೂ ಅಗತ್ಯವಿದೆಯೇ? ತೂಕ ಇಳಿಸಿಕೊಳ್ಳಲು ಬಯಸುವ ಹೆಚ್ಚಿನ ಜನರು ತಮ್ಮ ಕಾರ್ಬೋಹೈಡ್ರೇಟ್ ಸೇವನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಾರೆ, ವಿಶೇಷವಾಗಿ ಅನ್ನ ಸೇವನೆಯನ್ನು ನಿಲ್ಲಿಸುತ್ತಾರೆ. ಆಯುರ್ವೇದ ತಜ್ಞರಾದ ಡಾ. ಚೈತಾಲಿ ಆರೋಗ್ಯಕರ ತೂಕ ನಷ್ಟಕ್ಕೆ ಸಂಬಂಧಿಸಿದ ಮೂರು ಸಲಹೆಗಳನ್ನು ನೀಡಿದ್ದಾರೆ.

ಇದನ್ನೂ ಓದಿ: ತೂಕವನ್ನು ಕಳೆದುಕೊಳ್ಳಲು ನಿಂಬೆ ರಸ, ಜೇನುತುಪ್ಪ ಸೇವನೆ ಮಾಡುತ್ತಿದ್ದೀರಾ, ಸರಿಯಾದ ಮಾರ್ಗಗಳನ್ನು ತಿಳಿಯಿರಿ

1. ತುಪ್ಪ ಬಳಸುವುದರಿಂದ ತೂಕ ಹೆಚ್ಚಾಗುತ್ತದೆ:
ಉತ್ತಮವಾದ ತುಪ್ಪವೆಂದರೆ ಹಸುವಿನ ತುಪ್ಪ. ಆಯುರ್ವೇದದ ಪ್ರಕಾರ, ನಿಮ್ಮ ತೂಕ ಇಳಿಸಿಕೊಳ್ಳುವ ಸಮಯದಲ್ಲಿ ತುಪ್ಪವನ್ನು ಬಿಟ್ಟುಬಿಡುವುದು ಒಳ್ಳೆಯದಲ್ಲ. ಏಕೆಂದರೆ ಇದು ತೂಕವನ್ನು ಕಡಿಮೆ ಮಾಡಲು ಸೂಕ್ತವಾದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಪಿತ್ತ ದೋಷದ ಅಸಮತೋಲನಕ್ಕೆ ತುಪ್ಪ ಅತ್ಯುತ್ತಮವಾಗಿದೆ. ತುಪ್ಪವು ನಮ್ಮ ದೇಹದಲ್ಲಿರಬೇಕಾದ ಉತ್ತಮ ಕೊಬ್ಬಾಗಿದೆ. ಆದ್ದರಿಂದ ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುವಾಗ ತುಪ್ಪವನ್ನು ನಿಮ್ಮ ಆಹಾರದಲ್ಲಿ ಸೇರಿಸಲು ಚಿಂತಿಸಬೇಕಾಗಿಲ್ಲ.

2. ಅನ್ನವನ್ನು ತಿನ್ನದಿದ್ದರೆ ತೆಳ್ಳಗಾಗುತ್ತಾರೆ:
ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಅನ್ನವನ್ನು ತ್ಯಜಿಸಬೇಕಾಗಿಲ್ಲ. ನೀವು ಎಷ್ಟು ಅನ್ನವನ್ನು ಜೀರ್ಣಿಸಿಕೊಳ್ಳಬಹುದು ಮತ್ತು ಯಾವ ಅಕ್ಕಿಯು ನಿಮಗೆ ಹೆಚ್ಚು ಪೌಷ್ಟಿಕಾಂಶವನ್ನು ನೀಡುತ್ತದೆ ಎಂಬುದು ಮುಖ್ಯ. ಅಕ್ಕಿ ನಿಮಗೆ ಉತ್ತಮ ಕಾರ್ಬೋಹೈಡ್ರೇಟ್‌, ಪ್ರೋಟೀನ್ ಮತ್ತು ಫೈಬರ್‌ಗಳನ್ನು ಒದಗಿಸುತ್ತದೆ.

3. ಆಹಾರದಲ್ಲಿ ಹೆಚ್ಚು ಮೊಸರು ಬಳಸಿದರೆ ಹೆಚ್ಚು ತೂಕ ಇಳಿಯುತ್ತದೆ:
ಮೊಸರು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ದಿನನಿತ್ಯದ ಮೊಸರು ಸೇವನೆಯು ತೂಕವನ್ನು ಹೆಚ್ಚಿಸುತ್ತದೆ. ಏಕೆಂದರೆ ಇದನ್ನು ಜೀರ್ಣಿಸಿಕೊಳ್ಳಲು ತುಂಬಾ ಕಷ್ಟ. ಮೊಸರಿನ ಗುಣಗಳು ಕಫ ದೋಷವನ್ನು ಹೆಚ್ಚಿಸುತ್ತವೆ, ಇದು ತೂಕದ ಬೆಳವಣಿಗೆಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಗಂಟೆಗಳ ಕಾಲ ಹಸಿವಿನಿಂದ ಇರುವುದರಿಂದ ತೂಕ ಕಡಿಮೆಯಾಗುವುದಿಲ್ಲ

ಹಾಗೇ, ನೀವು ತೆಳ್ಳಗಾಗಬೇಕೆಂದರೆ ತುಂಬಾ ವ್ಯಾಯಾಮ ಮಾಡುವ ಅಗತ್ಯವಿಲ್ಲ. ಬೇಗ ತೆಳ್ಳಗಾಗಬೇಕು ಎಂದು ಹೆಚ್ಚಿನ ಪ್ರಮಾಣದ ವ್ಯಾಯಾಮವನ್ನು ಮಾಡಿದರೆ ತೂಕ ಇಳಿಕೆಗಿಂತ ಆಯಾಸ ಹೆಚ್ಚುತ್ತದೆ. ಕೇವಲ ತೂಕ ಇಳಿಕೆಗೆ ಮಾತ್ರ ಗಮನಕೊಡಬೇಡಿ. ತೂಕ ಇಳಿಸಿಕೊಳ್ಳಬೇಕೆಂದು ನಿದ್ರೆಯನ್ನು ಬಿಡಬೇಡಿ. ದಿನಕ್ಕೆ 7ರಿಂದ 8 ಗಂಟೆ ನಿದ್ರೆ ಮಾಡುವುದು ಬಹಳ ಮುಖ್ಯ.

ಆರೋಗ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ