ಚಳಿಗಾಲವು ಶುರುವಾಗಿದೆ. ಚಳಿಗಾಲದಲ್ಲಿ ಎಣ್ಣೆತಿಂಡಿಗಳು, ಕೊಬ್ಬಿನ ಅಂಶವಿರುವ ತಿಂಡಿಗಳನ್ನು ತಿನ್ನಬೇಕೆಂಬ ಬಯಕೆಯಾಗುವುದು ಸಾಮಾನ್ಯ.
ಆದರೆ, ಚಳಿಗಾಲದಲ್ಲಿ ನಿಮ್ಮ ಬಾಯಿ ಚಪಲವನ್ನು ಕೊಂಚ ಕಂಟ್ರೋಲ್ ಮಾಡದಿದ್ದರೆ ತೂಕ ಹೆಚ್ಚಾಗಿ, ಆರೋಗ್ಯ ಏರುಪೇರಾಗುವ ಸಾಧ್ಯತೆಗಳೂ ಇರುತ್ತವೆ.
ಈ ಚಳಿಗಾಲದಲ್ಲಿ ನಿಮ್ಮ ಊಟದಲ್ಲಿ ಪಾಲಕ್, ಕ್ಯಾರೆಟ್, ಹಸಿರು ಬಟಾಣಿ, ಹೂಕೋಸು ಮತ್ತು ಮೂಲಂಗಿಯಂತಹ ವರ್ಣರಂಜಿತ, ತಾಜಾ ಮತ್ತು ಆರೋಗ್ಯಕರ ತರಕಾರಿಗಳನ್ನು ಬಳಸಿದರೆ ಸಾಕಷ್ಟು ಪ್ರಯೋಜನಗಳಿವೆ.
ಕ್ಯಾರೆಟ್ ಉತ್ಕರ್ಷಣ ನಿರೋಧಕಗಳು, ಪೊಟ್ಯಾಸಿಯಮ್, ವಿಟಮಿನ್ ಕೆ, ಬೀಟಾ-ಕ್ಯಾರೋಟಿನ್ ಮತ್ತು ಫೈಬರ್‌ನ ಅತ್ಯುತ್ತಮ ಮೂಲವಾಗಿದೆ.
ತಾಜಾ ಕ್ಯಾರೆಟ್‌ಗಳಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದ್ದು ಅದು ನೀರಿನ ಧಾರಣ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ಈ ಕ್ಯಾರೆಟ್ ತಿನ್ನುವುದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ನಿಮಗೆ ಗೊತ್ತೇ?
ಬೀಟಾ-ಕ್ಯಾರೋಟಿನ್ ಎಂಬ ಉತ್ಕರ್ಷಣ ನಿರೋಧಕದಿಂದಾಗಿ ಕ್ಯಾರೆಟ್‌ಗಳು ಆರೆಂಜ್ ಬಣ್ಣದಲ್ಲಿರುತ್ತವೆ. ಇದನ್ನು ದೇಹವು ಸುಲಭವಾಗಿ ವಿಟಮಿನ್ ಎ ಆಗಿ ಪರ್ತಿವರ್ತನೆ ಮಾಡಿಕೊಳ್ಳುತ್ತದೆ.
ವಿಟಮಿನ್ ಎ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ. ಇದು ನಮ್ಮ ಒಳಾಂಗಗಳ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆ್ಯಂಟಿಆಕ್ಸಿಡೆಂಟ್ ಆಗಿರುವ ಬೀಟಾ ಕ್ಯಾರೋಟಿನ್ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅಧಿಕ ರಕ್ತದೊತ್ತಡದಂತಹ ಸ್ಥೂಲಕಾಯದ ಹಾನಿಕಾರಕ ಪರಿಣಾಮಗಳಿಂದ ದೇಹವನ್ನು ರಕ್ಷಿಸುತ್ತದೆ.
ಕ್ಯಾರೆಟ್ ನೈಸರ್ಗಿಕವಾಗಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವುದರಿಂದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕ್ಯಾರೆಟ್ ತಿನ್ನುವುದರಿಂದ ಒಂದೆರಡೇ ದಿನದಲ್ಲಿ ಫಲಿತಾಂಶ ಸಿಗುವುದಿಲ್ಲ. ಈ ತರಕಾರಿ ನಿಮ್ಮ ದೇಹದ ಉತ್ಕರ್ಷಣ ನಿರೋಧಕ ಪ್ರೊಫೈಲ್ ಮತ್ತು ಆಹಾರವನ್ನು ಸುಧಾರಿಸುತ್ತದೆ.
ಕ್ಯಾರೆಟ್‌ಗಳನ್ನು ತಡರಾತ್ರಿಯ ತಿಂಡಿಯಾಗಿ ಅಥವಾ ಬೆಳಿಗ್ಗೆ ಮಧ್ಯದಲ್ಲಿ ಚಿಪ್ಸ್‌ನಂತಹ ಹೆಚ್ಚಿನ ಕ್ಯಾಲೋರಿ ಅಪೆಟೈಸರ್‌ಗಳಿಗೆ ಕಡಿಮೆ ಕ್ಯಾಲೋರಿ ಪರ್ಯಾಯವಾಗಿ ಸೇವಿಸಬಹುದು.
ಕ್ಯಾರೆಟ್ ತೂಕ ಇಳಿಸಲು ಸಹಾಯ ಮಾಡುವುದರ ಜೊತೆಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಕ್ಯಾರೆಟ್ ಅನ್ನು ನಿಮ್ಮ ಊಟದಲ್ಲಿ ಸೇರಿಸಿಕೊಳ್ಳಬಹುದು ಅಥವಾ ಸಲಾಡ್‌ಗಳಲ್ಲಿ ಸೇವಿಸಬಹುದು.