ತೆಳ್ಳಗೆ, ಆರೋಗ್ಯಯುತವಾಗಿ ಇರಬೇಕೆಂದು ಇರಬೇಕೆಂದು ಯಾರಿಗೆ ತಾನೇ ಇಷ್ಟವಿರುವುದಿಲ್ಲ? ತೆಳ್ಳಗಾಗಬೇಕೆಂದು ಜಿಮ್, ಡಯೆಟ್, ವ್ಯಾಯಾಮ ಎಂದು ಸಾಕಷ್ಟು ಪ್ರಯತ್ನ ಪಡುವವರ ಸಂಖ್ಯೆಯೇ ಕಡಿಮೆಯಿಲ್ಲ. ತೂಕವನ್ನು ಕಳೆದುಕೊಳ್ಳಬೇಕೆಂದು ಅನೇಕ ಜನರು ಹೊಟ್ಟೆ ತುಂಬ ಊಟ ಮಾಡುವ ಬದಲು ಜ್ಯೂಸ್ ಮತ್ತು ಸ್ಮೂಥಿಗಳನ್ನು ಸೇವಿಸುತ್ತಾರೆ. ಜ್ಯೂಸ್, ಸ್ಮೂಥಿಗಳಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ ಎಂಬುದು ನಿಜವಾದರೂ ಅದರಿಂದ ಅನ್ನ, ತಿಂಡಿ, ರೊಟ್ಟಿ ಮುಂತಾದ ಘನ ಆಹಾರಗಳನ್ನು ತಿನ್ನುವುದರಿಂದ ಸಿಗುವ ಪೌಷ್ಠಿಕಾಂಶವಾಗಲಿ, ಶಕ್ತಿಯಾಗಲಿ ಸಿಗುವುದಿಲ್ಲ. ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಇದು ಉತ್ತಮ ಮಾರ್ಗವೆಂದು ತೋರುತ್ತದೆಯಾದರೂ ಇದು ಸರಿಯಾದ ಕ್ರಮವಲ್ಲ ಎಂದು ಪೌಷ್ಟಿಕಾಂಶ ಸಲಹೆಗಾರ ರುಚಿ ಶರ್ಮಾ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಈಟ್ ಫಿಟ್ ರಿಪೀಟ್ ಎಂಬ ಇನ್ಸ್ಟಾಗ್ರಾಂ ಪೇಜಿನಲ್ಲಿ ಡಯೆಟ್ ತಜ್ಞೆ ರುಚಿ ಶರ್ಮಾ ಪೋಸ್ಟ್ ಮಾಡಿದ್ದಾರೆ. ನನ್ನ ಗ್ರಾಹಕರೊಬ್ಬರು ಗಟ್ಟಿ ಆಹಾರವನ್ನು ತಿನ್ನುವುದರಿಂದ ನಾನು ದಪ್ಪಗಾಗುತ್ತೇನೆ ಎಂದು ಭಾವಿಸಿದ್ದಳು. ಆದ್ದರಿಂದ, ಅವರು ದಿನವಿಡೀ ಶೇಕ್ಸ್ ಮತ್ತು ಜ್ಯೂಸ್‌ಗಳನ್ನು ಸೇವಿಸುತ್ತಿದ್ದಳು. ಆದರೆ, ಏಳು ದಿನಗಳ ನಂತರ, ಆಕೆ ಏನು ನಿರೀಕ್ಷಿಸಿದ್ದರೋ ಅದಕ್ಕೆ ವಿರುದ್ಧವಾಗಿ ನಡೆಯಿತು. ಹೀಗೆ ಜ್ಯೂಸ್, ಶೇಕ್ಸ್ ಕುಡಿಯಲು ಆರಂಭಿಸಿದ ಒಂದೇ ವಾರದಲ್ಲಿ ಆಕೆ ಸಿಕ್ಕಾಪಟ್ಟೆ ವೀಕ್ನೆಸ್ನಿಂದ ಬಳಲತೊಡಗಿದಳು. ಅಲ್ಲದೆ, ಇದರಿಂದ ಆಕೆಯ ಒತ್ತಡ ಇನ್ನಷ್ಟು ಹೆಚ್ಚಾಗಿ ಮೊದಲಿಗಿಂತಲೂ 100 ಗ್ರಾಂ ತೂಕವನ್ನು ಹೆಚ್ಚಿಸಿಕೊಂಡಳು. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದವಳು ತೂಕವನ್ನು ಹೆಚ್ಚಿಸಿಕೊಳ್ಳುವಂತಾಯಿತು.
ಜ್ಯೂಸ್ನಲ್ಲಿ ಕ್ಯಾಲೊರಿಗಳಿರುವುದಿಲ್ಲ ಎಂಬ ನಂಬಿಕೆಯನ್ನು ತಳ್ಳಿಹಾಕಿದ ರುಚಿ ಶರ್ಮಾ, ನಾವು ಕುಡಿಯುವ ಜ್ಯೂಸ್ ಮತ್ತು ಶೇಕ್ಸ್ಗಳಲ್ಲಿ ಕ್ಯಾಲೊರಿಗಳಿರುತ್ತವೆ. ಹೆಚ್ಚುವರಿ ಕ್ಯಾಲೊರಿಗಳನ್ನು ಸೇವಿಸುವುದರಿಂದ ನಾವು ದಪ್ಪಗಾಗುತ್ತೇವೆ. ಇದಲ್ಲದೆ, ಕ್ಯಾಲೊರಿ ಇರುವ ಜ್ಯೂಸ್ ಅನ್ನು ಸೇವಿಸುವುದರಿಂದ ದಪ್ಪಗಾಗುವುದು ಮಾತ್ರವಲ್ಲದೆ ಬೇಗ ಹಸಿವು ಕೂಡ ಆಗುತ್ತದೆ. ಆಗ ಏನಾದರೂ ಘನ ಆಹಾರವನ್ನು ತಿನ್ನಬೇಕೆನಿಸುತ್ತದೆ. ಹೀಗಾಗಿ, ಸಂಪೂರ್ಣ ದ್ರವ ಆಹಾರ ಸೇವಿಸುವುದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ರುಚಿ ಶರ್ಮಾ ಎಚ್ಚರಿಸಿದ್ದಾರೆ.
ತೂಕ ಇಳಿಸಿಕೊಳ್ಳಲು ಏನು ಮಾಡಬೇಕು?:
ತೂಕ ಇಳಿಸಿಕೊಳ್ಳಲು ಕೇವಲ ದ್ರವ ಪದಾರ್ಥವನ್ನು ಸೇವಿಸುವುದೊಂದೇ ಪರಿಹಾರವಲ್ಲ. ಅದರ ಬದಲಾಗಿ ಆರೋಗ್ಯಕರ ಮತ್ತು ಪೋಷಕಾಂಶಗಳು ಹೆಚ್ಚಾಗಿರುವ ಆಹಾರವನ್ನು ಸೇವಿಸಿರಿ. ಸಾಕಷ್ಟು ತರಕಾರಿಗಳನ್ನು ಸೇವಿಸುವುದರಿಂದ ನೀವು ಹೆಚ್ಚು ಕಾಲ ಹಸಿವಿನಿಂದ ದೂರ ಇರಬಹುದು.
ಹಾಗೇ, ಹಸಿವಾದಾಗ ಜ್ಯೂಸ್ ಕುಡಿಯುವ ಬದಲು ಹಣ್ಣುಗಳನ್ನು ತಿನ್ನಿ. ಎರಡು ಕಿತ್ತಳೆಗಳು 60-100 ಕ್ಯಾಲೊರಿಗಳನ್ನು ಹೊಂದಿದ್ದು ಅದು ಒಬ್ಬ ವ್ಯಕ್ತಿಯ ಹಸಿವನ್ನು ನೀಗಿಸುತ್ತದೆ. ಆದರೆ 180 ಕ್ಯಾಲೊರಿಗಳನ್ನು ಹೊಂದಿರುವ ಒಂದು ಗ್ಲಾಸ್ ಕಿತ್ತಳೆ ರಸವನ್ನು ಸೇವಿಸಿದರೆ ನಿಮ್ಮ ಹೊಟ್ಟೆ ತುಂಬುವುದಿಲ್ಲ. ಪ್ರೋಟೀನ್ ಶೇಕ್ಸ್ ಕುಡಿಯುವ ಬದಲು ಪ್ರೋಟೀನ್ ಭರಿತ ಆಹಾರವನ್ನು ತಿನ್ನಲು ಪ್ರಯತ್ನಿಸಿ.
ಇದನ್ನೂ ಓದಿ: Health Tips: ಮೊಟ್ಟೆಗಿಂತಲೂ ಹೆಚ್ಚು ಪ್ರೋಟೀನ್ ಇರುವ 5 ಸಸ್ಯಾಹಾರಿ ಆಹಾರಗಳಿವು
Health Tips: ನಿದ್ರೆಯಿಂದ ಖಿನ್ನತೆ ಹೆಚ್ಚಾಗುತ್ತಾ?; ನಿದ್ರೆಗೂ ಮಾನಸಿಕ ಆರೋಗ್ಯಕ್ಕೂ ಇರುವ ನಂಟೇನು?
Published On - 2:45 pm, Sat, 11 December 21